ಕರ್ನಾಟಕ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮುಂಭಾಗ ಕೆಂಪೇಗೌಡರ ಪ್ರತಿಮೆ ನಿರ್ಮಾಣ

Pinterest LinkedIn Tumblr

anaಬೆಂಗಳೂರು, ಏ.19- ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮುಂಭಾಗ ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಅಶ್ವಾರೂಢ ಪ್ರತಿಮೆ ನಿರ್ಮಾಣ ಮಾಡುವ ಸಂಬಂಧ ರಾಜ್ಯದಿಂದ ನಿಯೋಗ ಬಂದರೆ ಕೇಂದ್ರದಿಂದ ಎಲ್ಲ ರೀತಿಯ ನೆರವು, ಸಹಕಾರ ನೀಡಲಾಗುವುದು ಎಂದು ಕೇಂದ್ರ ಸಚಿವ ಅನಂತ್‌ಕುಮಾರ್ ಭರವಸೆ ನೀಡಿದ್ದಾರೆ. ಹನುಮಂತನಗರ ಸಹಕಾರಿ ಬ್ಯಾಂಕ್‌ನ ಸುವರ್ಣ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೆಂಪೇಗೌಡರ ಹೆಸರು ಇತಿಹಾಸದ ಪುಟದಲ್ಲಿ ಶಾಶ್ವತವಾಗಿ ಇರಬೇಕೆಂಬುದು ಎಲ್ಲರ ಅಭಿಲಾಷೆ. ವಿಮಾನ ನಿಲ್ದಾಣದ ಮುಂಭಾಗ ಅವರ ಅಶ್ವಾರೂಢ ಪ್ರತಿಮೆ ಸ್ಥಾಪಿಸಬೇಕೆಂಬುದು ಬಹುತೇಕರ ಒತ್ತಾಸೆ.

ಮುಖಂಡ ಆರ್.ಅಶೋಕ್ ನೇತೃತ್ವದಲ್ಲಿ ದೆಹಲಿಗೆ ನಿಯೋಗ ಬಂದರೆ ನಾಗರಿಕ ವಿಮಾನಯಾನ ಸಚಿವ ಗಣಪತಿ ರಾಜು ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಲಾಗುವುದು. ಇದಕ್ಕಾಗಿ ಕೇಂದ್ರದಿಂದ ನಾವು ಎಲ್ಲ ರೀತಿಯ ನೆರವು ಕೊಡಿಸಲು ಸಿದ್ಧರಿದ್ದೇವೆ ಎಂದು ಘೋಷಿಸಿದರು. ಬೆಂಗಳೂರು ಮಾತ್ರವಲ್ಲದೆ ದೆಹಲಿಯ ಪ್ರಮುಖ ಸ್ಥಳವೊಂದರಲ್ಲಿ ಕೆಂಪೇಗೌಡರ ಪ್ರತಿಮೆ ಸ್ಥಾಪನೆ ಮಾಡಬೇಕು. ಈ ಸಂಬಂಧಪಟ್ಟ ಸಚಿವರ ಜತೆ ಮಾತುಕತೆ ನಡೆಸಲು ಸಿದ್ಧ. ನಾಡಪ್ರಭು ಅವರ ಕೊಡುಗೆ ಕರ್ನಾಟಕಕ್ಕೆ ಮಾತ್ರವಲ್ಲದೆ ದೆಹಲಿ ಯಲ್ಲೂ ಪಸರಿಸಬೇಕು. ಇದಕ್ಕಾಗಿ ಹನುಮಂತನಗರ ಸದಸ್ಯರು ಅಶೋಕ್ ನೇತೃತ್ವದಲ್ಲಿ ನಿಯೋಗ ಕರೆದುಕೊಂಡು ಬರಲಿ ಎಂದರು.

ಮಾತುಕತೆಗೆ ಸಿದ್ಧ:

ಕೇಂದ್ರ ಸರ್ಕಾರ ಇತ್ತೀಚೆಗೆ ಸಹಕಾರಿ ಬ್ಯಾಂಕ್‌ಗಳ ಆದಾಯವನ್ನು ನೇರ ತೆರಿಗೆ ಕೋಡ್‌ನಿಂದ ಹೊರಗಿಟ್ಟಿದೆ. ಇದರಿಂದ ಸಹಕಾರಿ ಸಂಘಗಳಿಗೆ ಭಾರೀ ಹೊಡೆತ ಬೀಳಲಿದೆ. ಈ ಸಂಬಂಧ ಕೇಂದ್ರ ಹಣಕಾಸು ಸಚಿವ ಅರುಣ್ ಜೈಟ್ಲಿ ಮತ್ತು ರಾಜ್ಯ ಸಚಿವ ಜಯಂತ್ ಸಿನ್ಹ ಜತೆ ಮಾತುಕತೆ ನಡೆಸುವುದಾಗಿ ಹೇಳಿದರು. ಆದಿಚುಂಚನಗಿರಿ ಪೀಠಾಧ್ಯಕ್ಷ ರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಜಗತ್ತಿನ ಅನೇಕ ರಾಷ್ಟ್ರಗಳು ಆರ್ಥಿಕ ಕುಸಿತಕ್ಕೆ ಒಳಗಾದವು. ಭಾರತಕ್ಕೆ ಮಾತ್ರ ಇದರಿಂದ ಯಾವುದೇ ಪರಿಣಾಮ ಬೀರಲಿಲ್ಲ. ಏಕೆಂದರೆ, ನಮ್ಮಲ್ಲಿ ಜನರು ಬ್ಯಾಂಕ್‌ಗಳ ಮೇಲಿಟ್ಟಿರುವ ವಿಶ್ವಾಸ, ಪರಸ್ಪರ ಸಹಕಾರ ತತ್ವವೇ ಕಾರಣ ಎಂದು ಪ್ರಶಂಸಿಸಿದರು.

ಸ್ಫಟಿಕ ಪುರಿ ಶ್ರೀಗಳು ಮಾತ ನಾಡಿ, ಇಂದು ಅನೇಕ ರಾಷ್ಟ್ರಗಳು ದಿವಾಳಿಯತ್ತ ಸಾಗಿವೆ. ಆದರೆ, ಭಾರತಕ್ಕೆ ಮಾತ್ರ ಆರ್ಥಿಕ ಕುಸಿತ ಎಳ್ಳಷ್ಟೂ ಸೋಕಿಲ್ಲ. ಇದಕ್ಕೆ ಪ್ರತಿ ಯೊಬ್ಬರ ಸಹಕಾರ ಕಾರಣ ಎಂದರು. ಮಾಜಿ ಉಪಮುಖ್ಯಮಂತ್ರಿ ಆರ್.ಅಶೊಕ್ ಸೇರಿದಂತೆ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Write A Comment