ಕರ್ನಾಟಕ

ಮನೆಗಳ್ಳನ ಸೆರೆ 30 ಲಕ್ಷ ಮಾಲು ವಶ

Pinterest LinkedIn Tumblr

kallaಬೆಂಗಳೂರು,ಏ.೧೯-ಐಷಾರಾಮಿ ಜೀವನ ನಡೆಸಲು ಮನೆಕಳವು ಮಾಡುತ್ತಿದ್ದ ಕಳ್ಳ ಕಿರಣ್‌ನನ್ನು ಬಂಧಿಸಿರುವ ಸಿಸಿಬಿ ಪೊಲೀಸರು 30 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಬಳ್ಳಾರಿ ಮೂಲದ ಚಿಕ್ಕಬಾಣಾವರದ ಕಿರಣ್(೨೫)ನಿಂದ ವಿವಿಧ ಹೆಸರಾಂತ ಫೈನಾನ್ಸ್ ಕಂಫನಿಗಳಲ್ಲಿ ಅಡಮಾನವಿಟ್ಟಿದ್ದ ೩೦ ಲಕ್ಷ ಮೌಲ್ಯದ ೯೨೨ ಗ್ರಾಂತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮಾದನಾಯಕನಹಳ್ಳಿಯ ಮನೆಯೊಂದರಲ್ಲಿ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ್ದ ಆರೋಪಿಯು ಮಣಪ್ಪುರಂ,ಮುತ್ತೂಟ್,ಮಿನಿ, ಪಾಪ್ಯುಪರ್, ಚೆಮ್ ಹಾಗೂ ಐಐಎಫ್‌ಎಲ್ ಫೈನಾನ್ಸ್‌ಗಳಲ್ಲಿ ಅಡವಿಟ್ಟು ಐಷಾರಾಮಿ ಜೀವನ ನಡೆಸುತ್ತಿದ್ದನು ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಶರತ್‌ಚಂದ್ರ ಅವರು ತಿಳಿಸಿದ್ದಾರೆ.
ಆರೋಪಿಯ ಖಚಿತ ಮಾಹಿತಿ ಆಧರಿಸಿ ಚಿಕ್ಕಬಾಣಾವರದ ತಿಮ್ಮಕ್ಕನತೋಟದ ಮನೆಯ ಮೇಲೆ ದಾಳಿ ನಡೆಸಿ ಬಂಧಿಸಿ ಶೋಧ ನಡೆಸಿದಾಗ ಅಡವಿಟ್ಟಿದ್ದ ಚಿನ್ನಾಭರಣಗಳ ರಸೀತಿಗಳು ದೊರೆತಿದ್ದು ಅವುಗಳಿಂದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಡಿಸಿಪಿ ಗಿರೀಶ್ ಅವರ ನೇತೃತ್ವದಲ್ಲಿ ಸಿಸಿಬಿ ಪೊಲೀಸರು ದಾಳಿನಡೆಸಿದ್ದಾರೆ.

Write A Comment