ಕರ್ನಾಟಕ

ವೈದ್ಯರಾದವರಿಗೆ ಹಣಕ್ಕಿಂತ ಸೇವೆಯೇ ಮುಖ್ಯ- ಪಾಟೀಲ್

Pinterest LinkedIn Tumblr

patilಬೆಂಗಳೂರು, ಏ. ೧೯- ವೈದ್ಯರಾದವರಿಗೆ ಹಣಕ್ಕಿಂತ ಸೇವೆಯೇ ಮುಖ್ಯ. ಚಿಕಿತ್ಸೆ ಪಡೆದು ಗುಣಮುಖರಾದ ರೋಗಿ ಸಲ್ಲಿಸುವ ಕೃತಜ್ಞತೆ ಪ್ರೀತಿಗಿಂತ ದೊಡ್ಡದು ಬೇರೆ ಇಲ್ಲ ಎಂದು ಸ್ಪರ್ಶ್ ಆಸ್ಪತ್ರೆಯ ಮುಖ್ಯಸ್ಥ ಡಾ. ಶರಣ್ ಶಿವರಾಜ್ ಪಾಟೀಲ್ ಹೇಳಿದರು.
ನಗರದಲ್ಲಿಂದು ವಿಷನ್ ಮೆಡಿಕಲ್ ಆಕಾಡೆಮಿ ಆಯೋಜಿಸಿದ್ದ ‘ಒಂದು ಸಂಸ್ಥೆ ೭೦೦ ವೈದ್ಯರು’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮತ್ತೊಬ್ಬರಿಗೆ ಸಹಾಯ ಮಾಡುವುದೇ ಜೀವನದ ಬಹುದೊಡ್ಡ ಉಡುಗೊರೆ. ವೈದ್ಯರಿಗೆ ಇಂತಹ ಸಹಾಯ ಮಾಡುವ ಅವಕಾಶ ಸಿಕ್ಕಿರುವುದು ನಿಜಕ್ಕೂ ಒಂದು ಸೌಭಾಗ್ಯ ಎಂದರು.
ವೈದ್ಯರಾದವರು ಸೇವೆಗೆ ಗಮನ ನೀಡಬೇಕು. ಹಣಕ್ಕಲ್ಲ. ಸೇವೆಯ ಮುಂದೆ ಹಣ ಏನೇನೂ ಅಲ್ಲ ಎಂದರು.
ಒಬ್ಬ ರೋಗಿಯ ನೋವನ್ನು ತೆಗೆದುಕೊಂಡು ಆತನ ಸಮಸ್ಯೆಗಳಿಗೆ ಪರಿಹಾರ ದೊರಕಿಸಿದಾಗ ಸಿಗುವ ಸಂತೋಷ ಬೇರೆ ಯಾವುದರಲ್ಲೂ ಇಲ್ಲ ಎಂದರು.
ವೈದ್ಯರಾದವನು ರೋಗಿಯನ್ನು ಪ್ರೀತಿಸಬೇಕು. ಆತನ ಬಗ್ಗೆ ಕಾಳಜಿ ವಹಿಸಬೇಕು. ಆಗ ಜನ ಸಹ ವೈದ್ಯರ ಬಗ್ಗೆ ಪ್ರೀತಿ ಅಭಿಮಾನ ತೋರುತ್ತಾರೆ ಎಂದರು.
ಪ್ರತಿಯೊಬ್ಬರಿಗೂ ಒಳ್ಳೆಯ ನಡವಳಿಕೆ ಅತೀ ಅವಶ್ಯ. ಒಳ್ಳೆಯ ನಡವಳಿಕೆ ಇದ್ದರೆ ಎಲ್ಲವನ್ನು ಸಾಧಿಸಬಹುದು ಎಂದರು.
ವೈದ್ಯರಿಗೆ ಸಮಾಜದಲ್ಲಿ ಒಂದು ದೊಡ್ಡ ಸ್ಥಾನಮಾನವಿದೆ. ಅದಕ್ಕೆ ತಕ್ಕಂತೆ ಉತ್ತಮ ನಡವಳಿಕೆ, ಸೇವಾ ಮನೋಭಾವವನ್ನು ರೂಢಿಸಿಕೊಳ್ಳಬೇಕು ಎಂದು ಅವರು ವೈದ್ಯ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಜೀವನದಲ್ಲಿ ಕೃತಜ್ಞತೆಗಿಂತ ದೊಡ್ಡ ಮಾನವೀಯ ಮೌಲ್ಯ ಬೇರೆ ಇಲ್ಲ. ನಾವು ಸದಾ ಸಮಾಜ, ತಂದೆ- ತಾಯಿ ಹಾಗೂ ಶಿಕ್ಷಕರಿಗೆ ಕೃತಜ್ಞರಾಗಿರಬೇಕು ಎಂದು ಡಾ. ಶರಣ್ ಶಿವರಾಜ್ ಪಾಟೀಲ್ ಹೇಳಿದರು.
ಈ ಸಂದರ್ಭದಲ್ಲಿ ತರಬೇತಿ ಪಡೆದು ವೈದ್ಯಕೀಯ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಿರುವ ವೈದ್ಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಮಾತಾನಾಡಿದ ಇಂಡಿಯನ್ ಅಕಾಡೆಮಿಯ ಅಧ್ಯಕ್ಷ ರಾಮ್ ಮನೋಹರ್ ರೆಡ್ಡಿ, ವಿಷನ್ ಅಕಾಡೆಮಿ ೨೦೧೦ರಲ್ಲಿ ಸ್ಥಾಪನೆಯಾಗಿದ್ದು, ಇಲ್ಲಿ ತರಬೇತಿ ಪಡೆದ ೭೦೦ ಮಂದಿ ವಿದ್ಯಾರ್ಥಿಗಳು ವಿವಿಧ ವೈದ್ಯಕೀಯ ಕಾಲೇಜುಗಳಲ್ಲಿ ವೈದ್ಯ ಪದವಿ ಓದುತ್ತಿದ್ದಾರೆ ಎಂದರು. ಸಮಾರಂಭದಲ್ಲಿ ರಾಜ್ಯ ಆಹಾರ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ರೋಹಿಣಿ ಸಿಂಧೂರಿ, ತೆಲುಗು ವಿಜ್ಞಾನ ಸಮಿತಿಯ ಅಧ್ಯಕ್ಷ ಡಾ. ಎ. ರಾಧಾಕೃಷ್ಣರಾಜು, ಶಿಕ್ಷಣತಜ್ಞ ಪುತ್ತುರಾಯ, ಐಸಾಕ್‌ನ ಮಾಜಿ ಸಿಇಒ ಡಿ. ರವಣ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Write A Comment