ಕರ್ನಾಟಕ

ಸಂಪುಟ ಪುನಾರಚನೆಗೆ ಬ್ರೇಕ್; ಬರ ಪರಿಹಾರಕ್ಕೆ ಆದ್ಯತೆ ನೀಡಿ: ಸಿಎಂಗೆ ದಿಗ್ವಿಜಯ್ ಸಿಂಗ್

Pinterest LinkedIn Tumblr

diggiಬೆಂಗಳೂರು: ರಾಜ್ಯ ಸಚಿವ ಸಂಪುಟ ಪುನಾರಚನೆಗೆ ಸದ್ಯಕ್ಕೆ ಬ್ರೇಕ್ ಬಿದ್ದಿದ್ದು, ಹಲವು ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ತೀವ್ರ ನಿರಾಶೆಯಾಗಿದೆ.
ಹೌದು, ಈ ಸಂಬಂಧ ಇಂದು ನಗರಕ್ಕೆ ಆಗಮಿಸಿದ್ದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ಅವರು, ಸದಕ್ಯ ಸಂಪುಟ ಪುನಾರಚನೆ ವಿಚಾರ ಕೈಬಿಟ್ಟು, ರಾಜ್ಯದಲ್ಲಿ ಬರ ಪರಿಹಾರ ಕಾರ್ಯಗಳಿಗೆ ಆದ್ಯತೆ ನೀಡುವಂತೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸೂಚಿಸಿದ್ದಾರೆ.
ಸಂಪುಟ ಪುನಾರಚನೆಗೆ ಸಂಬಂಧಿಸಿದಂತೆ ಚರ್ಚಿಸಲು ಈಗ ದೆಹಲಿಗೆ ಬರುವುದು ಬೇಡ. ಹೈಕಮಾಂಡ್ ಸೂಚಿಸಿದಾಗ ದೆಹಲಿಗೆ ಬನ್ನಿ ಎಂದು ಸಿಎಂಗೆ ದಿಗ್ವಿಜಯ್ ಸಿಂಗ್ ಅವರು ಹೇಳಿದ್ದಾರೆ.
ಇದೇ ವೇಳೆ, ಸಮಾನ ಮನಸ್ಕ ಶಾಸಕರ ಚಟುವಟಿಕೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ದಿಗ್ವಿಜಯ್ ಸಿಂಗ್ ಅವರು, ಶಾಸಕರಿಗೆ ಗುಂಪುಗಾರಿಕೆ ಬಿಟ್ಟು ಬರ ಪರಿಹಾರ ಕಾರ್ಯಗಳಲ್ಲಿ ತೊಡಗುವಂತೆ ಸೂಚಿಸಿ ಎಂದು ಸಿಎಂಗೆ ನಿರ್ದೇಶ ನೀಡಿದ್ದಾರೆ.

Write A Comment