ಮನೋರಂಜನೆ

ನನ್ನ ಹಾಡು ನಾನೇ ಹಾಡ್ತೀನಿ: ಶ್ರದ್ಧಾ

Pinterest LinkedIn Tumblr

nanna-haadu‘ಆಶಿಕಿ 2’, ‘ಹೈದರ್‌’ ಮತ್ತು ‘ಎಬಿಸಿಡಿ 2’ ಚಿತ್ರಗಳಲ್ಲಿ ಅಭಿನಯದ ಜತೆಗೆ ಗಾಯನ ಪ್ರತಿಭೆಯನ್ನೂ ತೋರಿರುವ ಬಾಲಿವುಡ್ ನಟಿ ಶ್ರದ್ಧಾ ಕಪೂರ್‌ ಮುಂಬರಲಿರುವ ‘ರಾಕ್‌ ಆನ್‌ 2’ ಚಿತ್ರದಲ್ಲಿನ ತಮ್ಮ ಅಭಿನಯದ ಎಲ್ಲಾ ಹಾಡುಗಳಿಗೂ ತಾವೇ ದನಿಯಾಗಲಿದ್ದಾರಂತೆ.
‘ರಾಕ್‌ ಆನ್‌ 2’ ಚಿತ್ರದಲ್ಲಿ ಶ್ರದ್ಧಾ ಹಾಡಲಿದ್ದಾರೆಯೇ? ಎಂದು ಟ್ವಿಟರ್‌ನಲ್ಲಿ ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಶ್ರದ್ಧಾ, ‘ಹೌದು, ರಾಕ್‌ ಆನ್‌ 2 ಚಿತ್ರದಲ್ಲಿನ ನನ್ನ ಅಭಿನಯದ ಎಲ್ಲಾ ಗೀತೆಗಳಿಗೂ ನಾನೇ ದನಿಯಾಗಲಿದ್ದೇನೆ’ ಎಂದು ಉತ್ತರಿಸಿದ್ದಾರೆ.
ಇನ್ನು, ಶ್ರದ್ಧಾ ಮತ್ತು ಟೈಗರ್‌ ಶ್ರಾಫ್‌ ಜತೆಯಾಗಿ ನಟಿಸಿರುವ ‘ಬಾಗಿ’ ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು, ‘ಚಿತ್ರ ಪ್ರೇಕ್ಷಕರಿಗೆ ಇಷ್ಟವಾಗುವ ವಿಶ್ವಾಸವಿದೆ. ಈ ಚಿತ್ರಕ್ಕಾಗಿ ತಂಡದ ಎಲ್ಲರೂ ಹೆಚ್ಚಿನ ಶ್ರದ್ಧೆ ಹಾಗೂ ಶ್ರಮ ವಹಿಸಿ ಕೆಲಸ ಮಾಡಿದ್ದೇವೆ’ ಎಂದಿದ್ದಾರೆ ಶ್ರದ್ಧಾ.

Write A Comment