ರಾಷ್ಟ್ರೀಯ

ಅಣಬೆ ತಿಂದು ಹತ್ತು ಮಂದಿ ಸಾವು

Pinterest LinkedIn Tumblr

anabebebಐಜಾಲ್‌/ಶಿಲ್ಲಾಂಗ್‌ (ಪಿಟಿಐ): ಕಾಡಿನ ಅಣಬೆ ಸೇವನೆಯಿಂದ 10 ಮಂದಿ ಮೃತಪಟ್ಟಿರುವ ಘಟನೆ ಈಶಾನ್ಯ ರಾಜ್ಯಗಳಾದ ಮಿಜೋರಾಂ ಮತ್ತು ಮೇಘಾಲಯದಲ್ಲಿ ನಡೆದಿದೆ.
ಮಿಜೋರಾಂ ಮತ್ತು ಮೇಘಾಲಯ ರಾಜ್ಯಗಳಲ್ಲಿ ಎರಡು ಕುಟುಂಬಗಳ ತಲಾ ಐದು ಮಂದಿ ಅಣಬೆ ಸೇವನೆಯಿಂದ ಮೃತಪಟ್ಟಿದ್ದಾರೆ.

ಮಿಜೋರಾಂನ ಮಮಿತ್‌ ಜಿಲ್ಲೆಯಲ್ಲಿ ಒಂದೇ ಕುಟುಂಬದ ಐದು ಮಂದಿ ಮತ್ತು ಮೇಘಾಲಯದ ಪೂರ್ವ ಕಾಶಿಗಿರಿ ಜಿಲ್ಲೆಯಲ್ಲಿ ಒಂದೇ ಕುಟುಂಬದ ಐದು ಮಂದಿ ಸಾವನ್ನಪ್ಪಿದ್ದಾರೆ.

ಕಾಡಿನಲ್ಲಿ ಸಿಗುವ ಅಣಬೆಯಿಂದ ಮಾಡಿದ ಆಹಾರ ಸೇವಿಸಿದ ಬಳಿಕ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಹತ್ತೂ ಮಂದಿ ಮೃತಪಟ್ಟಿದ್ದಾರೆ.

Write A Comment