ಕರ್ನಾಟಕ

ಸಿದ್ದರಾಮಯ್ಯಗೆ ಸುತ್ತಿದ ಇನ್ನೊಂದು ವಿವಾದ : ಪುತ್ರನ ರಾಜೀನಾಮೆ

Pinterest LinkedIn Tumblr

siddaramiah-900ಬೆಂಗಳೂರು : ಸರ್ಕಾರಿ ಆಸ್ಪತ್ರೆಯಲ್ಲಿ ಲ್ಯಾಬ್‌ ಟೆಂಡರ್‌ ನೀಡಿಕೆ ವಿಚಾರದಲ್ಲಿ ಹೊಸದೊಂದು ವಿವಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸುತ್ತಿಕೊಂಡ ಬೆನ್ನಲ್ಲೇ ಪುತ್ರ ಡಾ.ಯತೀಶ್‌ ಅವರು ಮ್ಯಾಟ್ರಿಕ್ಸ್‌ ಇಮೆಜಿಂಗ್‌ ಸೊಲ್ಯುಷನ್ಸ್‌ ಪ್ರೈವೇಟ್‌ ಲಿಮಿಟೆಡ್‌ ಕಂಪೆನಿಯ ನಿರ್ದೇಶಕ ಸ್ಥಾನಕ್ಕೇ ರಾಜೀನಾಮೆ ಸಲ್ಲಿಸಿದ್ದಾರೆ.

ಸರ್ಕಾರಿ ಆಸ್ಪತ್ರೆಯಾಗಿರುವ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇದೇ ಮೊದಲ ಬಾರಿಗೆ ಸಿಟಿ ಸ್ಕ್ಯಾನಿಂಗ್‌ಮತ್ತು ಡಯೋಗ್ನೊಸ್ಟಿಕ್‌ ಯಂತ್ರಗಳನ್ನುಅಳವಡಿಸುವ ಟೆಂಡರನ್ನು ಸಿಎಂ ಪುತ್ರನ ಕಂಪೆನಿಗೆ ನೀಡಲಾಗಿತ್ತು. 8 ರಿಂದ 10ಕೋಟಿ ರೂಪಾಯಿ ಮೌಲ್ಯದ ಯಂತ್ರಗಳನ್ನು ಅಳವಡಿಸಬೇಕಾಗಿತ್ತು.

ಸಿಎಂ ಸಿದ್ದರಾಮಯ್ಯ ಅವರು ಸ್ವಜನ ಪಕ್ಷಪಾತ ಮಾಡಿ ಕಿರಿಯ ಪುತ್ರನ ಕಂಪೆನಿಗೆ ಕಡಿಮೆ ಬೆಲೆಗೆ ಟೆಂಡರ್‌ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

2009 ರಲ್ಲಿ ಆರಂಭವಾದ ಮ್ಯಾಟ್ರಿಕ್ಸ್‌ ಸೊಲ್ಯುಷನ್ಸ್‌ ಪ್ರೈವೇಟ್‌ ಲಿಮಿಟೆಡ್‌ ಕಂಪೆನಿಗೆ ಡಾ.ಯತೀಂದ್ರ ಮತ್ತು ರಾಜೇಶ್‌‌ಗೌಡ ನಿರ್ದೇಶಕರಾಗಿದ್ದರು.

ವಿವಾದದಲ್ಲಿ ಆಸ್ಪತ್ರೆಯ ಯಾವುದೇ ಪಾತ್ರವಿಲ್ಲ.ಇ ಪ್ರಕ್ಯೂರ್‌ವೆುಂಟ್‌ ಮೂಲಕಟೆಂಡರ್‌ ಕರೆಯಲಾಗಿದ್ದು,ಸ್ವಜನ ಪಕ್ಷ ಮಾಡದೇ ಗಮನಿಸಿ ಟೆಂಡರ್‌ ನೀಡಲಾಗಿದೆ ಎಂದು ವಿಕ್ಟೋರಿಯಾ ಆಸ್ಪತ್ರೆಯ ನಿರ್ದೇಶಕ ಡಾ. ಗಿರೀಶ್‌ ಹೇಳಿದ್ದಾರೆ.

ಇದೀಗ ವಿವಾದವಾದ ತಕ್ಷಣ ಯತೀಂದ್ರ ಅವರು ರಾಜೀನಾಮೆ ನೀಡುವ ಮೂಲಕ ತಂದೆಯನ್ನು ಪಾರು ಮಾಡಲು ಮುಂದಾಗಿದ್ದಾರೆ.
-ಉದಯವಾಣಿ

Write A Comment