ರಾಷ್ಟ್ರೀಯ

ಮೀರತ್‌ ಸೇನಾ ಆಸ್ಪತ್ರೆಯ ಹೊರಗೆ ಚಿರತೆಯ ದಾಳಿ

Pinterest LinkedIn Tumblr

Leopardಮೀರತ್‌, ಉತ್ತರಪ್ರದೇಶ : ಇಲ್ಲಿನ ಸೇನಾ ಆಸ್ಪತ್ರೆಯ ಹೊರ ಭಾಗದಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡವೊಂದರಲ್ಲಿ ಅಡಗಿ ಕುಳಿತ ಚಿರತೆಯೊಂದು, ತನ್ನನ್ನು ಹಿಡಿಯಲು ಬಂದು ಜನರ ಗುಂಪಿನ ಮೇಲೆ ದಾಳಿ ನಡೆಸಿ ಮತ್ತೆ ಪುನಃ ಕಟ್ಟಡದ ಒಳಗೆ ಹೋಗಿ ಅವಿತುಕೊಂಡಿದ್ದು ಜನರಲ್ಲಿ ತೀವ್ರ ಆತಂಕ ಮೂಡಿಸಿದೆ.

ನಿನ್ನೆ ಮಂಗಳವಾರ ನಿರ್ಮಾಣ ಹಂತದಲ್ಲಿರುವ ಕಟ್ಟಡದೊಳಗೆ ಅಡಗಿ ಕುಳಿತಿದ್ದ ಚಿರತೆಯು ಹೊರಗೆ ದಿಢೀರನೆ ಓಡಿ ಬಂದು ಪ್ರತ್ಯಕ್ಷಗೊಂಡಾಗ ಜನರು ಭಯಭೀತರಾದರು. ಕಟ್ಟಡದ ಬಳಿ ಹೋಗದಂತೆ ಜನರಿಗೆ ಎಚ್ಚರಿಕೆ ನೀಡಲಾಯಿತು.

ಅರಣ್ಯ ಸಿಬಂದಿಗಳು ಮತ್ತು ಕಟ್ಟಡ ಕಾರ್ಮಿಕರು ಶತ ಪ್ರಯತ್ನ ನಡೆಸಿ ಚಿರತೆಯನ್ನು ಹಿಡಿಯಲು ಮುಂದಾದರೂ ಅವರಿಗದು ಸಾಧ್ಯವಾಗಲಿಲ್ಲ. ಈಗಲೂ ಅಡಗಿಕೊಂಡಿರುವ ಚಿರತೆ ಯಾವಾಗ ದಾಳಿ ಮಾಡುವುದೋ ಎಂಬ ಭಯ ಈಗ ಜನರಲ್ಲಿ ತೀವ್ರವಾಗಿದೆ.

ಇದೇ ಎಪ್ರಿಲ್‌ 4ರಂದು ಮಥುರಾ ಜಿಲ್ಲೆಯ ಕರ್ಣಾವೂ ಗ್ರಾಮದಲ್ಲಿ ಚಿರತೆ ದಾಳಿ ನಡೆಸಿ ನಾಲ್ವರನ್ನು ಗಾಯಗೊಳಿಸಿತ್ತು.
-ಉದಯವಾಣಿ

Write A Comment