ಮನೋರಂಜನೆ

30 ವರ್ಷಗಳ ನಂತರ ಕನ್ನಡಕ್ಕೆ ಮರಳಿದ ನಿಂಬೆ ಹಣ್ಣು

Pinterest LinkedIn Tumblr

1_4ರಮೇಶ್‌ ಅರವಿಂದ್‌ ನಟಿಸುತ್ತಿರುವ “ಪುಷ್ಪಕ ವಿಮಾನ’ ಚಿತ್ರದ ಮೂಲಕ ನಟಿ ಜೂಹಿ ಚಾವ್ಲಾ ಮತ್ತೆ ಕನ್ನಡ ಚಿತ್ರದಲ್ಲಿ ನಟಿಸುತ್ತಿರುವ ಸುದ್ದಿ ನಿಮಗೆ ಗೊತ್ತೇ ಇದೆ. ಆದರೆ, ಅವರು ಯಾವ ರೀತಿ ಕಾಣಿಸಿಕೊಂಡಿದ್ದಾರೆಂಬ ಬಗ್ಗೆ ಮಾಹಿತಿಯಿರಲಿಲ್ಲ. ಆದರೆ ಈಗ ಜೂಹಿ ಚಾವ್ಲಾ ಅವರ “ಪುಷ್ಪಕ ವಿಮಾನ’ದ ಗೆಟಪ್‌ ಲಭ್ಯವಾಗಿದೆ. ತುಂಬಾ ಸ್ಟೈಲಿಶ್‌ ಹಾಗೂ ಕಲರ್‌ಫ‌ುಲ್‌ ಆಗಿ ಕಾಣಿಸಿಕೊಂಡಿದ್ದಾರೆ.

ಚಿತ್ರದಲ್ಲಿ ಅವರಿಗೆ ತುಂಬಾ ಪ್ರಮುಖವಾದ ಪಾತ್ರವಿದೆ. ಹಾಗಾಗಿಯೇ ಚಿತ್ರತಂಡ ಈ ಪಾತ್ರಕ್ಕೆ ಜೂಹಿ ಚಾವ್ಲಾ ಅವರೇ ಸೂಕ್ತ ಎಂದು ಅವರನ್ನು ಒಪ್ಪಿಸಿ ಕರೆತರುವಲ್ಲಿ ಯಶಸ್ವಿಯಾಗಿದೆ.

ಏಪ್ರಿಲ್‌ ಮೊದಲ ವಾರದಲ್ಲಿ ಜೂಹಿಚಾವ್ಲಾ “ಪುಷ್ಪಕ ವಿಮಾನ’ ತಂಡ ಸೇರಿಕೊಂಡು ಸುಮಾರು ನಾಲ್ಕು ದಿನಗಳ ಕಾಲ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಕೆಂಗೇರಿ ಬಳಿಯ ಸ್ಟುಡಿಯೋದಲ್ಲಿ ಒಂದು ಹಾಡು ಹಾಗೂ ಕೆಲವು ದೃಶ್ಯಗಳಲ್ಲಿ ಕಾಣಿಸಿಕೊಂಡ ಜೂಹಿ ಚಾವ್ಲಾ ತಂಡದ ಕೆಲಸದ ಬಗ್ಗೆ ಖುಷಿಯಾಗಿದ್ದಾರಂತೆ. ಕನ್ನಡದಲ್ಲಿ ರಮೇಶ್‌ ಅರವಿಂದ್‌ ನಟಿಸುತ್ತಿರುವ ನೂರನೇ ಚಿತ್ರ “ಪುಷ್ಪಕ ವಿಮಾನ’. ಚಿತ್ರವನ್ನು ರವೀಂದ್ರನಾಥ್‌ ನಿರ್ದೇಶಿಸುತ್ತಿದ್ದಾರೆ.

ಒಂದಷ್ಟು ಮಂದಿ ಸ್ನೇಹಿತರು ಸೇರಿಕೊಂಡು ಈ ಸಿನಿಮಾ ನಿರ್ಮಿಸುತಿದ್ದಾರೆ. ಈಗಾಗಲೇ ಚಿತ್ರೀಕರಣ ಕೊನೆಯ ಹಂತ ತಲುಪಿದೆ. ಇದು ತಂದೆ-ಮಗಳ ಬಾಂಧವ್ಯದ ಕಥೆಯಾಗಿದ್ದು, ಚಿತ್ರದಲ್ಲಿ ರಚಿತಾ ರಾಮ್‌ ಕೂಡಾ ನಟಿಸಿದ್ದಾರೆ. ರವಿಕಾಳೆ, ಮನ್‌ದೀಪ್‌ರಾಯ್‌ ಸೇರಿದಂತೆ ಸಾಕಷ್ಟು ಮಂದಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
-ಉದಯವಾಣಿ

Write A Comment