ಕರ್ನಾಟಕ

‘ಸಿದ್ದು ಸೇಡಿನ ರಾಜಕಾರಣಕ್ಕೆ ಜಗ್ಗುವುದಿಲ್ಲ, ಕಾನೂನು ಹೋರಾಟ ನಡೆಸಿ ಆರೋಪದಿಂದ ಮುಕ್ತನಾಗುತ್ತೇನೆ’ : ಬಿಎಸ್ವೈ

Pinterest LinkedIn Tumblr

yaddiಅಕ್ರಮ ಡಿ.ನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದರೂ ಕಾನೂನು ಹೋರಾಟ ನಡೆಸಿ ಆರೋಪದಿಂದ ಮುಕ್ತನಾಗುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ವಿರುದ್ಧ ಸೇಡಿನ ರಾಜಕಾರಣ ಮಾಡುತ್ತಿದ್ದಾರೆ ಎಂಬುದಕ್ಕೆ ಇದು ಸ್ಪಷ್ಟ ನಿದರ್ಶನ ಎಂದರು. ಸರ್ಕಾರ ವಿರುದ್ಧ ಎಷ್ಟೇ ಕಾನೂನು ತೊಡಕುಗಳನ್ನು ಒಡ್ಡಿದರೂ ನನ್ನ ಕೈಕಾಲು ಕಟ್ಟಿ ಹಾಕಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.

ನನಗೆ ಕಾನೂನಿನಲ್ಲಿ ನಂಬಿಕೆ ಇದೆ. ಯಾರು ಎಷ್ಟೇ ತೊಂದರೆ ನೀಡಿದರೂ ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಈಗಾಗಲೇ ಕೆಳಹಂತದ ನ್ಯಾಯಾಲಯಗಳಲ್ಲಿ ಆರೋಪ ಮುಕ್ತನಾಗಿರುವುದರಿಂದ ಉಚ್ಚ ನ್ಯಾಯಾಲಯಗಳಲ್ಲೂ ನ್ಯಾಯ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಮುಖ್ಯಮಂತ್ರಿಗಳ ಅವಯಲ್ಲೂ ಹೆಚ್ಚಾಗಿ ಡಿ ನೋಟೀಫಿಕೇಷನ್ ಆಗಿದೆ. ಎಸ್.ಎಂ.ಕೃಷ್ಣ ಅವರ ಕಾಲದಲ್ಲಿ ಕೂಡ ಡಿ ನೋಟಿಫಿಕೇಷನ್ ಆಗಿದೆ ಎಂದರು. ಅಪಪ್ರಚಾರ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಈ ರೀತಿ ಮಾಡುತ್ತಿದ್ದಾರೆ. ಸುಪ್ರೀಂಕೋರ್ಟ್‌ಗೆ ಹೋಗಲಿ ನ್ಯಾಯಾಂಗದ ಮೇಲೆ ನನಗೆ ವಿಶ್ವಾಸವಿದೆ. ಅಲ್ಲೂ ನನಗೆ ನ್ಯಾಯ ಸಿಗಲಿದೆ. ಮೇಲ್ಮನವಿ ಮೂಲಕ ನನ್ನನ್ನು ಕಟ್ಟಿ ಹಾಕಲು ಸಾಧ್ಯವಿಲ್ಲ ಎಂದು ಯಡಿಯೂರಪ್ಪ ತಿಳಿಸಿದರು. ರಾಜಾಜಿನಗರ ಕನ್ನಡ ಸಂಘ ಡಾ.ರಾಜ್‌ಕುಮಾರ್ ಅವರ 10ನೆ ಪುಣ್ಯತಿಥಿ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರೊ.ರೇವಣ್ಣ ,ಸಂಘದ ಅಧ್ಯಕ್ಷ ಲಿಂಗರಾಜು, ಕಾರ್ಯಾಧ್ಯಕ್ಷ ಸುಂದರ್‌ರಾಜ್, ದಿನೇಶ್‌ಬಾಬು, ಸಿದ್ದರಾಮಣ್ಣ , ಪಾಂಡುರಂಗ ಶೆಟ್ಟಿ ಮತ್ತಿತರರು ಪಾಲ್ಗೊಂಡಿದ್ದರು.

Write A Comment