ಕರ್ನಾಟಕ

ದಿಗ್ವಿಜಯ್ ಬರ್ತಾರೆ, ಹೋಗ್ತಾರೆ; ಸಿಎಂಗೆ ತಾಳ್ಮೆ ಗುಣ ಬೇಕು; ವಿಶ್ವನಾಥ್

Pinterest LinkedIn Tumblr

H-Vishwaಬೆಂಗಳೂರು: ರಾಜ್ಯ ಉಸ್ತುವಾರಿ ದಿಗ್ವಿಜಯ್ ಸಿಂಗ್ ಅವರು ರಾಜ್ಯಕ್ಕೆ ಬರ್ತಾರೆ..ಹೋಗ್ತಾರೆ. ಅವರು ಸರ್ಕಾರವನ್ನು ಯಾವತ್ತೂ ವಿಮರ್ಶೆಗೆ ಒಳಪಡಿಸಿದವರಲ್ಲ. ಹಾಗಾಗಿ ರಾಜ್ಯ ಉಸ್ತುವಾರಿ ಸಿಂಗ್ ಅವರನ್ನು ಬದಲಾಯಿಸಬೇಕು ಎಂದು ಮಾಜಿ ಸಂಸದ, ಕಾಂಗ್ರೆಸ್ ಮುಖಂಡ ಎಚ್.ವಿಶ್ವನಾಥ್ ಆಗ್ರಹಿಸಿದ್ದಾರೆ.

ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾಳ್ಮೆಯಿಂದ ಆಲಿಸುವ ಗುಣ ಬೆಳೆಸಿಕೊಳ್ಳಲಿ. ಎಸಿಬಿ (ಭ್ರಷ್ಟಾಚಾರ ನಿಗ್ರಹ ದಳ) ರಚನೆ ಬಗ್ಗೆ ಮಾಜಿ ಸಿಎಂ ಎಸ್.ಎಂ.ಕೃಷ್ಣ ವಿರೋಧ ವ್ಯಕ್ತಪಡಿಸಿದ್ದರು. ಎಸಿಬಿ ವಿಚಾರದಲ್ಲಿ ಸಿದ್ದರಾಮಯ್ಯ ಹಿರಿಯರ ಮಾತು ಕೇಳಬೇಕು ಎಂದು ಹೇಳಿದರು.

ಎಸ್.ಎಂ.ಕೃಷ್ಣ ಹೇಳಿದ ಮಾತಿಗೆ ಅರ್ಥ ಇರುತ್ತದೆ. ಮಾತನ್ನು ಕೇಳುವ ತಾಳ್ಮೆಯನ್ನು ಸಿದ್ದರಾಮಯ್ಯ ಇಟ್ಟುಕೊಳ್ಳಬೇಕು ಎಂದು ವಿಶ್ವನಾಥ್ ಸಲಹೆ ನೀಡಿದರು. ರಾಜ್ಯದಲ್ಲಿ ಗುಲಾಂ ನಬಿ ಅಜಾದ್ ಅವರಂತವರನ್ನು ಉಸ್ತುವಾರಿಯನ್ನಾಗಿ ನೋಡಿದ್ದೇವೆ. ಆದರೆ ದಿಗ್ವಿಜಯ್ ಸಿಂಗ್ ಬಂದು ಹೋಗುವುದಷ್ಟೇ ಕೆಲಸವನ್ನಾಗಿ ಮಾಡಿಕೊಂಡಿದ್ದಾರೆ ಎಂದು ಟೀಕಿಸಿದರು.
-ಉದಯವಾಣಿ

Write A Comment