ಕರ್ನಾಟಕ

ದಕ್ಷಿಣ ಭಾರತದ ನಟರ ಬಳಿ ಎಷ್ಟು ದುಬಾರಿಯ ಕಾರುಗಳಿವೆ ಗೊತ್ತಾ..?

Pinterest LinkedIn Tumblr

prabhas-rolls-royace

ಸಾಮನ್ಯ ಜನರಿಗೆ ಒಂದು ಕಾರು ಕೊಳ್ಳಬೇಕು ಎಂದು ಆಸೆ ಇದೆ ಇರುತ್ತದೆ. ಅದರಂತೆ ಶ್ರೀಮಂತರಿಗೆ ಸೆಲಿಬ್ರಿಟಿಗಳಿಗೆ ಐಷರಾಮಿ ಕಾರುಗಳನ್ನು ತಮ್ಮದಾಗಿಸಿಕೊಳ್ಳಬೇಕೆಂಬುದು ಕನಸಾಗಿರುತ್ತದೆ. ಆದರೆ ಬಿತ್ರರಂಗದ ತಾರೆಯರಲ್ಲಿ ಈ ಆಸೆ ಕೊಂಚ ಜಾಸ್ತೆಯೇ ಎನ್ನಬಹುದು.
ಅದರಂತೆ ಹಾಲಿವುಡ್, ಬಾಲಿವುಡ್ ತಾರೆಯರು ಪೈಪೋಟಿಗೆ ಬಿದ್ದು ಕಾರು ಖರೀದಿಸುತ್ತಾರೆ. ಇನ್ನು ದಕ್ಷಿಣ ಭಾರತದ ತಾರೆಯರು ಈ ವಿಷಯದಲ್ಲಿ ಹಿಂದೆ ಬಿದ್ದಿಲ್ಲ ಎನ್ನಬಹುದು. ಆದರೆ ಈ ಪಟ್ಟಿಗೆ ಸೇರಲು ಇನ್ನು ಸ್ಯಾಂಡಲ್‌ವುಡ್ ನಾಯಕರು ಹಿಂದೆ ಬಿದ್ದಿದ್ದಾರೆಯೇ……?

ದಕ್ಷಿಣ ಭಾರತದ ನಟರು ಸಕತ್ ಸ್ಟೈಲಿಶ್ ಮಾತ್ರವಲ್ಲ, ಅವರುಗಳು ಕಾರಿನ ಆಯ್ಕೆಯಲ್ಲೂ ಸಕತ್ ಸ್ಮಾರ್ಟ್ ಎಂದು ನಿರೂಪಿಸಿದ್ದಾರೆ. ಹಾಗಾದರೆ ಟಾಲಿವುಡ್ ಹಾಗೂ ಕಾಲಿವುಡ್ ನಟರ ಬಳಿ ಯಾವೆಲ್ಲಾ ಕಾರ್ ಗಳಿವೆ ಎಂಬುದನ್ನು ತಿಳಿಯುವ ಕುತೂಹಲವೇ.

ಸ್ಟಾರ್‌ಗಳೆಂದ ಮೇಲೆ ಅವರ ಲೈಫ್ ಸ್ಟೈಲ್ ಕೂಡ ಭಿನ್ನವಾಗಿರುತ್ತದೆ. ಅದರಲ್ಲೂ ಕಾರಿನ ಕ್ರೇಜ್ ಜಾಸ್ತಿಯೇ ಇರುತ್ತದೆ. ‘ಬಾಹುಬಲಿ’ ಪ್ರಭಾಸ್, ರವಿತೇಜ, ಕಮಲ್ ಹಾಸನ್, ವಿಜಯ್, ಸೂರ್ಯ, ಚಿರಂಜೀವಿ, ಜೂನಿಯರ್ ಎನ್ ಟಿ ಆರ್, ವಿಕ್ರಂ, ಮಹೇಶ್ ಬಾಬು, ಧನುಷ್, ಅಜಿತ್, ಬಾಲಕೃಷ್ಣ, ಅಲ್ಲು ಅರ್ಜುನ್, ಪವನ್ ಕಲ್ಯಾಣ್, ಉದಯ್‌ನಿಧಿ ಸ್ಟಾಲಿನ್, ಶಾಂತನಂ, ಹ್ಯಾರಿಸ್ ಜಯರಾಜ್, ಯುವನ್ ಶಂಕರ್‌ರಾಜ್, ಮಮುಟಿ, ಪೃಥ್ವಿರಾಜ್, ನಾಗ ಚೈತನ್ಯ ಹಾಗೂ ರಾಂ ಚರಣ್ ತೇಜ, ಮೋಹನ್ ಲಾಲ್ ಅವರಗಳು ಹಾಗೂ ನಟಿಯರಲ್ಲಿ ತ್ರಿಶಾ ಅವರು ದಕ್ಷಿಣ ಭಾರತದ ದುಬಾರಿ ಕಾರನ್ನು ಹೊಂದಿರುವ ಸೆಲಿಬ್ರಿಟಿಗಳು ಎನ್ನಿಸಿಕೊಂಡಿದ್ದಾರೆ.

ಸೌತ್ ಇಂಡಿಯಾ ಸ್ಟಾರ್ ಗಳಲ್ಲಿ ದುಬಾರಿ ಬೆಲೆಯ ಕಾರನ್ನು ಹೊಂದಿರುವವರಲ್ಲಿ ‘ಬಾಹುಬಲಿ’ ಪ್ರಭಾಸ್ ಮೊದಲ ಸ್ಥಾನದಲ್ಲಿದ್ದಾರೆ. ಅವರ ಬಳಿ ಬರೋಬ್ಬರಿ ೮ ಕೋಟಿ ರೂ ಬೆಲೆಯ ರೋಲ್ಸ್ ರಾಯ್ಸ್ ಕಂಪನಿಯ ಐಷಾರಾಮಿ ಕಾರು ಇದೆ. ರವಿತೇಜ ಬಳಿ ಹಲವು ಕಾರುಗಳಿದ್ದು, ಅವುಗಳಲ್ಲಿ ೫.೮೦ ಕೋಟಿ ರೂ ಮೌಲ್ಯದ ಆಸ್ಟಿನ್ ಮಾರ್ಟಿನ್ ಡಿ-೮ ಕಾರು ಒಂದಾಗಿದೆ. ಕಮಲ್ ಹಾಸನ್ ಬಳಿ ೩ ಕೋಟಿ ರೂ ಮೌಲ್ಯದ ಹಮ್ಮರ್ ಹೆಚ್-೩ ಕಾರಿದೆ, ವಿಜಯ್ ಬಳಿ ೩ ಕೋಟಿ ರೂ ಬೆಲೆಯ ರೋಲ್ಸ್ ರಾಯ್ಸ್ ಕಂಪನಿಯ ಕಾರಿದೆ.
ಚಿರಂಜೀವಿ ೩ ಕೋಟಿ ರೂ. ಬೆಲೆಯ ರೋಲ್ಸ್ ರಾಯ್ಸ್ ಪ್ಯಾಂಟಮ್ ಕಾರಿನ ಮಾಲೀಕರಾಗಿದ್ದಾರೆ. ಜೂನಿಯರ್ ಎನ್ ಟಿ ಆರ್ ೨.೫ ಕೋಟಿ ರೂ ಮೊತ್ತದ ಕಾರನ್ನು ಹೊಂದಿದ್ದರೆ, ವಿಕ್ರಂ ಬಳಿ ೨ ಕೋಟಿ ಮೊತ್ತದ ಆಡಿ ಕಾರು ಇದೆ. ಇನ್ನು ಧನುಷ್ ಅವರು ೧.೭೦ ಕೋಟಿ ರೂ. ಬೆಲೆಯ ಕಾರನ್ನು ಬಳಸಿದರೆ, ಸೂರ್ಯ ಅವರ ಬಳಿ ರೂ.೮೫ ಲಕ್ಷ ಮೌಲ್ಯದ ಕಾರು ಇದೆ, ಅಜಿತ್ ಬಳಿ ೨.೩೦ ಕೋಟಿ ರೂ.ನ ಬಿಎಂಡಬ್ಲ್ಯೂ -ಐ೮ ಕಾರು ಇದ್ದರೆ, ಮಹೇಶ್ ಬಾಬು ಬಳಿ ೨ ಕೋಟಿ ರೂ ಬೆಲೆಯ ರೇಂಜ್ ರೋವರ್ ಕಾರಿದೆ.
ಬಾಲಕೃಷ್ಣ ಅವರು ೧.೫ ಕೋಟಿ ರೂ ಬೆಲೆಯ ಬಿಎಂಡಬ್ಲ್ಯು ಕಾರಿನಲ್ಲಿ ಓಡಾಡುತ್ತಾರೆ, ಅಲ್ಲು ಅರ್ಜುನ್ ಅವರು ೧ ಕೋಟಿ ರೂ ಮೌಲ್ಯದ ಬಿಎಂಡಬ್ಲ್ಯು ಕಾರನ್ನು ಹೊಂದಿದ್ದಾರೆ. ಪವನ್ ಕಲ್ಯಾಣ್ ಬಳಿ ೯೫ ಲಕ್ಷ ರೂ. ಬೆಲೆ ಆಡಿ ಕ್ಯೂ-೭ ಕಾರಿದೆ. ತಮಿಳು ಚಿತ್ರದಲ್ಲಿ ಪೋಷಕ ನಟನ್ನಾಗಿ ನಟಿಸುವ ಶಾಂತಾನಂ ಅವರು ೪೦ ಲಕ್ಷ ರೂ ಬೆಲೆ ಬಾಳುವ ಕಾರನ್ನು ಹೊಂದಿದ್ದಾರೆ. ಇನ್ನು ತಮಿಳಿನ ಪ್ರಸಿದ್ದ ಸಂಗೀತ ನಿರ್ದೇಶಕ ಹ್ಯಾರಿಸ್ ಜಯರಾಜ್ ಅವರು ೫ ಕೋಟಿ ಮೌಲ್ಯದ ಲ್ಯಾರ್ಬೋಗಿನಿ ಅಡ್ವೆನ್ಟ್‌ರ್ ಕಾರನ್ನು ಹೊಂದಿದ್ದಾರೆ.
ಮತ್ತೊಬ್ಬ ಸಂಗೀತ ನಿರ್ದೇಶಕ ಯುವನ್ ಶಂಕರ್‌ರಾಜ್ ಅವರು ೨ಕೋಟಿ ರೂ ಮೊತ್ತದ ಆಸ್ಟ್‌ನ್ ಮಾರ್ಟಿನ್ ಎನ್೪೨೦ ವಿಟೇಜ್ ಕಾರನ್ನು ಹೊಂದಿದ್ದು. ಇದಕ್ಕೂ ಮುನ್ನ ಬಿಎಂಡಬ್ಲ್ಯೂ ಎಡಬ್ಲ್ಯೂ೬೫೦ಐ ಕಾರನ್ನು ಬಳಸುತ್ತಿದ್ದರು.

ಟಾಲಿವುಡ್‌ನಲ್ಲಿ ಉತ್ತಮ ನಟನೆಯಿಂದ ಜನಪ್ರಿಯಗಳಿಸುತ್ತಿರುವ ಚಿರಂಜೀವಿ ಪುತ್ರ ರಾಂಚರಣ್ ತೇಜ ಅವರ ಬಳಿ ೫.೮ ಕೋಟಿ ಮೊತ್ತದ ಆಸ್ಟ್‌ನ್ ಮಾರ್ಟಿನ್ ಹಾಗೂ ರೇಂಜ್ ರೋವರ್ ಕಾರುಗಳ ಒಡೆಯರಾಗಿದ್ದಾರೆ. ಖ್ಯಾತ ನಟ ನಾಗಾರ್ಜುನ್ ಅವರು ಪುತ್ರ ನಾಗ ಚೈತನ್ಯ ಅವರ ಬಳಿ ೬೦ ಲಕ್ಷದ ಬಿಎಂಡಬ್ಯ್ಲೂ೩೨೫ ಕಾರು ಖರೀದಿಸುವ ಮೂಲಕ ತಮ್ಮ ಕಾರುಗಳ ಕಲೆಕ್ಷನ್ ಆರಂಬಿಸಿದ್ದಾರೆ.

ಮಳಿಯಾಲಂ ಚಿತ್ರದ ಖ್ಯಾತ ನಟ ಮೋಹನ್ ಲಾಲ್ ಅವರು ೧.೫ ಕೋಟಿ ಮೊತ್ತದ ಮಾರ್ಸಿದೇಸ್ ಬೆಂಜ್ ಹಾಗೂ ಮಮುಟಿ ಅವರು ಈಗಾಗಲೇ ಅನೇಕ ಕಾರುಗಳ ಒಡೆಯರಾಗಿದ್ದು. ಇತ್ತೀಚೆಗೆ ೧.೫ ಕೋಟಿ ರೂ ಬೆಲೆ ಬಾಳುವ ಜ್ವಾಗರ್ ಎಕ್ಸ್‌ಜೆ -ಎಲ್ ಕಾರನನು ಖರೀದಿಸಿದ್ದಾರೆ. ಈ ದುಬಾರಿ ಬೆಲೆಯ ಕಾರುಗಳ ಜೊತೆಗೆ ಹಲವು ಐಷಾರಾಮಿ ಕಾರುಗಳನ್ನು ಸಹ ಬಹುತೇಕ ನಟರು ಹೊಂದಿದ್ದಾರೆ.

ದಕ್ಷಿಣ ಭಾರತ ಚಿತ್ರರಂಗದಲ್ಲಿ ಭದ್ರವಾಗಿ ನೆಲೆ ಕಂಡುಕೊಂಡ ನಟಿ ತ್ರಿಶಾ ಅವರು ದುಬಾರಿ ಕಾರನ್ನು ಹೊಂದಿರುವ ನಟಿ ಎನಿಸಿಕೊಂಡಿದ್ದಾರೆ. ಸೇಪ್ ರೈಡಿಂಗ್‌ಗಾಗಿ ೧ ಕೋಟಿ ರೂ ಮೌಲ್ಯದ ಬಿಎಂಡಬ್ಲ್ಯೂ ಕಾರನ್ನು ಖರೀದಿಸಿರುವ ತ್ರಿಶಾ ನಂತರದ ದಿನಗಳಲ್ಲಿ ಮಾರ್ಸಿಡಿಸ್ ಕಾರನ್ನು ಕೊಳ್ಳವ ಆಸೆ ಇದೆಯಂತೆ……..

Write A Comment