ಅಂತರಾಷ್ಟ್ರೀಯ

ಈಫಲ್ ಗೋಪುರಗಿಂತಲೂ ದೊಡ್ದದು ವಿಶ್ವದ ಬೃಹತ್ ಹಡಗು

Pinterest LinkedIn Tumblr

vs1

ವಿಶ್ವದ ಅತಿ ದೊಡ್ಡ ಹಡಗೆಂಬ ಖ್ಯಾತಿಗೆ ರಾಯಲ್ ಕೆರೆಬಿಯನ್‌ಗೆ ಸೇರಿದ ಹಾರ್ಮನಿ ಆಫ್ ದಿ ಸೀಸ್ ಪಾತ್ರವಾಗಿದೆ.

ಫ್ರಾನ್ಸ್‌ನಲ್ಲಿರುವ ವಿಶ್ವ ಪ್ರಸಿದ್ಧ ಈಫಲ್ ಗೋಪುರಗಿಂತಲೂ ದೊಡ್ಡದಾಗಿರುವ ಹಾರ್ಮನಿ ಆಫ್ ದಿ ಸೀಸ್ ತನ್ನ ಚೊಚ್ಚಲ ಯಾತ್ರೆಯನ್ನು ಆರಂಭಿಸಿದೆ.

ಉದ್ದವನ್ನು ಪರಿಗಣಿಸಿದಾಗ ೧೬ ಡೆಕ್ ಸೌಲಭ್ಯಗಳುಳ್ಳ ಹಾರ್ಮನಿ ಆಫ್ ದಿ ಸೀಸ್, ಐತಿಹಾಸಿಕ ಈಫಲ್ ಗೋಪುರವನ್ನು ಹಿಂದಿಕ್ಕಿದ್ದು ಒಟ್ಟಾರೆ ೩೬೨ ಮೀಟರ್ ಗಳಷ್ಟು ಉದ್ದವನ್ನು ಹೊಂದಿದೆ.

ಈಫಲ್ ಗೋಪುರಗಿಂತಲೂ ದೊಡ್ದದು ವಿಶ್ವದ ಬೃಹತ್ ಹಡಗು೧/೮ ಏಕಕಾಲಕ್ಕೆ ೬,೦೦೦ದಷ್ಟು ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಹಾರ್ಮನಿ ಆಫ್ ದಿ ಸೀಸ್ ಹೊಂದಿರಲಿದೆ. ಇದು ಕೂಡಾ ಮಗದೊಂದು ದಾಖಲೆಯಾಗಿರಲಿದೆ.

ಈ ಸಂಬಂಧ ಪ್ರಸ್ತುತ ಹಡಗಿನ ವಿದ್ಯುತ್ ಘಟಕ, ಚಾಲನಾ ವ್ಯವಸ್ಥೆ ಮತ್ತು ಕಾರ್ಯ ಕ್ಷಮತೆಯನ್ನು ಪರೀಕ್ಷಿಸಲು ವಿಶೇಷ ಸಂಚಾರ ಪರೀಕ್ಷೆಯನ್ನು ನಡೆಸಲಾಗಿದೆ. ಈ ಸಂದರ್ಭದಲ್ಲಿ ೫೦೦ರಷ್ಟು ಸಿಬ್ಬಂದಿಗಳು ಪಯಣ ನಡೆಸಿದ್ದರು.

ಮುಂಬರುವ ಮೇ ತಿಂಗಳಲ್ಲಿ ವಿಶ್ವದ ಅತಿ ದೊಡ್ಡ ಹಡಗಿನ ಹಸ್ತಾಂತರವಾಗಲಿದೆ. ತದಾ ಬಳಿಕ ವಿಹಾರ ಯಾನವನ್ನು ಆರಂಭಿಸಲಿದೆ.

ಅಮೆರಿಕ ಮೂಲದ ಹಡಗು ತಯಾರಿಕ ಸಂಸ್ಥೆ ರಾಯಲ್ ಕೆರೆಬಿಯನ್ ಇಂಟರ್ ನ್ಯಾಷನಲ್ (ಆರ್ ಸಿಐ) ೨೦೧೩ ಸೆಪ್ಟೆಂಬರ್ ತಿಂಗಳಿನಿಂದ ಹಾರ್ಮನಿ ಆಫ್ ದಿ ಸೀಸ್ ನಿರ್ಮಾಣವನ್ನು ಆರಂಭಿಸಿತ್ತು.

ಸೌಲಭ್ಯಗಳು
ತ್ರಿಡಿ ಮಂದಿರ, ಡೈವಿಂಗ್ ಗಾಗಿ ಅಕ್ವಾ ಥಿಯೇಟರ್ ಸೆಂಟ್ರಲ್ ಪಾರ್ಕ್, ಬೋರ್ಡ್ ವಾಲ್ಕ್ ಬ್ರೋಡ್ ವೇ ಶೋ, ಡ್ರೀಮ್ ವರ್ಕ್ಸ್ ಎಕ್ಸ್ ಪೀರಿಯನ್ಸ್, ಲಕ್ಕಿ ಕ್ಲೈಂಬರ್ ಪ್ಲೇ ಗ್ರೌಂಡ್, ಅಡ್ವೆಂಚರ್ ಓಷಿಯನ್, ಫ್ರೀ ಹೈ ಸ್ಪೀಡ್ ಇಂಟರ್ ನೆಟ್, ವೈದ್ಯಕೀಯ ನೆರವು ಫರ್ಫೆಕ್ಟ್ ಸ್ಟ್ರೋಮ್ ವಾಟರ್ ಸ್ಲೈಡ್ ೧೦ ಸ್ಟೋರಿ ಡ್ಯುಯಲ್ ಡ್ರೈ ಸ್ಲೈಡ್ ಇನ್ನೂ ಮುಂತಾದ ಸೌಲಭ್ಯಗಳನ್ನು ಒದಗಿಸಲಾಗಿದೆ,

ಹಡಗಿನೊಳಗೆ ಎಲ್ಲ ಐಷಾರಾಮಿ ಸೌಲಭ್ಯಗಳಿಗೆ ಆದ್ಯತೆ ಕೊಡಲಾಗಿದ್ದು, ಬೃಹತ್ತಾದ ಲಿವಿಂಗ್ ಪ್ರದೇಶ ಜೊತೆಗೆ ಕೃತಕ ಬಾಲ್ಕನಿ ವ್ಯವಸ್ಥೆಯೂ ಇರುತ್ತದೆ. ಇಂತಹ ವೈಶಿಷ್ಟ್ಯಗಳು ಕ್ವಾಟಂ ದರ್ಜೆಯ ವಿಹಾರ ನೌಕೆಗಳಲ್ಲಿ ಮಾತ್ರ ಕಾಣಸಿಗುತ್ತದೆ.

ಅಷ್ಟಕ್ಕೂ ವಿಶ್ವದ ಅತಿ ದೊಡ್ಡ ಹಡಗೆಂಬ ಖ್ಯಾತಿಗೆ ಪಾತ್ರವಾಗಿರುವ ಹಾರ್ಮನಿ ಆಫ್ ದಿ ಸೀಸ್ ಬರೋಬ್ಬರಿ ಎರಡು ಲಕ್ಷ ಟನ್ ಗಳಷ್ಟು ಭಾರ ಹೊಂದಿದೆ.

Write A Comment