ಕನ್ನಡ ವಾರ್ತೆಗಳು

ಗೋಪಾಡಿ ಗ್ರಾ.ಪಂ. ತೆರವಾದ ಸ್ಥಾನಕ್ಕೆ ಕಲ್ಪನಾ ಭಾಸ್ಕರ್ ಅವಿರೋಧ ಆಯ್ಕೆ

Pinterest LinkedIn Tumblr

ಕುಂದಾಪುರ: ಗೋಪಾಡಿ ಗ್ರಾ.ಪಂ.ನ ತೆರವಾದ ಸದಸ್ಯ ಸ್ಥಾನಕ್ಕೆ ಕಲ್ಪನಾ ಭಾಸ್ಕರ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

ಗೋಪಾಡಿ ಗ್ರಾ.ಪಂ.ಸದಸ್ಯೆ ಹಾಗೂ ಉಪಾಧ್ಯಕ್ಷರೂ ಆಗಿದ್ದ ವೈಲೆಟ್ ಬೆರಟ್ಟೋ ಅವರು ತಾ.ಪಂ.ಸದಸ್ಯೆಯಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಈ ಸ್ಥಾನ ತೆರವಾಗಿತ್ತು.

Kalpna_Bhaskar_Gopadi

ಎ.11 ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿತ್ತು. ಈ ನಡುವೆ ಸಮಾನ ಮನಸ್ಕರ ನೇತೃತ್ವದಲ್ಲಿ ಸಂಧಾನದ ಮೂಲಕ ಕಲ್ಪನಾ ಭಾಸ್ಕರ್ ಅವರನ್ನು ಗೋಪಾಡಿ ಗ್ರಾ.ಪಂ.ನ ಸದಸ್ಯೆಯಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಪುಷ್ಪಾ ಮಾಬೆನ್ ಹಾಗೂ ಶ್ಯಾಮಲಾ ಅವರು ಚುನಾವಣೆ ಸ್ಪರ್ಧಾಕಾಂಕ್ಷಿಗಳಾಗಿದ್ದರು. ಅವರು ನಾಮಪತ್ರ ಹಿಂಪಡೆದ ಹಿನ್ನೆಲೆ ಕಲ್ಪನಾ ಭಾಸ್ಕರ್ ಅವಿರೋಧವಾಗಿ ಆಯ್ಕೆಯಾದರು.

ಇನ್ನು ಉಪಾಧ್ಯಕ್ಷ ಸ್ಥಾನಕ್ಕೆ ಮಹಿಳಾ ಮೀಸಲಾತಿ ಇರುವ ಕಾರಣ ಕಲ್ಪನಾ ಭಾಸ್ಕರ ಅವರೇ ಉಪಾಧ್ಯಕ್ಷರಾಗುವ ಬಹುತೇಕ ಲಕ್ಷಣಗಳಿದೆ.

Write A Comment