ಕರಾವಳಿ

ಸಂಧಿವಾತಕ್ಕೆ ಇದೆ ಮನೆ ಮದ್ದು…

Pinterest LinkedIn Tumblr

sandivata

ಸಂಧಿವಾತ ಮಧ್ಯ ವಯಸ್ಸು ದಾಟಿದವರಲ್ಲಿ ಕಂಡುಬರುವ ಸಾಮಾನ್ಯ ಸಮಸ್ಯೆಯಾಗಿದೆ. ದೇಹದಲ್ಲಿ ಯಾರಿಕ್ ಆಸಿಡ್‌ನ ಪ್ರಮಾಣ ಹೆಚ್ಚಾದಾಗ ಸಂಧಿವಾತ ಕಂ‌ಡುಬರುತ್ತದೆ.

ದೇಹಕ್ಕೆ ಪ್ರೋಟಿನ್ ತುಂಬಾ ಅವಶ್ಯಕವಾದರೂ ಪ್ರೋಟೀನ್ ಅಂಶ ಅತ್ಯಧಿಕವಾದರೆ ಯಾರಿಕ್ ಆಸಿಡ್ ಪ್ರಮಾಣ ಹೆಚ್ಚಾಗುತ್ತದೆ. ಮೂತ್ರಪಿಂಡಗಳು ಅತ್ಯಧಿಕವಾದ ಯಾರಿಕ್ ಆಸಿಡನ್ನು ದೇಹದಿಂದ ಹೊರಹಾಕಲು ವಿಫಲವಾಗುತ್ತವೆ. ಇದರಿಂದ ಸಂಧಿವಾತ ಉಂಟಾಗುತ್ತದೆ. ಬೇರೆ ಬೇರೆ ಕಾರಣಗಳಿಂದಲೂ ಸಂಧಿವಾತ ಬರುತ್ತದೆ.

ವಂಶ ಪಾರಂಪರ್ಯತೆ, ಹೆಚ್ಚಿನ ತೂಕ, ಮಿತಿ ಮೀರಿದ ಕುಡಿತ, ಮಿತಿ ಮೀರಿದ ಡಯಟ್, ಉಪವಾಸ, ಹೆಚ್ಚಿನ ಮಾಂಸಾಹಾರ ಸೇವನೆ, ಶಸ್ತ್ರ ಚಿಕಿತ್ಸೆ, ಕೀಮೊಥೆರಪಿ ಮೊದಲಾದ ಕಾರಣಗಳಿಂದಲೂ ಸಂಧಿವಾತ ಬರಬಹುದು.

ಸಂಧಿವಾತಕ್ಕೆ ಮನೆ ಮದ್ದುಗಳು ಇದೆ. ಇವುಗಳನ್ನು ಸೇವಿಸಿದರೆ ಸಂಧಿವಾತದಿಂದ ದೂರವಿರಬಹುದು.

ಒಳ್ಳೊಳ್ಳೆಯ 3-4 ಬೆಳ್ಳುಳ್ಳಿ ಎಸಳುಗಳನ್ನು ನಿತ್ಯವೂ ಸೇವಿಸುವುದರಿಂದ ಸಂಧಿವಾತದಿಂದ ದೂರವಿರಬಹುದು. ದಿನವೂ 10-12 ಚೆಱ್ರಿ ಹಣ್ಣುಗಳನ್ನು ತಿನ್ನುವುದರಿಂದಲೂ ಸಂಧಿವಾತದ ನೋವಿನಿಂದ ಮುಕ್ತರಾಗಬಹುದು.

ಒಂದು ಟೀ ಚಮಚ ಜೇನುತುಪ್ಪವನ್ನು ಹಾಗೂ ಸೇಬುಹಣ್ಣನ್ನು ಹುಳಿಯಾಗಿ ಮಾ‌ಡಿಸಿದ ಮಿಶ್ರಣ ಮಾಡಿ ಅದನ್ನು ಗ್ಲಾಸ್ ನೀರಿನಲ್ಲಿ ಹಾಕಿ, ನಂತರ ಕುಲುಕಿ ಕುಡಿಯಬೇಕು. ಈ ರೀತಿ ಮಿಶ್ರಣವನ್ನು ದಿನಪೂರ್ತಿ ಕುಡಿದರೆ ಸಂಧಿವಾತಕ್ಕೆ ಉತ್ತಮ ಪರಿಹಾರ ಸಿಗುತ್ತದೆ.

ಅತಿಹೆಚ್ಚು ದ್ರಾಕ್ಷಿ ಸೇವನೆ ಈ ಕಾಯಿಲೆಯಿಂದ ಬಳಲುವವರಿಗೆ ಇರುವ ಅತ್ಯಂತ ಸುಲಭ ಮತ್ತೆ ಪರಿಣಾಮಕಾರಿ ಪರಿಹಾರಗಳು, ಕಾರಣ ಮೂತ್ರದಲ್ಲಿರುವ ವಿಷಕಾರಿ ಅಂಶವನ್ನು ಹೊರ ಹಾಕಲು ಸಹಾಯ ಮಾಡುತ್ತದೆ. ದ್ರಾಕ್ಷಿ ವಿಟಮಿನ್ `ಸಿ’ ಅಂಶ ಹೊಂದಿದೆ. ಇದು ದೇಹದಲ್ಲಿ ಸಂಧಿವಾತಕ್ಕೆ ವಿರುದ್ಧವಾಗಿರುವ ವಸ್ತುಗಳನ್ನು ದೇಹದಿಂದ ಹೊರ ಹಾಕಲು ನೆರವಾಗುತ್ತದೆ.

ಬಾಳೆಹಣ್ಣಿನಲ್ಲಿ ವಿಟಮಿನ್ `ಸಿ’ ಹೇರಳವಾಗಿರುತ್ತದೆ. ನಿತ್ಯವೂ ಬಾಳೆಹಣ್ಣನ್ನು ತಿನ್ನುವುದರಿಂದ ಕೀಲುನೋವುಗಳನ್ನು ನಿವಾರಿಸಬಹುದು.

ಬಾಳೆಹಣ್ಣಿನಲ್ಲಿರುವ ಸಮೃದ್ಧ ಅಂಶಗಳು ದೇಹದಲ್ಲಿರುವ ಯಾರಿಕ್ ಆಮ್ಲದ ಸ್ಫಟಿಕಗಳನ್ನು ದುರ್ಬಲಗೊಳಿಸಿ ದ್ರವ ರೂಪಕ್ಕೆ ತರುವ ಸಾಮರ್ಥ್ಯವನ್ನು ಹೊಂದಿದೆ. ಇದರಿಂದ ಸಂಧಿವಾತದ ನೋವು ನಿವಾರಣೆಯಾಗುತ್ತದೆ.

ಸಾಸಿವೆ ಮತ್ತು ಬ್ರಿಟಿಕಾರಿ ಪೌಡರ್ ಮಿಶ್ರಣದೊಂದಿಗೆ ಅತ್ಯಂತ ನೋವಿರುವ ಜಾಗಕ್ಕೆ ಲೇಪಿಸಿಕೊಂಡರೆ ರಾತ್ರಿ ಒಳಗಾಗುವುದರ ಒಳಗೆ ನೋವು ಕಡಿಮೆಯಾಗುತ್ತದೆ.

Write A Comment