ಕರ್ನಾಟಕ

ಕಿಮ್ಮನೆ ರತ್ನಾಕರ ಮತ್ತು ಪಿಯು ಉಪನ್ಯಾಸಕರೊಂದಿಗೆ ನಡೆದ ನಾಲ್ಕನೆ ಸಭೆಯು ವಿಫಲ

Pinterest LinkedIn Tumblr

kimmaneಬೆಂಗಳೂರು, ಏ.10-ಪಿಯು ಉಪನ್ಯಾಸಕರೊಂದಿಗೆ ನಡೆದ ನಾಲ್ಕನೆ ಸಭೆಯು ವಿಫಲವಾಗಿ ಪ್ರತಿಭಟನೆ ಮುಂದುವರೆಸುವುದಾಗಿ ಉಪನ್ಯಾಸಕರ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ತಿಳಿಸಿದ್ದಾರೆ.

ಸರ್ವಶಿಕ್ಷಣ ಅಭಿಯಾನ ಕಚೇರಿಯಲ್ಲಿ ಇಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಕಿಮ್ಮನೆರತ್ನಾಕರ, ಉಪನ್ಯಾಸಕರ ಸಂಘದ ಪದಾಧಿಕಾರಿಗಳ ಜೊತೆ ಸಭೆ ನಡೆಸಿದರು. ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ಮತ್ತು ಕೆಲ ಪದಾಧಿಕಾರಿಗಳು ಭಾಗವಹಿಸಿದ್ದರು. ಪ್ರತಿಭಟನೆಯನ್ನು ಹಿಂಪಡೆಯುವಂತೆ ಸಚಿವರು ಮನವಿ ಮಾಡಿದರು.

ಸರ್ಕಾರ ನಿಮ್ಮ ಬೇಡಿಕೆಯನ್ನು ಈಡೇರಿಸಲು ಸಿದ್ಧವಿದೆ. ಮೌಲ್ಯಮಾಪನದ ವೇಳೆ ಈ ರೀತಿ ಪಟ್ಟು ಹಿಡಿಯುವುದು ಸರಿಯಲ್ಲ. ಕೇವಲ ಒಂದು ಇಲಾಖೆಯ ವೇತನ ಪರಿಷ್ಕರಣೆ ಮಾಡುವುದು ಕಷ್ಟ.ಸರ್ಕಾರದ 28 ಇಲಾಖೆಗಳಿಗೂ ವೇತನ ಪರಿಷ್ಕರಣೆ ಮಾಡಬೇಕಾಗುತ್ತದೆ ಎಂದು ಮನವರಿಕೆ ಮಾಡಿಕೊಟ್ಟರು. ಸಚಿವರ ಮನವಿಯನ್ನು ಅಂಗೀಕರಿಸದ ಉಪನ್ಯಾಸಕರ ಸಂಘದ ಪದಾಧಿಕರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸುವುದಾಗಿಯೂ ಭರವಸೆ ನೀಡಿದರು.

Write A Comment