ರಾಷ್ಟ್ರೀಯ

ಪಾಕ್ ಸೈನಿಕರಿಂದ ಕದನ ವಿರಾಮ ಉಲ್ಲಂಘನೆ : ಭಾರತೀಯ ಪಡೆಗಳ ಮೇಲೆ ಗುಂಡಿನ ದಾಳಿ

Pinterest LinkedIn Tumblr

pakಜಮ್ಮು,ಏ.10-ಜಮ್ಮುಕಾಶ್ಮೀರದ ಪೂಂಚ್ ಸೆಕ್ಟರ್‌ನ ಶಹಪುರ್ ಪ್ರದೇಶದಲ್ಲಿ ಇಂದು ಕದನ ವಿರಾಮ ಉಲ್ಲಂಘಿಸಿದ ಪಾಕಿಸ್ತಾನ ಸೈನಿಕರು ಭಾರತೀಯ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.

ಪಾಕ್ ಸೈನಿಕರ ಈ ಅಪ್ರಚೋದಿತ ಗುಂಡಿನ ದಾಳಿಗೆ ಭಾರತೀಯ ಪಡೆಗಳು ತಕ್ಕ ಪ್ರತ್ಯುತ್ತರ ನೀಡಿವೆ. ಪಾಕಿಸ್ತಾನ ಸೈನಿಕರತ್ತ ಗಡಿಭದ್ರತಾ ಸಿಬ್ಬಂದಿ ಪ್ರತಿದಾಳಿ ನಡೆಸಿದ್ದಾರೆ. ಆದರೆ ಎರಡೂ ಕಡೆ ಯಾವುದೇ ಸಾವುನೋವು ಸಂಭವಿಸಿಲ್ಲ ಎಂದು ರಕ್ಷಣಾ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಮನೀಶ್ ಮೆಹತ ತಿಳಿಸಿದ್ದಾರೆ.

ಇಂದು ಬೆಳಗಿನ ಜಾವ 4.30ರ ವೇಳೆಗೆ ಪಾಕಿಸ್ತಾನ ಸೈನಿಕರು ಈ ದಾಳಿ ನಡೆಸಿದ್ದು , ದಾಳಿಗೆ ಸ್ವಯಂಚಾಲಿತ ಶಸ್ತ್ರಾಸ್ತ್ರಗಳನ್ನು ಬಳಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Write A Comment