ಕರ್ನಾಟಕ

ಒಂದೂವರೆ ದಶಕದ ನಂತರ ಸಿನಿಮಾಗೆ ಮರಳಿದ ಶಾಸಕ ಸಿ.ಪಿ ಯೋಗೇಶ್ವರ್

Pinterest LinkedIn Tumblr

yogishwar

ಬೆಂಗಳೂರು: ಒಂದೂವರೆ ದಶಕದ ಕಾಲ ರಾಜಕೀಯದಲ್ಲಿ ಸಕ್ರಿಯರಾಗಿದ್ದ ಯೋಗೇಶ್ವರ್‌, ಪುನಃ ಬಣ್ಣ ಹಚ್ಚಿಕೊಳ್ಳುವ ಉತ್ಸಾಹದಲ್ಲಿದ್ದಾರೆ. ಸೈನಿಕ-2′ ಚಿತ್ರ ಮಾಡಬೇಕು ಎಂಬ ಯೋಚನೆಯಲ್ಲಿರುವ ಯೋಗೇಶ್ವರ್‌, ಅದಕ್ಕಾಗಿಯೇ ಸಾಕಷ್ಟು ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾರೆ.

ಹಲವು ವರ್ಷಗಳ ಗ್ಯಾಪ್‌ ನಂತರ ಕ್ಯಾಮೆರಾ ಎದುರಿಸಲು ಸಿದ್ದವಾಗಿರುವ ಸಿ.ಪಿ.ಯೋಗೇಶ್ವರ್‌, ಇನ್ನೆರೆಡು ತಿಂಗಳಲ್ಲಿ “ಸೈನಿಕ-2′ ಚಿತ್ರದ ಚಿತ್ರೀಕರಣಕ್ಕೆ ತೆರಳಲಿದ್ದಾರೆ.

ಈ ಹಿಂದೆ ಸೈನಿಕ 2002ರಲ್ಲಿ ಸೈನಿಕ ಚಿತ್ರ ಮಾಡಿದ ಯೋಗೇಶ್ವರ್ ಗೆ ಅಂದು ಬಯಸಿದ್ದಷ್ಟು ಚಿತ್ರದಿಂದ ಯಶಸ್ಸು ಸಿಕ್ಕಿರಲಿಲ್ಲ.

ಚಿತ್ರರಂಗದಲ್ಲಿ ಹಲವು ಕಥೆಗಳನ್ನಿಟ್ಟುಕೊಂಡು ಸಿನಿಮಾ ಮಾಡುತ್ತಿದ್ದಾರೆ. ಆದರೇ ದೇಶ ಕಾಯುವ ಸೈನಿಕರ ಬಗ್ಗೆ ಯಾವುದೇ ಸಿನಿಮಾಗಳು ಬರುತ್ತಿಲ್ಲ. ಹೀಗಾಗಿ ಸೈನಿಕ-2 ಮಾಡಲು ಸಿದ್ದವಾಗುತ್ತಿರುವುದಾಗಿ ಯೋಗೇಶ್ವರ್ ಹೇಳಿದ್ದಾರೆ. ಇತ್ತೀಚೆಗೆ ನಡೆದಂತಹ ಹಲವು ಬೆಳವಣಿಗೆಗಳನ್ನು ಇಟ್ಟುಕೊಂಡು, ಸೈನಿಕರ ಸ್ಥಿತಿಗತಿ, ಅವರಿಗಾಗಿರುವ ಸಮಸ್ಯೆ, ಕುಟುಂಬ ಪಡುತ್ತಿರುವ ನೋವು, ಅವರು ಎಷ್ಟರಮಟ್ಟಿಗೆ ದೇಶದ ರಕ್ಷಣೆ ಮಾಡುತ್ತಿದ್ದಾರೆ.

ಅವರಿಗಾಗುತ್ತಿರುವ ಅನಾನುಕೂಲಗಳೇನು, ಎಷ್ಟೆಲ್ಲಾ ನೋವುಗಳನ್ನು ಪಡುತ್ತಾರೆ ಎಂಬಿತ್ಯಾದಿ ವಿಷಯ ಒಳಗೊಂಡಂತೆ, ಒಂದು ಮನಕಲಕುವ ಮತ್ತು ದೇಶಪ್ರೇಮ ಹೆಚ್ಚಿಸುವಂತಹ ಚಿತ್ರ ಮಾಡುವ ಆಸೆಯನ್ನು ಯೋಗೇಶ್ವರ್ ವ್ಯಕ್ತ ಪಡಿಸಿದ್ದಾರೆ.

ಸಿಯಾಚಿನ್ ದುರಂತದಲ್ಲಿ ಹುತಾತ್ಮರಾದ ಕರ್ನಾಟಕದ ಯೋಧರ ಕಥೆಯನ್ನು ಆಧಾರವಾಗಿಟ್ಟುಕೊಂಡು ಸಿನಿಮಾ ಮಾಡಲು ಯೋಗೇಶ್ವರ್ ಬಯಸಿದ್ದಾರೆ. ಮಿಲಿಟರಿ ಕ್ಯಾಂಪ್ ನಲ್ಲಿ ಶೂಟಿಂಗ್ ಮಾಡಲು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರ ಅನುಮತಿ ಪಡೆಯುವುದಾಗಿಯೂ ಅವರು ಹೇಳಿದ್ದಾರೆ.

ಇಂಡಿಯನ್‌ ಡಿಫೆನ್ಸ್‌ನ ಸಹಾಯ ತೆಗೆದುಕೊಂಡು, ನೈಜತೆ ಜತೆಗೆ ಕೆಲ ವಿಷಯ ಇಟ್ಟುಕೊಂಡು ಕಥೆ ಹೆಣೆಯಲಾಗುತ್ತಿದೆ. ಇಲ್ಲಿ ಬುದ್ಧಿವಂತ ತಂಡವೊಂದನ್ನು ಕಟ್ಟಿಕೊಂಡು ಕೆಲಸ ಮಾಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.

Write A Comment