ಮನೋರಂಜನೆ

ಸಾಮರ್ಥ್ಯವಿದ್ದರೆ ನನಗೆ ಟೀಂ ಇಂಡಿಯಾ ಕೋಚ್ ಹುದ್ದೆ ಸಿಗುತ್ತದೆ: ರಾಹುಲ್ ದ್ರಾವಿಡ್

Pinterest LinkedIn Tumblr

Rahul Dravid

ನವದೆಹಲಿ: ನನಗೆ ಸಾಮರ್ಥ್ಯ ಇದೆಯೇ ಎಂಬುದು ಟೀಂ ಇಂಡಿಯಾ ಕೋಚ್ ಆಗುವುದನ್ನು ನಿರ್ಧರಿಸುತ್ತದೆ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅಭಿಪ್ರಾಯ ಪಟ್ಟಿದ್ದಾರೆ.

ಐಸಿಸಿ ಟಿ-20 ನಂತರ ಟೀಂ ಇಂಡಿಯಾ ನಿರ್ದೇಶಕರಾಗಿರುವ ರವಿಶಾಸ್ತ್ರಿ ಅವರ ಅವಧಿ ಅಂತ್ಯವಾಗಲಿದ್ದು , ಟೀ ಇಂಡಿಯಾ ಕೋಚ್ ಹುದ್ದೆಗೆ ರಾಹುಲ್ ದ್ರಾವಿಡ್ ಹೆಸರು ಕೇಳಿಬರುತ್ತಿದೆ. ಆದರೆ ಇದೂವರೆಗೂ ದ್ರಾವಿಡ್ ತಮ್ಮ ಅಂತಿಮ ನಿಲುವೇನು ಎಂಬುದನ್ನು ಪ್ರಕಟಿಸಿಲ್ಲ.

ಭಾರತದ ಹಿರಿಯರ ಕ್ರಿಕೆಟ್ ತಂಡದ ತರಬೇತುದಾರರಾಗಲು ತಾವು ಸಿದ್ದರಿದ್ದೀರಾ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾಹುಲ್ ನನಗೆ ಟೀಂ ಇಂಡಿಯಾ ಕೋಚ್ ಆಗುವ ಅರ್ಹತೆ ಇದ್ದರೇ ಆ ಹುದ್ದೆ ಸಿಗುತ್ತದೆ ಎಂದು ಹೇಳಿದರು.

ದ್ರಾವಿಡ್ ಸದ್ಯ ಅಂಡರ್ -19 ಭಾರತೀಯ ತಂಡದ ತರಬೇತುದಾರರಾಗಿದ್ದು, ಡೆಲ್ಲಿ ಡೇರ್ ಡೆವಿಲ್ ತಂಡಕ್ಕೂ ಕೋಚ್ ಆಗಿದ್ದಾರೆ. ನಾನು ಯಾವುದೇ ನಿರ್ಧಾರವನ್ನು ಕೈಗೊಳ್ಳಬೇಕಿದ್ದರೂ ಹಲವು ಬಾರಿ ಯೋಚಿಸಿ, ಪರಿಶೀಲನೆ ನಡೆಸಿದ ನಂತರವಷ್ಟೇ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇನೆ. ಜೊತೆಗೆ ಹಲವು ವಿಷಯಗಳನ್ನು ಪರಿಗಣೆನೆಗೆ ತೆಗೆದುಕೊಂಡು ಪರಾಮರ್ಶಿಸುವುದಾಗಿ ದ್ರಾವಿಡ್ ಹೇಳಿದ್ದಾರೆ.

ನಾವು ತೆಗೆದುಕೊಂಡ ನಿರ್ಧಾರದಿಂದ ಉತ್ತಮ ಫಲಿತಾಂಶ ಬರುತ್ತದೋ ಬಿಡುತ್ತದೋ ಅದು ನಗಣ್ಯ. ಆದರೆ ಒಂದು ಬಾರಿ ಕಮಿಟ್ ಮೆಂಟ್ ಮಾಡಿಕೊಂಡರೇ ಅದಕ್ಕೆ ಕಠಿಣ ಪರಿಶ್ರಮ ಹಾಕುವುದು ನನ್ನ ಕರ್ತವ್ಯ ಎಂದು ಹೇಳಿದ್ದಾರೆ. ನಾನು ಕಲಿಯುವುದು ಇನ್ನೂ ಇದೆ. ಪ್ರತಿದಿನ ನಾನು ಹೊಸತನ್ನು ಕಲಿಯುತ್ತಾ ಇದ್ದೇನೆ ಎಂದು ಹೇಳಿದ್ದಾರೆ. ತಾವು ತರಬೇತು ನೀಡುತ್ತಿರುವ 19 ವರ್ಷ ಕೆಳಗಿನ ಕ್ರಿಕೆಟ್ ತಂಡ ಇತ್ತೀಚೆಗೆ ವೆಸ್ಟ್ ಇಂಡೀಸ್ ವಿರುದ್ಧ ಸೋಲು ಅನುಭವಿಸಿದ್ದನ್ನು ದ್ರಾವಿಡ್ ಸ್ಮರಿಸಿದರು.

Write A Comment