ಮನೋರಂಜನೆ

ಭಾವಿ ಮಾವನಿಂದ ಜಡೇಜಾಗೆ 97 ಲಕ್ಷ ರು. ಆಡಿ ಕ್ಯೂ7 ಕಾರ್ ಉಡುಗೊರೆ!

Pinterest LinkedIn Tumblr

ravindra

ಟೀಂ ಇಂಡಿಯಾದ ಆಲ್ ರೌಂಡರ್ ರವೀಂದ್ರ ಜಡೇಜಾ ಏಪ್ರಿಲ್ 17ರಂದು ಗೆಳತಿ ರೇವಾ ಸೋಲಂಕಿಯನ್ನು ವಿವಾಹವಾಗುತ್ತಿದ್ದು, ಮದುವೆಗೆ ಮುಂಚೆಯೇ ಜಡೇಜಾ ಭಾವಿ ಮಾವನವರು 97 ಲಕ್ಷ ರುಪಾಯಿ ಮೌಲ್ಯ ಆಡಿ ಕ್ಯೂ7 ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.

ಫೆಬ್ರವರಿ 5 ರಂದು 27 ವರ್ಷದ ಜಡೇಜಾ ಮತ್ತು ಮೆಕ್ಯಾನಿಕಲ್ ಎಂಜಿನಿಯರ್ ಆಗಿರುವ ರೇವಾ ನಿಶ್ಚಿತಾರ್ಥ ನಡೆದಿತ್ತು. ರಾಜ್‌ಕೋಟ್‌ನಲ್ಲಿ ಎರಡು ಖಾಸಗಿ ಶಾಲೆ ಹೊಂದಿರುವ ರೇವಾ ತಂದೆ ಹರ್‌ದೇವ್ ಸಿನ್ಹ ಸೋಲಂಕಿ, ಭಾವಿ ಅಳಿಯನಿಗೆ ಕಾರನ್ನು ಗಿಫ್ಟ್ ಆಗಿ ನೀಡಿದ್ದಾರೆ.

ಹರ್ ದೇವ್ ರ ಒಬ್ಬಳೆ ಮಗಳಾಗಿರುವ ರೇವಾರ ವಿವಾಹವನ್ನು ಭರ್ಜರಿಯಾಗಿ ನಡೆಸಲು ಸಿದ್ಧತೆ ನಡೆಸಿದ್ದಾರೆ. ಜಡೇಜಾ ಮತ್ತು ರೇವಾ ಸ್ಥಳೀಯ ಶೋರೂಮ್‌ಗೆ ತೆರಳಿ ಕಾರನ್ನು ಪಡೆದುಕೊಂಡಿದ್ದಾರೆ. ಈ ವೇಳೆ ರೇವಾ ಕಾರಿಗೆ ತಿಲಕವಿಟ್ಟು ಪೂಜೆಯನ್ನೂ ಮಾಡಿದ್ದಾರೆ.

ಮದುವೆ ಕಾರ್ಯಕ್ರಮ ಜಡೇಜಾರ ತವರು ನಗರ ಜಮ್‌ನಗರ್‌ನಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ ಮೂರು ದಿನಗಳ ಕಾಲ ಅದ್ಧೂರಿಯಾಗಿ ನಡೆಯಲಿದೆ ಎಂದು ಮೂಲ ತಿಳಿಸಿವೆ.

Write A Comment