ಕುಂದಾಪುರ: ಅಂದರ್-ಬಾಹರ್ ಇಸ್ಪೀಟ್ ಜುಗಾರಿ ಆಟ ಆಡುತ್ತಿದ್ದ ವೇಳೆ ಗಂಗೊಳ್ಳಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳ ಸಮೇತ ಪಣಕ್ಕಿಟ್ಟ ಹಣವನ್ನು ಜಪ್ತಿ ಮಾಡಿದ ಘಟನೆ ತ್ರಾಸಿ ಬೀಚ್ ಸಮೀಪ ಪ್ರವಾಸಿ ಮಂದಿರ ಬಳಿ ನಡೆದಿದೆ.
ಜುಗಾರಿ ನಡೆಯುತ್ತಿದ್ದ ಬಗ್ಗೆ ಖಚಿತ ವರ್ತಮಾನದ ಬಗ್ಗೆ ಗಂಗೊಳ್ಳಿ ಠಾಣೆ ಪಿ.ಎಸ್.ಐ. ಸುಬ್ಬಣ್ಣ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದ್ದು ಆರೋಪಿಗಳು ಬುಧವಾರ ಮುಂಜಾನೆ ಕಡಲ ತೀರದಲ್ಲಿ ಕ್ಯಾಂಡಲ್ ಬೆಳಕಲ್ಲಿ ಜುಗಾರಿ ಆಟವನ್ನಾಡುತ್ತಿದ್ದರು. ಈ ವೇಳೆ 7 ಮಂದಿ ಜೂಜುಕೋರರನ್ನು ಬಂಧಿಸಿ 14,190ರೂ. ಹಣ ಜಪ್ತಿ ಮಾಡಲಾಗಿದೆ.
ಬಂಧಿತ ಆರೋಪಿಗಳನ್ನು ರಮೇಶ (31), ಭರತ್ (35), ಸುಬ್ರಹ್ಮಣ್ಯ (30), ಯೋಗೀಂದ್ರ (34), ರಾಘವೇಂದ್ರ (26), ಮಹೇಶ (30), ಪಾಂಡು (31) ಎಂದು ಗುರುತಿಸಲಾಗಿದೆ.
ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
(ಸಾಂದರ್ಭಿಕ ಚಿತ್ರ)