ಅಂತರಾಷ್ಟ್ರೀಯ

ಟಿ 20 ವಿಶ್ವಕಪ್ ವೇಳೆ 46 ಮಿಲಿಯನ್ ಗೂ ಹೆಚ್ಚು ಜನರಿಂದ ಫೇಸ್ ಬುಕ್ ನಲ್ಲಿ ಸಂಭಾಷಣೆ!

Pinterest LinkedIn Tumblr

A smartphone user shows the Facebook application on his phone in Zenica, in this photo illustration

ನವದೆಹಲಿ: ಪ್ರಸಕ್ತ ಸಾಲಿನ ಐಸಿಸಿ ಟಿ 20 ವಿಶ್ವಕಪ್ ಟೂರ್ನಿಯ ವೇಳೆ 46 ಮಿಲಿಯನ್ ಗೂ ಹೆಚ್ಚು ಜನರು ಫೇಸ್ ಬುಕ್ ಮೂಲಕ ಪರಸ್ಪರ ಸಂಭಾಷಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಫೆ.15 ರಂದು ನಡೆದ ಪಾಕಿಸ್ತಾನ- ಭಾರತ ನಡುವಿನ ಪಂದ್ಯದ ವೇಳೆ 8 .2 ಮಿಲಿಯನ್ ಗೂ ಹೆಚ್ಚು ಜನರು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಸಕ್ರಿಯರಾಗಿದ್ದರು. ಇನ್ನು ವೆಸ್ಟ್ ಇಂಡೀಸ್- ಇಂಗ್ಲೆಂಡ್ ನಡುವಿನ ಫೈನಲ್ ಪಂದ್ಯದಲ್ಲಿ 6 .1 ಮಿಲಿಯನ್ ಗೂ ಹೆಚ್ಚು ಜನನರು ಫೇಸ್ ಬುಕ್ ನಲ್ಲಿ ಸಕ್ರಿಯರಾಗಿದ್ದು ಸಂವಹನ ನಡೆಸಿದ್ದಾರಂತೆ.

ಇಷ್ಟೇ ಅಲ್ಲದೇ ಫೇಸ್ ಬುಕ್ ನಲ್ಲಿರುವ ಐಸಿಸಿ ಹಾಗೂ ಭಾರತ ತಂಡದ ಪೇಜ್ ನಲ್ಲಿರುವ ವಿಡಿಯೋಗಳನ್ನು ಮಾ.8 ರಿಂದ ಏ.3 ವರೆಗೆ 180 ಮಿಲಿಯನ್ ಜನರು ವೀಕ್ಷಿಸಿದ್ದಾರೆ ಎಂದು ಫೇಸ್ ಬುಕ್ ತಿಳಿಸಿದೆ. ವಿರಾಟ್ ಕೊಹ್ಲಿ, ಮಹೇಂದ್ರ ಸಿಂಗ್ ಧೋನಿ, ಪಾಕಿಸ್ತಾನದ ಶಾಹಿದ್ ಅಫ್ರೀದಿ, ವೆಸ್ಟ್ ಇಂಡೀಸ್ ನ ಕ್ರಿಸ್ ಗೆಲ್, ರೋಹಿತ್ ಶರ್ಮಾ, ಬಾಂಗ್ಲಾದೇಶದ ತಮೀಮ್ ಇಕ್ಬಾಲ್ ಹಾಗೂ ಇಂಗ್ಲೆಂಡ್ ನ ಜೋ ರೂಟ್ ವಿಶ್ವಕಪ್ ಟೂರ್ನಿಯಲ್ಲಿ ಅತಿ ಹೆಚ್ಚು ಉಲ್ಲೇಖಿಸಲಾದ ಕ್ರಿಕೆಟರ್ ಗಳ ಹೆಸರಾಗಿದೆ.

Write A Comment