ಮನೋರಂಜನೆ

ಐಪಿಎಲ್9: ಇನ್ನುಂದೆ ಪ್ರೇಕ್ಷಕರು ಥರ್ಡ್‌ ಅಂಪೈರ್ ರೀತಿ ತೀರ್ಪು ಪ್ರಕಟಿಸುವ ಅವಕಾಶ

Pinterest LinkedIn Tumblr

IPL

ಮುಂಬೈ: ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್)ನ 9ನೇ ಆವೃತ್ತಿಯಲ್ಲಿ ಮೂರನೇ ಅಂಪೈರ್ ತೀರ್ಪು ಪ್ರಕಟಿಸುವ ವೇಳೆ ಪ್ರೇಕ್ಷಕರಿಗೂ ತೀರ್ಪು ಹೇಳುವ ಅವಕಾಶ ಈ ಬಾರಿ ಲಭಿಸಲಿದೆ ಎಂದು ಐಪಿಎಲ್ ಚೇರ್ಮನ್ ರಾಜೀವ್ ಶುಕ್ಲಾ ತಿಳಿಸಿದ್ದಾರೆ.

ಐಪಿಎಲ್ ಪಂದ್ಯ ವೀಕ್ಷಿಸಲು ಬರುವ ಪ್ರೇಕ್ಷಕರಿಗೆ ಪ್ಲೇ ಕಾರ್ಡ್ ವಿತರಿಸಲಾಗುವುದು. ಪ್ರೇಕ್ಷಕರು ಪ್ರಕಟಿಸುವ ತೀರ್ಪನ್ನು ಸ್ಕ್ರೀನ್‌ನಲ್ಲಿ ತೋರಿಸಲಾಗುತ್ತದೆ. ಆದರೆ ಅಂತಿಮವಾಗಿ ಮೂರನೇ ಅಂಪೈರ್ ನೀಡುವ ನಿರ್ಧಾರವೇ ಅಂತಿಮ ಎಂದು ತಿಳಿಸಿದ್ದಾರೆ.

ಪ್ರೇಕ್ಷಕರು ನೀಡುವ ತೀರ್ಪನ್ನು ಅಂಪೈರ್ ಪರಿಗಣಿಸಬೇಕೆನ್ನುವ ನಿಯಮವಿಲ್ಲ. ಟಿವಿ ಸ್ಕ್ರೀನ್ ನೋಡಿಕೊಂಡು ಅಂಪೈರ್ ತೀರ್ಪು ಪ್ರಕಟಿಸುತ್ತಾರೆ. ಸ್ಟೇಡಿಯಂಗೆ ಹೆಚ್ಚು ಪ್ರೇಕ್ಷಕರನ್ನು ಸೆಳೆಯುವ ದೃಷ್ಟಿಯಿಂದ ಈ ಕ್ರಮಕೈಗೊಳ್ಳಲಾಗಿದೆ ಎಂದು ಶುಕ್ಲಾ ಹೇಳಿದರು.

Write A Comment