ರಾಷ್ಟ್ರೀಯ

25 ದಿನಗಳ ಗಂಡು ಮಗುವಿನ ನಿಗೂಢ ಸಾವು

Pinterest LinkedIn Tumblr

baby

ಹೈದರಾಬಾದ್: 25 ದಿನಗಳ ಹಸುಗೂಸನ್ನು ಕತ್ತು ಸೀಳಿ ಹತ್ಯೆ ಮಾಡಿರುವ ಘಟನೆ ಹೈದರಾಬಾದ್ ನ ನೀರ್ ದಮಿತ್ ಪೊಲೀಸ್ ಠಾಣೆಯಲ್ಲಿ ನಡೆದಿದೆ.

ತಾಯಿ ಹಾಗೂ 25 ದಿನಗಳ ಗಂಡು ಮಗುವಿಗೆ ಯಾರೋ ಇಬ್ಬರು ಅಪರಿಚಿತರು ಮೂಗಿಗೆ ಕೆಮಿಕಲ್ ಸಿಂಪಡಿಸಿದ್ದಾರೆ. ತಾಯಿ ಮಗು ಪ್ರಜ್ಞೆ ತಪ್ಪಿ ಬಿದ್ದ ನಂತರ, ಮಗುವಿನ ಮೈಮೇಲೆ ಇದ್ದ ಚಿನ್ನದ ಆಭರಣಗಳನ್ನು ಕದ್ದು ಪರಾರಿಯಾಗಿದ್ದಾರೆ.

ಆರ್ ಕೆ ಪುರಂ ಮೇಲ್ಸೇತುವೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ನೀರ್ ದಮಿತ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮಗುವಿನ ಶವವನ್ನು ಹೈದರಾಬಾದ್ ನ ಗಾಂಧಿ ಆಸ್ಪತ್ರೆಗೆ ರವಾನಿಸಲಾಗಿದೆ.

Write A Comment