ಮನೋರಂಜನೆ

ಪ್ರತ್ಯೂಷಾ ಮೇಲೆ ರಾಹುಲ್ ನಿಂದ ನಿರಂತರ ಕಿರುಕುಳ, ಹಲ್ಲೆ: ಪೋಷಕರ ಆರೋಪ

Pinterest LinkedIn Tumblr

Rahul-Pratyusha

ನವದೆಹಲಿ: ಕಿರುತೆರೆ ನಟಿ ಪ್ರತ್ಯೂಷಾ ಬ್ಯಾನರ್ಜಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಆಕೆಯ ಪೋಷಕರ ಹೇಳಿಕೆಯನ್ನು ಪಡೆದಿದ್ದಾರೆ.

ರಾಹುಲ್ ರಾಜ್ ಸಿಂಗ್ ಪ್ರತ್ಯೂಷಾ ಬ್ಯಾನರ್ಜಿಯ ಮೇಲೆ ಹಲ್ಲೆ ಮಾಡುತ್ತಿದ್ದಲ್ಲದೇ, ಆಕೆಯ ಮೇಲೆ ದೌರ್ಜನ್ಯವೆಸಗುತ್ತಿದ್ದನು ಎಂದು ಪೋಷಕರು ಹೇಳಿಕೆ ನೀಡಿದ್ದಾರೆ.

ಬಾಲಿಕ ವಧು ಧಾರವಾಹಿಯಲ್ಲಿ ಅಭಿನಯಿಸುತ್ತಿರಬೇಕಾದರೆ, ಬಹುಬೇಡಿಕೆ ನಟಿಯಾಗಿದ್ದು, ಹೆಚ್ಚಾಗಿ ಸಂಪಾದಿಸುತ್ತಿದ್ದಳು. ಈ ವೇಳೆ ರಾಹುಲ್ ಪರಿಚಯವಾಗಿದೆ. ರಾಹುಲ್ ತನ್ನ ಬಳಿ ಸಾಕಷ್ಟು ಆಸ್ತಿ ಇದೆ ಎಂದು ಸುಳ್ಳು ಹೇಳಿಕೊಂಡಿದ್ದನು. ನಂತರ ಆಕೆಯನ್ನು ತನ್ನ ನಿಯಂತ್ರಣಕ್ಕೆ ತೆಗದುಕೊಂಡು, ಆಕೆಯ ಮೇಲೆ ಹಲ್ಲೆ ಮಾಡುತ್ತಿದ್ದನು.

ಅಷ್ಟೇ ಅಲ್ಲದೆ, ನೀನು ನಿನ್ನ ತಂದೆ ತಾಯಿ ಜೊತೆ ವಾಸವಿದ್ದರೇ, ಜೀವಂತ ಉಳಿಸುವುದಿಲ್ಲ ಎಂದು ಪ್ರತ್ಯೂಷಾಳಿಗೆ ಬೆದರಿಕೆ ಹಾಕಿದ್ದನು. ಹಾಗಾಗಿ, ನಾವು ಊರಿನಲ್ಲಿ ವಾಸವಾಗಿದ್ದೆವು. ಪ್ರತ್ಯೂಷಾ ರಾಹುಲ್ ನೊಂದಿಗೆ ವಾಸವಾಗಿದ್ದಳು ಎಂದು ಪೋಷರು ತಿಳಿಸಿದ್ದಾರೆ.

ಇತ್ತೀಚೆಗೆ ರಾಹುಲ್ ಗೆ ಮೊದಲೇ ಮದುವೆಯಾಗಿದ್ದು, ಅವನಿಗೆ 9 ವರ್ಷದ ಮಗನಿದ್ದಾನೆ ಎಂಬ ವಿಷಯ ಪ್ರತ್ಯೂಷಾಳಿಗೆ ತಿಳಿದಿತ್ತು ಎಂಬ ಮಾಹಿತಿಯನ್ನು ಪೋಷಕರು ನೀಡಿದ್ದಾರೆ.

ಇನ್ನು ಎದೆ ನೋವು ಹಿನ್ನಲೆಯಲ್ಲಿ ಕಳೆದ ಏಪ್ರಿಲ್ 4ರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಾಹುಲ್ ರಾಜ್ ಸಿಂಗ್ ಅವರನ್ನು ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ ಬಂಧಿಸುವ ಸಾಧ್ಯತೆ ಇದೆ.

ಪ್ರತ್ಯೂಷಾ ತಾಯಿ ಸೋಮಾ ಅವರು ರಾಹುಲ್ ರಾಜ್ ಸಿಂಗ್ ಅವರ ವಿರುದ್ಧ ಬಂಗೂರ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಆರೋಪಿಯ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಹಾಗೂ ಹಲ್ಲೆ ಮಾಡಿದ ಆರೋಪದಡಿ ಪೊಲೀಸರು ಎಫ್ಐಆರ್ ದಾಖಲಿಸಿದ್ದರು.

ಪ್ರಕರಣ ಸಂಬಂಧ ಪೊಲೀಸರು ಇದುವರೆಗೆ 12 ಜನರ ಹೇಳಿಕೆಗಳನ್ನು ದಾಖಲಿಸಿದ್ದು, ರಾಹುಲ್ ಜೊತೆಗಿನ ಸಂಬಂಧದ ಬಗ್ಗೆ ಪ್ರತ್ಯೂಷಾ ತುಂಬಾನೆ ನೊಂದಿದ್ದಳು ಮತ್ತು ಕಾರ್ಯಕ್ರಮವೊಂದರಲ್ಲಿ ರಾಹುಲ್ ರಾಜ್ ಸಿಂಗ್ ಸಾರ್ವಜನಿಕವಾಗಿಯೇ ಆಕೆಯ ಮೇಲೆ ಹಲ್ಲೆ ನಡೆಸಿದ್ದ ಎಂದು ಪ್ರತ್ಯೂಷಾ ಗೆಳತಿ ಪೊಲೀಸರಿಗೆ ತಿಳಿಸಿದ್ದರು.

Write A Comment