ಕರ್ನಾಟಕ

ಮತ್ತೊಂದು ಖಂಡಾಂತರ ಕ್ಷಿಪಣಿ ಉಡಾವಣೆ ಮಾಡಿದ ಉತ್ತರ ಕೊರಿಯ

Pinterest LinkedIn Tumblr

udaಬೆಂಗಳೂರು,ಏ.1-ಪರಮಾಣು ಶಸ್ತ್ರಾಸ್ತ್ರಗಳ ಬಳಕೆ ಕುರಿತಂತೆ ಚರ್ಚಿಸಲು ಅತ್ತ ವಾಷಿಂಗ್ಟನ್‌ನಲ್ಲಿ ವಿಶ್ವ ನಾಯಕರು ಸಮಾವೇಶಗೊಂಡಿರುವಂತೆಯೇ ಇತ್ತ ಉತ್ತರ ಕೊರಿಯಾ ತನ್ನ ಪೂರ್ವ ಕರಾವಳಿಯಲ್ಲೂ ಮತ್ತೊಂದು ಖಂಡಾಂತರ ಕ್ಷಿಪಣಿಯನ್ನು ಉಡಾಯಿಸಿದೆ ಎಂದು ದಕ್ಷಿಣ ಕೊರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಜ.6ರಂದು ಉತ್ತರ ಕೊರಿಯ ನಾಲ್ಕು ಕ್ಷಿಪಣಿಗಳನ್ನು ಉಡಾಯಿಸಿತ್ತು. ಅಲ್ಲಿಂದೀಚೆಗೆ ಆಗಾಗ ಉಡಾವಣೆ ಕಾರ್ಯವನ್ನು ಅದು ಮುಂದುವರಿಸುತ್ತಲೇ ಬಂದಿದೆ.

ಸ್ಯಾಂಡೋಕ್ ಪೂರ್ವ ನಗರದ ಕಡಲ ತೀರದಲ್ಲಿ ನಿನ್ನೆ ಮಧ್ಯಾಹ್ನ 12.45ಕ್ಕೆ ಈ ಕ್ಷಿಪಣಿ ಉಡಾಯಿಸಲಾಗಿದೆ ಎಂದು ದಕ್ಷಿಣ ಕೋರಿಯಾದ ಅಧಿಕಾರಿಗಳು ಹೇಳಿದ್ದಾರೆ. ಈ ಕ್ಷಿಪಣಿಯ ವ್ಯಾಪ್ತಿ ಎಷ್ಟು ಎಂಬುದು ದೃಢಪಟ್ಟಿಲ್ಲ. ಉತ್ತರ ಕೊರಿಯಾದ ಈ ಕ್ಷಿಪಣಿ ಉಡಾವಣೆ ಜಪಾನ್ ಮತ್ತಿತರ ನೆರೆ ರಾಷ್ಟ್ರಗಳಲ್ಲಿ ಆತಂಕ ಮೂಡಿಸಿದೆ.

Write A Comment