ರಾಷ್ಟ್ರೀಯ

ಪಠಾಣ್‌ಕೋಟ್ ದಾಳಿ ಪ್ರಕರಣ : ಪಾಕ್ ತಂಡದಿಂದ ಸಾಕ್ಷಿಗಳ ವಿಚಾರಣೆ

Pinterest LinkedIn Tumblr

patanಅಮೃತಸರ್, ಏ.1- ಪಠಾಣ್‌ಕೋಟ್ ವಾಯುನೆಲೆ ಮೇಲಿನ ಭಯೋತ್ಪಾದಕ ದಾಳಿ ಕುರಿತಂತೆ ತನಿಖೆ ನಡೆಸುತ್ತಿರುವ ಪಾಕಿಸ್ಥಾನದ ಜಂಟಿ ತನಿಖಾ ತಂಡ (ಜೆಐಟಿ) ಗುರುದಾಸ್‌ಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಾಲ್ವಿಂದರ್‌ಸಿಂಗ್ ಸೇರಿದಂತೆ ಒಟ್ಟು 13 ಜನ ಸಾಕ್ಷಿದಾರರ ವಿಚಾರಣೆ ನಡೆಸಿದೆ.

ದಾಳಿ ವೇಳೆ ಬಲಿಯಾದ ನಾಲ್ವರು ಉಗ್ರರ ಡಿಎನ್‌ಎ ವರದಿಗಳು ಹಾಗೂ ದೂರವಾಣಿ ಕರೆ ವಿವರಗಳು ಸೇರಿದಂತೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಹಲವು ದಾಖಲೆಗಳನ್ನು ಪಾಕಿಸ್ಥಾನದ ಜಂಟಿ ತನಿಖಾ ತಂಡಕ್ಕೆ ನೀಡಿದೆ.

ದಾಳಿಯಲ್ಲಿ ಮೃತಪಟ್ಟ ಉಗ್ರರ ಮರಣೋತ್ತರ ಪರೀಕ್ಷೆ ವರದಿ, ಅವರಿಂದ ವಶಪಡಿಸಿಕೊಳ್ಳಲಾಗಿದ್ದ ಶಸ್ತ್ರಾಸ್ತ್ರಗಳು, ಅವರ ಉಡುಪುಗಳು ಮೊದಲಾದವುಗಳನ್ನೂ ಎನ್‌ಐಎ ತಂಡ ಜೆಐಟಿಗೆ ನೀಡಿದೆ.

Write A Comment