ಕರ್ನಾಟಕ

ಬೀದರ್: ಹಳೆ ಬಾವಿಯಲ್ಲಿ ನಾಲ್ಕು ತಲೆಬುರುಡೆ ಪತ್ತೆ

Pinterest LinkedIn Tumblr

tale

ಬೀದರ್: ನಗರದ ಬಾಲಭವನದ ಆವರಣದಲ್ಲಿರುವ ಪುರಾತನ ಬಾವಿಯ ಜೀರ್ಣೋದ್ಧಾರದ ಸಂದರ್ಭದಲ್ಲಿ ಮಂಗಳವಾರ ನಾಲ್ಕು ತಲೆಬುರುಡೆಗಳು ಪತ್ತೆಯಾಗಿವೆ.

ಜಿಲ್ಲಾಡಳಿತವು ನಗರದ ಪುರಾತನ ಬಾವಿಗಳ ಜೀರ್ಣೋದ್ಧಾರ ಕಾರ್ಯವನ್ನು ಕೈಗೆತ್ತಿಕೊಂಡಿದೆ.

ಕಾರ್ಮಿಕರು ಈ ಬಾವಿಯಲ್ಲಿನ ಹೂಳು ತೆಗೆಯುತ್ತಿದ್ದಾಗ ಒಂದೊಂದಾಗಿ ಒಟ್ಟು ನಾಲ್ಕು ತಲೆ ಬುರುಡೆ ಹಾಗೂ ಕೈ,ಕಾಲುಗಳ ಮೂಳೆಗಳು ದೊರೆತಿವೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ ನಿಕ್ಕಂ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ‘ಬಾವಿಯಲ್ಲಿ ದೊರೆತಿರುವ ತಲೆ ಬುರುಡೆಗಳು ಮೇಲ್ನೋಟಕ್ಕೆ 80 ರಿಂದ 100 ವರ್ಷ ಹಿಂದಿನವುಗಳಾಗಿರಬಹುದು’ ಎಂದು ತಿಳಿಸಿದರು.

‘ಬುರುಡೆಯೊಂದಿಗೆ ಕೈ,ಕಾಲುಗಳ ಮೂಳೆಗಳು ಪತ್ತೆಯಾಗಿವೆ. ಅವುಗಳನ್ನು ಬೆಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಿಕೊಡಲಾಗುವುದು. ಪರೀಕ್ಷೆ ನಂತರ ತಲೆ ಬುರುಡೆ ಎಷ್ಟು ವರ್ಷ ಹಳೆಯವು ಎನ್ನುವುದು ನಿಖರವಾಗಿ ತಿಳಿಯಲಿದೆ’ ಎಂದು ಹೇಳಿದರು.

‘ಕಾಣೆಯಾದ ಅಥವಾ ಬಾವಿಯಲ್ಲಿ ವ್ಯಕ್ತಿಗಳು ಬಿದ್ದಿರುವ ಬಗೆಗೆ ಯಾವುದೇ ದೂರುಗಳು ಬಂದಿಲ್ಲ. ನ್ಯೂಟೌನ್‌ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ’ ಎಂದು ಮಾಹಿತಿ ನೀಡಿದರು.

Write A Comment