ಕರ್ನಾಟಕ

ನಶೆಯೇರಿದ ವೈದ್ಯನ ಕಾರಿಗೆ ವ್ಯಕ್ತಿ ಬಲಿ

Pinterest LinkedIn Tumblr

doಬೆಂಗಳೂರು: ನಗರದ ಜಯನಗರದ ಅಶೋಕ ಸ್ತಂಭದ ಬಳಿ ಕುಡಿದ ಅಮಲಿನಲ್ಲಿ ವೈದ್ಯನೋರ್ವ ತನ್ನ ಬೆಂಝ್ ಕಾರನ್ನು ವೇಗವಾಗಿ ಚಲಿಸಿ ಸರಣಿ ಅಪಘಾತಕ್ಕೆ ಕಾರಣವಾಗಿ ವ್ಯಕ್ತಿಯೊಬ್ಬನನ್ನು ಬಲಿ ಪಡೆದ ಅವಘಡ ಭಾನುವಾರ ನಡೆದಿದೆ.

ಸಿದ್ದಾರ್ಥನಗರದಲ್ಲಿ ಕ್ಲಿನಿಕ್ ಇಟ್ಟುಕೊಂಡಿರುವ ಶಂಕರ್ ಎಂಬವರು ತನ್ನ KA 01, mf-9181 ಸಂಖ್ಯೆಯ ಬೆಂಜ್ ಕಾರನ್ನು ಅಡ್ಡಾದಿಡ್ಡಿಯಾಗಿ ಚಲಾಯಿಸಿದರ ಪರಿಣಾಮ ಇಂಡಿಕಾ ಕಾರು, ಜೆನ್‌ ಕಾರು, ಬೈಕ್‌ ಮತ್ತು ಪಾದಾಚಾರಿಗೆ ಢಿಕ್ಕಿ ಹೊಡೆದು, ಬಳಿಕ ಮನೆಯೊಂದಕ್ಕೆ ನುಗ್ಗಿದೆ. ಸರಣಿ ಅಪಘಾತದಲ್ಲಿ ಡಿಯೋ ಬೈಕ್ ನಲ್ಲಿದ್ದ ರಿಯಾಜ್ ಎಂಬವರು ಸ್ಥಳದಲ್ಲೇ ಸಾವನಪ್ಪಿದ್ದು, ಪತ್ನಿ ಗಾಯಗೊಂಡಿದ್ದಾರೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾರಿನ ಚಾಲಕ ಡಾ. ಶಂಕರ್ ಎಂಬವರು ಕುಡಿದು ಕಾರು ಚಲಾಯಿಸಿದ್ದೇ ಘಟನೆಗೆ ಕಾರಣ ಎನ್ನಲಾಗಿದೆ. ಘಟನೆಯಲ್ಲಿ ಶಂಕರ್ ಪತ್ನಿಹಾಗೂ ಮಗು ಇದ್ದು, ಏರ್ ಬ್ಯಾಗ್ ಓಪನ್ ಆಗಿದ್ದರಿಂದ ಅವರಿಗೆ ಯಾವುದೇ ಗಾಯಗಳಾಗಿಲ್ಲ ಎಂಬುವುದಾಗಿ ತಿಳಿದುಬಂದಿದೆ.

ಘಟನೆಯಿಂದಾಗಿ ಡಿಕ್ಕಿಗೊಂಡ ಬೆಂಜ್ ಕಾರು ಮತ್ತು ಇಂಡಿಕಾ ಕಾರು ಜಖಂಗೊಂಡಿದೆ. ಇನ್ನು ಘಟನಾ ಸ್ಥಳಕ್ಕಾಗಮಿಸಿದ ಜಯನಗರ ಸಂಚಾರಿ ಪೊಲೀಸರು ಬೆಂಜ್ ಚಾಲಕ ಡಾ.ಶಂಕರ್‌ ಎಂಬಾತನನ್ನು ಬಂಧಿಸಿ, ಕಾರನ್ನು ವಶ ಪಡಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Write A Comment