ರಾಷ್ಟ್ರೀಯ

ಬ್ಯಾಂಕ್ ಗೆ ಮೋಸ ಮಾಡಿದವರ ವಿರುದ್ಧ ಕಠಿಣ ಕ್ರಮ: ಮೋದಿ

Pinterest LinkedIn Tumblr

modi1-e1456661312476ಅಸ್ಸಾಂ: ಬ್ಯಾಂಕುಗಳಿಗೆ ಮೋಸ ಮಾಡಿ ಜೈಲಿಗೆ ಹೋಗುವುದನ್ನು ತಪ್ಪಿಸಲು ದೇಶ ಬಿಟ್ಟವರ ವಿರುದ್ದ ನಾವು ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಮೋದಿ ಭರವಸೆ ನೀಡಿದ್ದಾರೆ.

ಅಸ್ಸಾಂನಲ್ಲಿ ಭಾನುವಾರ ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸಿದ ವೇಳೆ ಬ್ಯಾಂಕ್‌ಗೆ ಮೋಸ ಮಾಡಿದ ಮಲ್ಯ ಬಗ್ಗೆ ಮೋದಿ ಸರ್ಕಾರ ಯಾವ ಕ್ರಮ ತೆಗೆದುಕೊಂಡಿದೆ? ಎಂದು ಕಾಂಗ್ರೆಸ್ ಪ್ರಶ್ನಿಸಿತ್ತು. ಇದಕ್ಕೆ ಉತ್ತರಿಸಿದ ಮೋದಿ, ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಶ್ರೀಮಂತರಿಗಾಗಿಯೇ ಬ್ಯಾಂಕ್‌ಗಳನ್ನು ಆರಂಭಿಸಿತ್ತು. ಶ್ರೀಮಂತರು ಸಾರ್ವಜನಿಕ ದುಡ್ಡನ್ನು ಹೇಗೆ ಆಕ್ರಮಿಸಿದ್ದಾರೆ ಎಂಬುದು ನಿಮಗೆ ಗೊತ್ತಿದೆಯೆ? ನನ್ನ ಸರ್ಕಾರ ಬ್ಯಾಂಕ್‌ಗೆ ಮೋಸ ಮಾಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತಿದೆ.

ಬ್ಯಾಂಕ್ ನಿಂದ ದೋಚಿದ ಹಣ, ಅದು ಬ್ಯಾಂಕ್‌ನದ್ದಲ್ಲ. ಅದು ಈ ದೇಶದ ಬಡವರು ದುಡ್ಡು. ಹೀಗಿರುವಾಗ ನಯಾ ಪೈಸೆ ಬಾಕಿ ಉಳಿಯದಂತೆ ಲೆಕ್ಕಾ ಚುಕ್ತಾ ಮಾಡಿ ಅವರಿಂದಲೇ ಆ ಹಣವನ್ನು ವಾಪಸ್ ಪಡೆಯಲು ಕ್ರಮ ಕೈಗೊಳ್ಳುತ್ತೇನೆ ಎಂದು ಮೋದಿ ಹೇಳಿದ್ದಾರೆ.

Write A Comment