ರಾಷ್ಟ್ರೀಯ

ಇಂದಿರಾಗಾಂಧಿ ಏರ್ ಪೋರ್ಟ್ ಗೆ ಬಾಂಬ್ ಬೆದರಿಕೆ

Pinterest LinkedIn Tumblr

indiraದೆಹಲಿ: ಇಲ್ಲಿನ ಇಂದಿರಾಗಾಂಧಿ ಏರ್ ಪೋರ್ಟ್ ಗೆ ಬಾಂಬ್ ಬೆದರಿಕೆ ಕರೆ ಭಾನುವಾರ ಬಂದಿದ್ದು, ತಪಾಸಣೆ ನಡೆಸಲಾಗುತ್ತಿದೆ.

ನಗರದ ಪಶ್ಚಿಮ ವಿಹಾರ್ ನಲ್ಲಿರುವ ರಾಡಿಸನ್ ಹೊಟೇಲ್ ಗೆ ಈ ಕರೆ ಬಂದಿದ್ದು, ಏರ್ ಇಂಡಿಯಾ ಮತ್ತು ಏರ್ ವೇಸ್ ನ ಒಟ್ಟು 6 ವಿಮಾನಗಳನ್ನು ಸ್ಫೋಟಿಸುವುದಾಗಿ ಬೆದರಿಕೆ ಕರೆ ಬಂದಿದೆ ಎನ್ನಲಾಗಿದೆ.

ಕರೆಯ ಹಿನ್ನೆಲೆಯಲ್ಲಿ ಇಂದಿರಾಗಾಂಧಿ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಆಗಮನ ಮತ್ತು ನಿರ್ಗಮನವನ್ನು ವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ನಿಲ್ದಾಣದಲ್ಲಿ ತೀವ್ರ ಕಟ್ಟೆಚ್ಚರ ಕಾರ್ಯವನ್ನು ಕೈಗೊಂಡಿದ್ದು, ಬಾಂಬ್ ಪತ್ತೆದಳದಿಂದ ಇಂದಿರಾ ಗಾಂಧಿ ಏರ್ ಪೋರ್ಟ್ ನಲ್ಲಿ ತಪಾಸಣೆ ನಡೆಸಲಾಗುತ್ತಿದೆ.

Write A Comment