ರಾಷ್ಟ್ರೀಯ

ಪಠಾಣ್​ಕೋಟ್ ದಾಳಿ ತನಿಖೆ ಹಿನ್ನೆಲೆ, ಭಾರತಕ್ಕೆ ಆಗಮಿಸಿದ ಪಾಕ್ ತಂಡ

Pinterest LinkedIn Tumblr

Pathankot-Webಪಠಾಣ್​ಕೋಟ್: ಪಠಾಣ್​ಕೋಟ್ ವಾಯುನೆಲೆ ಮೇಲಿನ ಉಗ್ರರ ದಾಳಿ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸಲಿಕ್ಕಾಗಿ ಐದು ಮಂದಿ ಸದಸ್ಯರ ಪಾಕಿಸ್ತಾನ ತಂಡ ಭಾನುವಾರ ಬೆಳಗ್ಗೆ ಭಾರತಕ್ಕೆ ಆಗಮಿಸಿತು.

ಸೋಮವಾರ ಪಠಾಣ್​ಕೋಟ್​ನಲ್ಲಿ ದಾಳಿಗೆ ಸಂಬಂಧಿಸಿದಂತೆ ಕೆಲವರನ್ನು ವಿಚಾರಣೆ ನಡೆಸಲಿರುವ ಈ ತಂಡ, ಭಾರತ ನೀಡಿರುವ ಅನೇಕ ಸಂಗತಿಗಳ ಬಗ್ಗೆ ಮನವರಿಕೆ ಮಾಡಿಕೊಳ್ಳುವ ಉದ್ದೇಶ ಹೊಂದಿದೆ.

ಪಂಜಾಬ್​ನ ಉಗ್ರ ನಿಗ್ರಹ ಘಟಕ (ಸಿಟಿಡಿ) ಮುಖ್ಯಸ್ಥ, ಹೆಚ್ಚುವರಿ ಪೊಲೀಸ್ ಪ್ರಧಾನ ಆರಕ್ಷಕ ಮೊಹಮ್ಮದ್ ತಹಿರ್ ರೈ, ಲಾಹೋರ್​ನ ಗುಪ್ತಚರ ಇಲಾಖೆ ಉಪನಿರ್ದೇಶಕ ಮೊಹಮ್ಮದ್ ಅಜೀಂ ಅರ್ಶದ್, ಐಎಸ್​ಐ ಎಲ್ಪಿನೆಂಟ್ ಕರ್ನಲ್ ತನ್ವಿರ್ ಅಹಮ್ಮದ್, ಮಿಲಟರಿ ಗುಪ್ತಚರ ವಿಭಾಗದ ಲೆಫ್ಟಿನೆಂಟ್ ಕರ್ನಲ್ ಇರ್ಫಾನ್ ಮಿರ್ಜಾ ಮತ್ತು ಗುಜರನ್​ವಾಲಾ ಸಿಟಿಡಿ ತನಿಖಾಧಿಕಾರಿ ಶಾಹಿದ್ ತನ್ವೀರ್ ತನಿಖಾ ತಂಡದಲ್ಲಿದ್ದಾರೆ ಎಂದು ಮೂಲಗಳು ಹೇಳುತ್ತಿವೆ.

ಪಾಕಿಸ್ತಾನ ತನಿಖಾ ತಂಡ ಗುರುದಾಸ್​ಪುರದ ಎಸ್​ಪಿ ಸಲ್ವಿಂದರ್ ಸಿಂಗ್ ಹಾಗೂ ಅವರ ಕೆಳಗಿನ ಕೆಲ ಅಧಿಕಾರಿಗಳ ಜತೆ ರ್ಚಚಿಸಲಿದೆ. ಅಲ್ಲದೆ ದಾಳಿಯಲ್ಲಿ ಗಾಯಗೊಂಡ 17 ಮಂದಿ ಭದ್ರತಾ ಪಡೆ ಸಿಬ್ಬಂದಿ, ಎನ್​ಎಸ್​ಜಿ, ಬಿಎಸ್​ಎಫ್ ಹಾಗೂ ಗಾರ್ಡ್ ಕಮಾಂಡೋಗಳ ಜತೆ ಮಾತುಕತೆ ನಡೆಸಲಿದೆ.

Write A Comment