ರಾಷ್ಟ್ರೀಯ

ಪ್ರವಾಸದ ನೆಪದಲ್ಲಿ ಬಂದ 28,500 ವಿದೇಶಿಗರು ಇನ್ನೂ ದೇಶಬಿಟ್ಟಿಲ್ಲ!

Pinterest LinkedIn Tumblr

Videshi-Webನವದೆಹಲಿ: ಕರ್ನಾಟಕ ಸೇರಿದಂತೆ ದೇಶದ ನಾನಾ ಭಾಗಗಳಲ್ಲಿ ತಾವು ಪಡೆದ ಅನುಮತಿಯ ಅವಧಿ ಮೀರಿ ಅಕ್ರಮವಾಗಿ ವಾಸವಿರುವವರ ಸಂಖ್ಯೆ ಬರೋಬ್ಬರಿ 28,500. ಇವರಲ್ಲಿ ಶ್ರೀಲಂಕಾ ಮತ್ತು ಪಾಕಿಸ್ತಾನಿಗಳೇ ಹೆಚ್ಚಿದ್ದಾರೆ ಎನ್ನುವುದು ಗಮನಾರ್ಹ ಅಂಶ!

ಗೃಹ ಸಚಿವಾಲಯ ಅಧಿಕೃತವಾಗಿ ನೀಡಿರುವ ಮಾಹಿತಿಯಲ್ಲಿ ಇದು ಬಹಿರಂಗವಾಗಿದೆ. 2015-2016ನೇ ಸಾಲಿನ ಸರ್ವೆಗಿಂತ ಮೊದಲು ನಡೆಸಲಾದ ವರದಿಯಲ್ಲಿ ಈ ವಿವರ ನೀಡಲಾಗಿದೆ. ಇದು ಕಳೆದವಾರ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಪ್ರಸ್ತಾಪಗೊಂಡಿದ್ದು, ಕ್ರಮಕ್ಕೆ ಮುಂದಾಗಬೇಕೆನ್ನುವ ಒತ್ತಾಯ ಕೇಳಿಸಿದೆ.

4,335 ಪಾಕಿಸ್ತಾನಿಗಳು, 3,857 ಶ್ರೀಲಂಕನ್ನರು ಭಾರತದಲ್ಲಿ ಅಕ್ರಮವಾಗಿ ವಾಸವಿದ್ದಾರೆ. ಉಳಿದಂತೆ ದಕ್ಷಿಣ ಕೊರಿಯಾ (1,172), ಇರಾಕ್ (1,625), ಅಮೆರಿಕ (1,291), ಓಮನ್ (1,254) ಮತ್ತು ಟಾಂಜಾನಿಯ (1,068) ದೇಶಗಳಿಂದ ಆಗಮಿಸಿದ ಸಾವಿರಾರು ಮಂದಿ ವಾಸಕ್ಕೆ ಅನುಮತಿ ಪಡೆದ ಅವಧಿ ಮುಗಿದರೂ ಭಾರತದಲ್ಲೇ ನೆಲೆಸಿದ್ದಾರೆ.

ಇನ್ನೊಂದು ಗಮನಾರ್ಹ ಸಂಗತಿಯೇನೆಂದರೆ 28,500ರಲ್ಲಿ ಶೇಕಡಾ 72ರಷ್ಟು ಅಂದರೆ ಸುಮಾರು 20,539ರಷ್ಟು ವಿದೇಶಿಗರು ತಮಿಳುನಾಡಿನಲ್ಲಿ ವಾಸವಾಗಿದ್ದಾರೆ. ಎರಡನೇ ಸ್ಥಾನದಲ್ಲಿ ಮಹಾರಾಷ್ಟ್ರ (3,300) ಇದೆ. ಉಳಿದಂತೆ ಯಾವೆಲ್ಲಾ ರಾಜ್ಯಗಳಲ್ಲಿ ಎಷ್ಟೆಷ್ಟು ವಿದೇಶಿಗರು ವಾಸವಿದ್ದಾರೆ ಎನ್ನುವ ಮಾಹಿತಿ ಇಲ್ಲಿದೆ.

ತಮಿಳುನಾಡು- 20,539
ಮಹಾರಾಷ್ಟ್ರ- 3,300
ಪಶ್ಚಿಮಬಂಗಾಳ- 949
ಕರ್ನಾಟಕ- 931
ಆಂಧ್ರಪ್ರದೇಶ- 495
ದೆಹಲಿ- 472
ಪಂಜಾಬ್- 410

Write A Comment