ಕರ್ನಾಟಕ

ಫೋರ್‌ಸೈಟ್ ಕಾರ್ಯಕ್ರಮಕ್ಕೆ ಮೇಘನಾ ಚಾಲನೆ

Pinterest LinkedIn Tumblr

meಬೆಂಗಳೂರು, ಮಾ. ೨೭ – ದೃಷ್ಟಿಮಾಂದ್ಯ ವ್ಯಕ್ತಿಗಳು ಮತ್ತು ಚಾಲಕರಿಗೆ ಮಾರ್ಗದರ್ಶನ ನೀಡುವ ಫೋರ್‌ಸೈಟ್ ೨೦೧೬ ಕಾರ್ಯಕ್ರಮಕ್ಕೆ ಚಿತ್ರನಟಿ ಮೇಘನಾ ಗಾಂವ್ಕರ್ ಚಾಲನೆ ನೀಡಿದರು.

೧೨೦ ಸ್ಪರ್ಧಿಗಳು ಭಾಗವಹಿಸಿದ್ದು, ಅದರಲ್ಲಿ ೪೦ ಮಂದಿ ಸೃಷ್ಟಿಮಾಂದ್ಯರಾಗಿದ್ದರು. ಟ್ರಜರ್ ಹಂಟ್ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ನಗರದ ಅರಮನೆ ಮೈದಾನದಲ್ಲಿ ಮುಕ್ತಾಯವಾಯಿತು. ಸೌಲಭ್ಯ ವಂಚಿತ ಮಕ್ಕಳ ಶಿಕ್ಷಣ ಮತ್ತು ರಾಷ್ಟ್ರೀಯ ಅಂಧರ ಸಂಸ್ಥೆಗೆ ದೇಣಿಗೆ ನೀಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.

ಅಂಧರು ಬ್ರೈಲ್‌ನಲ್ಲಿ ಮುದ್ರಿಸಿದ ಸುಳಿವಿನ ಮೂಲಕ ಚೆಕ್ ಪಾಯಿಂಟ್‌ಗಳ ಸುಳಿವನ್ನು ಪತ್ತೆ ಮಾಡಿದರು.

ಬೆಂಗಳೂರು ನೈಟ್ಸ್ ರೌಂಡ್ ಟೇಬಲ್‌ನ ರಣಬೀರ್ ಸಿಂಗ್ ಮಾತನಾಡಿ, ಒಂದು ಒಳ್ಳೆಯ ಉದ್ದೇಶದಿಂದ ಹಾಗೂ ದೃಷ್ಟಿ ಮಾಂದ್ಯರನ್ನು ಸಮಾಜದ ಮುಖ್ಯವಾಹಿನಿಗೆ ತರುವಂತೆ ಮಾಡುವ ಪ್ರಯತ್ನ ಇದಾಗಿದೆ ಎಂದರು.

ಬೆಂಗಳೂರು ನೈಟ್ಸ್ ಲೇಡಿಸ್ ಸರ್ಕಲ್‌ನ ವಸುದಾ ಗಾದಿ ದೃಷ್ಟಿಮಾಂದ್ಯರಿಗೆ ಹೊಸ ಅನುಭವ ನೀಡುವ ಜತೆಗೆ ತಮ್ಮಲ್ಲಿ ಅಡಗಿರುವ ಪ್ರತಿಭೆಗಳನ್ನು ಹೊರ ತೆಗೆಯಲು ಅವಕಾಶ ನೀಡಬೇಕು ಎಂದು ಬಯಸಿದ್ದೆವು, ನಾವು ಅವರಿಗೆ ಮಾರ್ಗದರ್ಶಕ ಪಾತ್ರವನ್ನಷ್ಟೇ ವಹಿಸಿದ್ದೆವು, ಇದಕ್ಕೆ ರಾಷ್ಟ್ರೀಯ ಅಂಧರ ಸಂಸ್ಥೆ ಕೂಡಲೇ ಒಪ್ಪಿಗೆ ನೀಡಿತ್ತು ಎಂದು ಹೇಳಿದರು.

ದೃಷ್ಟಿ ಮಾಂದ್ಯರು ಚಾಲಕರಿಗೆ ಮಾರ್ಗ ದರ್ಶಕರಾಗಿ ಭಾಗವಹಿಸಿದ್ದು, ಟ್ರಜರ್ ಹಂಟ್‌ನಲ್ಲಿ ದಾರಿ ತೋರಿಸಿದ ಟ್ರಜರ್ ಹಂಟ್ – ೨೦೧೬ರ ಕಾರ್ಯಕ್ರಮ ದೇಣಿಗೆ ಸಂಗ್ರಹಿಸಲು ನಡೆದ ಕಾರ್ಯಕ್ರಮವಾಗಿತ್ತು.

Write A Comment