ರಾಷ್ಟ್ರೀಯ

ರಾಷ್ಟ್ರಪತಿ ಆಳ್ವಿಕೆ ಹೇರಿಕೆ ಕ್ರಮ ‘ಪ್ರಜಾಪ್ರಭುತ್ವದ ಕೊಲೆ’- ಕಾಂಗ್ರೆಸ್

Pinterest LinkedIn Tumblr

27-harish-rawat-web (1)ನವದೆಹಲಿ/ ಡೆಹ್ರಾಡೂನ್: ಉತ್ತರಾಖಂಡದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿದ ಕ್ರಮವನ್ನು ‘ಪ್ರಜಾಪ್ರಭುತ್ವದ ಕೊಲೆ’ ಮತ್ತು ‘ಸಂವಿಧಾನ ಬಾಹಿರ’ ಎಂದು ಭಾನುವಾರ ಕಾಂಗ್ರೆಸ್ ಬಣ್ಣಿಸಿದೆ.

ಇದಕ್ಕೆ ಮುನ್ನ ‘ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವ ಬೆದರಿಕೆ ಹಾಕುತ್ತಿದೆ’ ಎಂದು ಉತ್ತರಾಖಂಡ ಮುಖ್ಯಮಂತ್ರಿ ಹರೀಶ್ ರಾವತ್ ಅವರು ಭಾನುವಾರ ಇಲ್ಲಿ ಆಪಾದಿಸಿದ್ದರು. ನಾಲ್ಕು ವರ್ಷಗಳ ಕಾಂಗ್ರೆಸ್ ಸರ್ಕಾರವನ್ನು ಬಗ್ಗು ಬಡಿಯಲು ಬಿಜೆಪಿ ಹಣ ಮತ್ತು ತೋಳ್ಬಲವನ್ನು ಬಳಸುತ್ತಿದೆ ಎಂದು ಅವರು ದೂರಿದ್ದರು.

‘ಬಿಜೆಪಿಯ ಈ ಬೆದರಿಕೆಯನ್ನು ನಾನು ಖಂಡಿಸುತ್ತೇನೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ರಾವತ್ ಹೇಳಿದ್ದರು. ‘ರಾಜ್ಯಪಾಲರನ್ನು ಕಿತ್ತು ಹಾಕಲು ಒತ್ತಾಯಿಸುತ್ತಿರುವುದು ಸಂಪೂರ್ಣವಾಗಿ ಖಂಡನಾರ್ಹ. ಈ ವಿಷಯವನ್ನು ಜನರ ಬಳಿಗೆ ಒಯ್ಯಲು ನಾವು ನಿರ್ಧರಿಸಿದ್ದೇವೆ. ನನ್ನ ಡಿಎನ್​ಎ ಜನರ ಡಿಎನ್​ಎ, ಅದು ಇತರರಂತೆ ಆಮದು ಮಾಡಿಕೊಂಡ ಡಿಎನ್​ಎ ಅಲ’ ಎಂದು ರಾವತ್ ಹೇಳಿದ್ದರು.

‘ಇದು ಕಾಂಗ್ರೆಸ್​ನ ಆಂತರಿಕ ಸಮಸ್ಯೆಯಾಗಿದ್ದರೆ ಆರೆಸ್ಸೆಸ್ ಮತ್ತು ಬಿಜೆಪಿಯ ಹಿರಿಯ ನಾಯಕರು 17 ಮತ್ತು 18ರಂದು ಇಲ್ಲಿಗೆ ಬಂದದ್ದು ಏಕೆ?’ ಎಂದು ರಾವತ್ ಪ್ರಶ್ನಿಸಿದರು.

ಈ ಮಧ್ಯೆ ರಾಜಕೀಯ ಪಕ್ಷಗಳ ನಡುವಣ ಬಿಕ್ಕಟ್ಟು ಉಲ್ಬಣಗೊಳ್ಳುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಡೆಹ್ರಾಡೂನ್​ನಲ್ಲಿ ಸೆಕ್ಷನ್ 144ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಬಂಡುಕೋರ ಕಾಂಗ್ರೆಸ್ ಶಾಸಕರ ವಕೀಲರು ಈದಿನ ವಿಧಾನಸಭಾಧ್ಯಕ್ಷ ಗೋವಿಂದ್ ಕುಂಜ್ವಲ್ ಅವರನ್ನು ವಿಧಾನಸಭೆಯ ಕಚೇರಿಯಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ್ದು, ಬಿಜೆಪಿ ಶಾಸಕರ ಜೊತೆ ಕೆಲ ಸಮಯದಿಂದ ಕೈಜೋಡಿಸಿರುವ 9 ಮಂದಿ ಬಂಡಾಯ ಕಾಂಗ್ರೆಸ್ ಶಾಸಕರನ್ನು ಅನರ್ಹಗೊಳಿಸುವ ಬಗ್ಗೆ ನಿರ್ಧರಿಸುವ ಸಾಧ್ಯತೆ ಇದೆ.

Write A Comment