ಕರ್ನಾಟಕ

ಕಮರ್ಷಿಯಲ್ ಸ್ಟ್ರೀಟ್‌ನಲ್ಲಿ ಜಾತ್ರೆ ವಾತಾವರಣ

Pinterest LinkedIn Tumblr

kaಬೆಂಗಳೂರು, ಮಾ.೨೭- ಸದಾ ಹೈ ಫೈ ಜನರಿಂದ ತುಂಬಿ ತುಳುಕುತ್ತಿದ್ದ ನಗರದ ಕಮರ್ಷಿಯಲ್ ಸ್ಟ್ರೀಟ್ ನಲ್ಲಿ ಇಂದು ಜಾತ್ರೆ ವಾತಾವರಣ ಕಂಡು ಬಂದು ಜನರ ಮನಸೂರೆಗೊಂಡಿದೆ.
ಶಾಂಪಿಂಗೆಂದು ಕಮರ್ಷಿಯಲ್ ಸ್ಟ್ರೀಟ್‌ಗೆ ಹೋಗುತ್ತಿದ್ದ ಜನರು ಜಾತ್ರೆಯ ವಾತವರಣ ಕಂಡು ಕುಣಿದು ಕುಪ್ಪಳಿಸಿ ಮಜಾ ಮಾಡಿದರು. ಹುಲಿವೇಷದಾರಿ ನ್ಯತ್ಯ, ಮರದ ಕಾಲಿನ ವೇಷಧಾರಿಗಳು ಸ್ಟ್ರೀಟ್ ತುಂಬಾ ಕೋಲು ಕಟ್ಟಿಕೊಂಡು ಓಡಾಡುತ್ತಿದ್ದರೆ ಮಕ್ಕಳಿಗೆ ಏನೋ ಸಂಭ್ರಮ. ತಮಟೆ ಸದ್ದಿಗೆ ಮಹಿಳೆಯರ ಡ್ಯಾನ್ಸ್…ಪುರುಷರಿಂದ ದೇಹದಾರ್ಢ್ಯ ಕಸರತ್ತು…ಮಹಿಳೆಯರ ಹಗ್ಗಜಗ್ಗಾಟ…ಸಾಮೂಹಿಕ ನೃತ್ಯ ಪ್ರದರ್ಶನ…ಇಂತಹ ಸಾಹಸಮಯ, ಮನರಂಜನಾತ್ಮಕ ದೃಶ್ಯಗಳು ಕಂಡುಬಂದಿದ್ದು ನಗರದ ಕಮರ್ಷಿಯಲ್ ಸ್ಟ್ರೀಟ್ ನಲ್ಲಿ ಯಾವಾಗಲೂ ವಾಹನ ಸಂಚಾರ ದಟ್ಟಣೆಯಿಂದ ತುಂಬಿ ಜಂಜಾಟ ಇರುತ್ತಿದ್ದ ಕಮರ್ಷಿಯಲ್ ಸ್ಟ್ರೀಟ್ ನಲ್ಲಿ ಸಂಚಾರ ದಟ್ಟಣೆ ಸಮಸ್ಯೆ ತಪ್ಪಿಸಲು ಆಯೋಜಿಸಿದ್ದ ಸಂಚಾರ ಮುಕ್ತ ಕಾರ್ಯಕ್ರಮದಲ್ಲಿ ಜನತೆ ಮಿಂದೆದ್ದರು.
ಐಟಿ ಕಂಪನಿಗಳ ಉದ್ಯೋಗಿಗಳಿಗೆ ಹೋಗಿ ಕಾಲ ಕಳೆಯುತ್ತಿದ್ದ ಮಂದಿ ಭಾನುವಾರ ಕಮರ್ಷಿಯಲ್ ಸ್ಟ್ರೀಟ್ ನಲ್ಲಿ ಕಾಲ ಕಳೆದರು. ಮಕ್ಕಳೊಂದಿಗೆ ರಸ್ತೆಯಲ್ಲಿ ಆಟವಾಡಿದರು. ಇಂಪಾದ ಸಂಗೀತಕ್ಕೆ ಸ್ಟೆಪ್ ಹಾಕಿದ್ದರು. ಮಹಿಳೆಯರು, ಮಕ್ಕಳೊಂದಿಗೆ ಹಾಗೂ ತಮ್ಮ ನೆಚ್ಚಿನ ಶ್ವಾನಗಳೊಂದಿಗೆ ರಸ್ತೆಯಲ್ಲೇ ಸೆಲ್ಫಿ ತೆಗೆದುಕೊಂಡು ಫುಲ್ ಡ್ಯಾನ್ಸ್ ಮಾಡಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಸಾರ್ವಜನಿಕರು, ಈ ಕ್ರಮಕ್ಕೆ ನಿಜವಾಗಿಯೂ ಹ್ಯಾಟ್ಸ್ ಆಫ್ ಹೇಳಲೇಬೇಕು. ಪ್ರತಿ ೧೫ ದಿನಕ್ಕೊಮ್ಮೆ ಈ ರೀತಿ ಕಾರ್ಯಕ್ರಮ ಹಮ್ಮಿಕೊಂಡರೆ ಬೆಂಗಳೂರಿನಲ್ಲೇ ಕಾಲ ಕಳೆಯಬಹುದು. ವಾಹನ ದಟ್ಟಣೆ ಇಲ್ಲದ ರಸ್ತೆಯನ್ನು ಬೆಂಗಳೂರಿನಲ್ಲಿ ನೋಡಲು ಸಾಧ್ಯವಾಗಿರಲಿಲ್ಲ ಎಂದು ಸಂತಸ ವ್ಯಕ್ತಪಡಿಸಿದರು.

Write A Comment