ಕರ್ನಾಟಕ

ಜೀವನ ಚರಿತ್ರೆ ಬರೆಯುವುದು ಸುಲಭದ ಕೆಲಸವಲ್ಲ

Pinterest LinkedIn Tumblr

27j4clrಬೆಂಗಳೂರು, ಮಾ. ೨೭- ಜೀವನ ಚರಿತ್ರೆ ಬರೆಯುವುದು ಸುಲಭಸಾಧ್ಯ ಕೆಲಸವೇನಲ್ಲ. ಬರವಣಿಗೆಕಾರ ತಾನು ಬರೆಯುವ ವ್ಯಕ್ತಿಯ ಇತಿಹಾಸ ಸಂಗ್ರಹಣೆಗೆ ಹಲವು ಕಷ್ಟಪಡಬೇಕಾಗುತ್ತದೆ ಎಂದು ನಾಡೋಜ ಪ್ರೊ. ಜಿ. ವೆಂಕಟಸುಬ್ಬಯ್ಯ ಅಭಿಪ್ರಾಯಪಟ್ಟರು.
ವಿಕಾಸ ಪ್ರಕಾಶನ ಹೊರ ತಂದಿರುವ ಡಾ. ಎನ್. ಜಗದೀಶ್ ಕೊಪ್ಪ ಅವರ ಭುವನದ ಭಾಗ್ಯ ಎಂ.ಎಸ್ ಸುಬ್ಬುಲಕ್ಷ್ಮಿ ಮತ್ತು ದಿಟ್ಟಕಲಾವಿದೆ ಬೆಂಗಳೂರು ನಾಗರತ್ನಮ್ಮ ಪುಸ್ತಕಗಳ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಎಂ.ಎಸ್.ಎಸ್ ಮತ್ತು ನಾಗರತ್ನಮ್ಮ ಅವರ ಕುರಿತು ಅನೇಕ ಪುಸ್ತಕಗಳು ಹೊರ ಬಂದಿವೆ.
ಆದರೆ ಜಗದೀಶ್ ಕೊಪ್ಪ ಅವರು ಈ ಇಬ್ಬರು ದಿಗ್ಗಜರ ಸಮಗ್ರ ಇತಿಹಾಸ ಕಲೆ ಹಾಕಿ, ಬರವಣಿಗೆಯಲ್ಲಿ ಹಿಡಿತ ಸಾಧಿಸಿ ಪುಸ್ತಕ ಹೊರ ತಂದಿರುವುದು ಮೆಚ್ಚ ತಕ್ಕ ಸಂಗತಿ ಎಂದರು.
ಸಂಗೀತ ಲೋಕದಲ್ಲಿ ಖ್ಯಾತಿಗಳಿಸಿದ ಎಂಎಸ್‌ಎಸ್ ಮತ್ತು ನಾಗರತ್ನಮ್ಮ ಅವರ ಬದುಕಿನ ನೋವು, ಹತಾಶೆ, ತೊಳಲಾಟ, ದಿಟ್ಟತನವನ್ನು ಲೋಕಕ್ಕೆ ತಿಳಿಸುವ ಕಾರ್ಯವನ್ನು ವಿಕಾಸ ಪ್ರಕಾಶನದ ಪೂರ್ಣಿಮಾ ಅವರು ಮಾಡಿದ್ದು, ಅವರ ಕಡೆಯಿಂದ ಇನ್ನೂ ಹೆಚ್ಚಿನ ಕೃತಿಗಳು ಬರಲಿ ಎಂದು ಆಶಿಸಿದರು.
ಡಾ. ಸುಮಾ ಸುಧೀಂದ್ರ ಮಾತನಾಡಿ ಪರಂಪರೆ ದಾಖಲಿಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಕೆಲಸವನ್ನು ಜಗದೀಶ್ ಕೊಪ್ಪ ಮಾಡಿದ್ದಾರೆ ಎಂದರು.
ಡಾ. ಟಿ.ಎಸ್. ಸತ್ಯವತಿ, ಎಚ್.ಎನ್. ಸುರೇಶ್ ಹಾಜರಿದ್ದರು.

Write A Comment