ಅಂತರಾಷ್ಟ್ರೀಯ

ಪಾಲ್ಮಿರಾ ಸಂಪೂರ್ಣ ಸಿರಿಯಾ ವಶಕ್ಕೆ, 400 ಐಸಿಸ್ ಉಗ್ರರ ಹತ್ಯೆ

Pinterest LinkedIn Tumblr

siriya-webಡಮಾಸ್ಕಸ್: ಸಿರಿಯಾದ ಪಾಲ್ಮಿರಾ ನಗರವನ್ನು ಸಿರಿಯಾ ಸೇನೆಯು ಸಂಪೂರ್ಣವಾಗಿ ಮರುವಶ ಪಡಿಸಿಕೊಂಡಿದ್ದು, ಸಮರ ಕಾಲದಲ್ಲಿ ಸುಮಾರು 400 ಐಸಿಸ್ (ಇಸ್ಲಾಮಿಕ್ ಸ್ಟೇಟ್) ಉಗ್ರರನ್ನು ಹತ್ಯೆ ಮಾಡಿದೆ.

ನಗರ ಮರುವಶ ಕಾರ್ಯಾಚರಣೆಯಲ್ಲಿ 180 ಕ್ಕೂ ಹೆಚ್ಚು ಸಿರಿಯಾ ಸೈನಿಕರು ಪ್ರಾಣ ಕಳೆದುಕೊಂಡಿದ್ದಾರೆ. ಮೂರುವಾರಗಳಿಂದ ಸಿರಿಯಾ ಸೇನೆಗೆ ಬೆಂಬಲವಾಗಿ ರಷ್ಯನ್ ಸೇನೆ ಮತ್ತು ಶಿಯಾ ಸೇನೆಗಳು ಐಸಿಸ್ ವಿರುದ್ಧ ಕಾರ್ಯ ನಿರತವಾಗಿದ್ದವು.

ಇಸ್ಲಾಮಿಕ್ ಉಗ್ರರು ಕಳೆದ ಮೇ ತಿಂಗಳಲ್ಲಿ ಆಕ್ರಮಿಸಿದ್ದ ಪಾಲ್ಮಿರಾ ನಗರವನ್ನು ಸಿರಿಯಾದಿಂದ ವಶಪಡಿಸಿಕೊಂಡಿದ್ದರು. ಜೊತೆಗೆ ಸುಖ್ನಾ ಪಟ್ಟಣವನ್ನು ಕೈವಶಪಡಿಸಿಕೊಂಡು ಅಲ್ಲಿನ ಜೈಲು, ಸಮಾಧಿಗಳು ಮತ್ತು ಪ್ರಾಕ್ತನ ಕಟ್ಟಡಗಳನ್ನು ನಾಶ ಮಾಡಿದ್ದರು.

Write A Comment