ರಾಷ್ಟ್ರೀಯ

ರಾವತ್ ಸರ್ಕಾರದ ವಜಾ ಕಾಲದ ಅಗತ್ಯವಾಗಿತ್ತು- ಅರುಣ್ ಜೇಟ್ಲಿ

Pinterest LinkedIn Tumblr

28-isbs-RAWAT-webನವದೆಹಲಿ: ಉತ್ತರಾಖಂಡದ ಮುಖ್ಯಮಂತ್ರಿ ಹರೀಶ್ ರಾವತ್ ಅವರು ಮಾರ್ಚ್ 18ರಂದು ವಿಧಾನಸಭೆಯಲ್ಲಿ ಧನ ವಿನಿಯೋಗ ಮಸೂದೆಗೆ ಅಂಗಿಕಾರ ಪಡೆದುಕೊಳ್ಳಲು ವಿಫಲವಾದಾಗಲೇ ಬಹುಮತ ಕಳೆದುಕೊಂಡಿದ್ದರು. ಅವರ ಸರ್ಕಾರ ವಜಾ ಮಾಡಬೇಕಾದ್ದು ಕಾಲದ ಅಗತ್ಯವಾಗಿತ್ತು ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

ಉತ್ತರಾಖಂಡದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡಿದ್ದನ್ನು ಪ್ರಬಲವಾಗಿ ಪ್ರತಿಪಾದಿಸಿದ ಜೇಟ್ಲಿ ‘ಅನುಮೋದನೆ ಪಡೆಯಲು ವಿಫಲವಾಗಿದ್ದರೂ ಧನವಿನಿಯೋಗ ಮಸೂದೆಯನ್ನು ವಿಧಾನಸಭೆಯಲ್ಲಿ ಅಂಗೀಕಾರವಾಗಿದೆ ಎಂಬುದಾಗಿ ತೋರಿಸಿಕೊಂಡದ್ದು ಮತ್ತು ಅವರ ಸರ್ಕಾರ ಅಧಿಕಾರದಲ್ಲಿ ಮುಂದುವರೆದ್ದು ಸಂವಿಧಾನಬಾಹಿರವಾಗಿತ್ತು’ ಎಂದು ಹೇಳಿದರು.

ಸಂವಿಧಾನಬಾಹಿರ, ಅನೈತಿಕವಾದ ಹರೀಶ್ ರಾವತ್ ಅವರ ಸರ್ಕಾರವನ್ನು ವಜಾಗೊಳಿಸಬೇಕಾದದು ಸಮಯದ ಅಗತ್ಯವಾಗಿತ್ತು ಎಂದು ಜೇಟ್ಲಿ ಪ್ರತಿಪಾದಿಸಿದರು.

ಇದಕ್ಕೆ ಮುನ್ನ ಭಾನುವಾರ ಬೆಳಗ್ಗೆ ಅರ್ಹತೆ ರಹಿತ ನಾಯಕತ್ವವು ಕಾಂಗ್ರೆಸ್ ವ್ಯವಹಾರಗಳಲ್ಲಿ ಸ್ಪಷ್ಟವಾಗಿ ಪ್ರತಿಬಿಂಬಿಸುತ್ತಿದೆ ಎಂದು ಅರುಣ್ ಜೇಟ್ಲಿ ಹೇಳಿದ್ದರು. ಉತ್ತರಾಖಂಡದ ವಿಚಾರ ಕಾಂಗ್ರೆಸ್ ಪಕ್ಷದ ಆಂತರಿಕ ಸಮಸ್ಯೆ ಎಂದು ರಾಜ್ಯದ ರಾಜಕೀಯ ಬಿಕ್ಕಟ್ಟಿನ ಬಗ್ಗೆ ಉಲ್ಲೇಖಿಸುತ್ತಾ ಜೇಟ್ಲಿ ತಿಳಿಸಿದ್ದರು. ಸಾವಿಧಾನಿಕ ಕಾರ್ಯನಿರ್ವಹಣೆಯಲ್ಲಿ ಏನೆಲ್ಲ ತಪ್ಪು ಆಗಬಹುದೋ ಅದೆಲ್ಲವೂ ಉತ್ತರಾಖಂಡದಲ್ಲಿ ಘಟಿಸಿದೆ. ಆಡಳಿತ ಕುಸಿದು ಬಿದ್ದಿರುವುದರ ಸ್ಪಷ್ಟ ನಿದರ್ಶನ ಇದು ಎಂದು ಜೇಟ್ಲಿ ಹೇಳಿದ್ದರು. ವಿಧಾನಸಭೆಯಲ್ಲಿ ಪರಾಭವಗೊಂಡಿರುವ ಧನವಿನಿಯೋಗ ಮಸೂದೆಯನ್ನು ಅನುಮೋದಿಸಲಾಗಿದೆ ಎಂದು ವಿಧಾನಸಭಾಧ್ಯಕ್ಷರು ಘೊಷಿಸಿದ ಘಟನೆ ಭಾರತದಲ್ಲಿ ಎಂದೂ ಘಟಿಸಿಲ್ಲ. ಉತ್ತರಾಖಂಡದಲ್ಲಿ ಸಂವಿಧಾನವನ್ನು ದೊಡ್ಡ ಪ್ರಮಾಣದಲ್ಲಿ ಕುಲಗೆಡಿಸಲಾಗುತ್ತಿದೆ. ವಿಸ್ತರಿತ ಕಾಲಾವಧಿಯನ್ನು ಆಮಿಷ, ಲಂಚಕ್ಕೆ ಬಳಸಲಾಗುತ್ತಿದೆ ಇವೆಲ್ಲವೂ ಸಂವಿಧಾನದ ಉಲ್ಲಂಘನೆಗಳು ಎಂದು ಜೇಟ್ಲಿ ಹೇಳಿದ್ದರು.

Write A Comment