ಅಂತರಾಷ್ಟ್ರೀಯ

ಲಂಡನ್ ಬಿಬಿಸಿ ರೇಡಿಯೋದಲ್ಲಿ ಶಿವರಾಜ್ ಕುಮಾರ್ ಸಂದರ್ಶನ

Pinterest LinkedIn Tumblr

shivaraj-kumar-bbc

ಬೆಂಗಳೂರು: ಡಾ. ಶಿವರಾಜ್ ಕುಮಾರ್ ಇಂಗ್ಲೆಂಡಿನ ಬಿಬಿಸಿ ರೇಡಿಯೋಗೆ ಸಂದರ್ಶನ ನೀಡಿದ್ದಾರೆ. ಈ ಮೂಲಕ ಬಿಬಿಸಿಗೆ ಸಂದರ್ಶನ ನೀಡಿದ ಮೊದಲ ಕನ್ನಡ ನಟ ಎಂಬ ಹೆಗ್ಗಳಿಕಿಗೆ ಶಿವಣ್ಣ ಪಾತ್ರಾಗಿದ್ದಾರೆ.

ಡಾ.ಶಿವರಾಜ್ಕುಮಾರ್ ಅಭಿನಯದ ಶಿವಲಿಂಗ ಚಿತ್ರದ ವಿಶೇಷ ಪ್ರದರ್ಶನದ ಸಲುವಾಗಿ ಶಿವಣ್ಣ, ಗೀತಾ ದಂಪತಿ ಲಂಡನ್ಗೆ ಹೋಗಿದ್ದರು. ಈ ವೇಳೆ ಬಿಬಿಸಿ ರೇಡಿಯೋದಲ್ಲಿ ಕೂಡ ಶಿವಣ್ಣ ಅವರನ್ನು ಸಂದರ್ಶನ ಮಾಡಲಾಗಿದೆ.

ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟು 30 ವರ್ಷವಾದ ಹಿನ್ನೆಲೆಯಲ್ಲಿ ತಮ್ಮ ಚಿತ್ರ ಜೀವನ ಹಾಗು ಇತ್ತೀಚೆಗೆ ಸೂಪರ್ ಹಿಟ್ ಚಿತ್ರ ಶಿವಲಿಂಗ ಬಗ್ಗೆ ರೇಡಿಯೋದಲ್ಲಿ ಶಿವಣ್ಣ ಮಾತನಾಡಿದ್ದಾರೆ. ಲಂಡನ್ ಪ್ರವಾಸದಲ್ಲಿದ್ದ ಶಿವಣ್ಣಗೆ ಶಿವಲಿಂಗ ಚಿತ್ರದ ನಿರ್ದೇಶಕ ಪಿ.ವಾಸು ಕೂಡ ಹಾಜರಿದ್ದರು.

Write A Comment