ಮನೋರಂಜನೆ

ಕೇರಳ ಚುನಾವಣೆ; ಬಿಜೆಪಿಯಿಂದ ಶ್ರೀಶಾಂತ್ ಕಣಕ್ಕೆ

Pinterest LinkedIn Tumblr

PTI7_25_2015_000152B

ತಿರುವನಂತಪುರಂ: ಮೇ 16ರಂದು ನಡೆಯಲಿರುವ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್ ಶ್ರೀಶಾಂತ್ ಬಿಜೆಪಿಯಿಂದ ಕಣಕ್ಕೆ ಇಳಿಯುವ ಸಾಧ್ಯತೆಯಿದೆ.

ಶ್ರೀಶಾಂತ್ ಅವರಿಗೆ ದೆಹಲಿಯಿಂದ ಕರೆ ಬಂದಿದ್ದು, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಕೇರಳಕ್ಕೆ ಬಂದಾಗ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ಶ್ರೀಶಾಂತ್ ಸಂಬಂಧಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ

ಈ ಸಂಬಂಧ ಶ್ರೀಶಾಂತ್ ಪ್ರತಿಕ್ರಿಯಿಸಿದ್ದು, ಚುನಾವಣೆಯಲ್ಲಿ ಸ್ಪರ್ಧಿಸುವ ವಿಚಾರವನ್ನು ನಾನು ನಾಳೆ ಪ್ರಕಟಿಸುತ್ತೇನೆ. ನಮ್ಮ ಕುಟುಂಬ ಎಡಚಿಂತನೆಯನ್ನು ಹೊಂದಿದ್ದರೂ ಪತ್ನಿಯ ಕುಟುಂಬ ಬಿಜೆಪಿಯನ್ನು ಬೆಂಬಲಿಸುತ್ತದೆ ಎಂದು ಹೇಳಿದ್ದಾರೆ.

ಕೇರಳ ಬಿಜೆಪಿ ಅಧ್ಯಕ್ಷ ರಾಜಶೇಖರನ್ ಮಾತನಾಡಿ, ಶ್ರೀಶಾಂತ್ ಚುನಾವಣೆಯಲ್ಲಿ ಸ್ಪರ್ಧಿಸುವ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಇನ್ನು ಎರಡು ದಿನದಲ್ಲಿ ಈ ವಿಚಾರ ಸ್ಪಷ್ಟವಾಗಲಿದೆ ಎಂದು ತಿಳಿಸಿದ್ದಾರೆ.

2013ರ ಐಪಿಲ್ ಕ್ರಿಕೆಟ್ ವೇಳೆ ಸ್ಪಾಟ್ ಫಿಕ್ಸಿಂಗ್ ಆರೋಪದ ಮೇಲೆ ಶ್ರೀಶಾಂತ್ ಮೇಲೆ ಬಿಸಿಸಿಐ ನಿಷೇಧ ಹೇರಿತ್ತು. ದೆಹಲಿ ಪೊಲೀಸರು ಬಂಧಿಸಿ ತಿಹಾರ್ ಜೈಲಿಗೆ ಕಳುಹಿಸಿದ್ದರು. ಜುಲೈ 2015 ರಲ್ಲಿ ಪಟಿಯಾಲ ಹೌಸ್ ಕೋರ್ಟ್ ಶ್ರೀಶಾಂತ್ ಮತ್ತು ಇತರ ಇಬ್ಬರು ಆಟಗಾರನ್ನು ನಿರ್ದೋಷಿಗಳು ಎಂದು ಹೇಳಿತ್ತು. ಶ್ರೀಶಾಂತ್ 2007ರ ಟಿ 20 ವಿಶ್ವಕಪ್ ಮತ್ತು 2011ರ ವಿಶ್ವಕಪ್ ವಿಜೇತ ಭಾರತ ತಂಡದ ಸದಸ್ಯರಾಗಿದ್ದಾರೆ.

Write A Comment