ರಾಷ್ಟ್ರೀಯ

ದಲಿತನ ಮರ್ಯಾದಾ ಹತ್ಯೆ: ಕೌಸಲ್ಯ ಹೇಳಿಕೆ ದಾಖಲಿಸಿಕೊಂಡ ಅಧಿಕಾರಿಗಳು

Pinterest LinkedIn Tumblr

Kowsalya

ತಮಿಳುನಾಡು: ದಲಿತನೋರ್ವ ತಮ್ಮ ಜಾತಿಯ ಹುಡುಗಿಯನ್ನು ವಿವಾಹವಾಗಿದ್ದಾನೆಂಬ ಕಾರಣಕ್ಕೆ ಯುವಕನನ್ನು ನಡುರಸ್ತೆಯಲ್ಲೇ ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರು ಹತ್ಯೆಗೀಡಾದ ಯುವಕನ ಪತ್ನಿಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆಂದು ತಿಳಿದುಬಂದಿದೆ.

ದಲಿತನನ್ನು ಹತ್ಯೆ ಮಾಡಿದ ದಿನದಂದು ಆತನ ಪತ್ನಿಯ ಕೌಸಲ್ಯ ಮೇಲೂ ದುಷ್ಕರ್ಮಿಗಳು ಹಲ್ಲೆ ಮಾಡಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಕೌಸಲ್ಯ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಕೌಸಲ್ಯ ಚೇತರಿಸಿಕೊಂಡಿದ್ದು, ಪೊಲೀಸರು ಆಕೆಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

ಮ್ಯಾಜಿಸ್ಟ್ರೇಟ್ ಜಿ. ಕೃಷ್ಣನ್ ಅವರು ಕೌಸಲ್ಯ ನೀಡಿದ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದು, ಕೌಸಲ್ಯ ವಿಚಾರಣೆ ವೇಳೆ ಅಲ್ಲಿನ ಸಿಬ್ಬಂದಿಗಳಿಗೂ ಅವಕಾಶ ನೀಡದೆ ನ್ಯಾಯಾಲಯವು ಒಂದೂವರೆ ಗಂಟೆಗಳ ಧೀರ್ಘಾವಧಿ ವಿಚಾರಣೆ ನಡೆಸಿದೆ ಎಂದು ತಿಳಿದುಬಂದಿದೆ.

ಈ ಹಿಂದೆ ಪತಿ ಹತ್ಯೆಯಾದ ನಂತರ ಹೇಳಿಕೆ ನೀಡಿದ್ದ ಕೌಸಲ್ಯ ಅವರು, ದಾಳಿಕೋರರು ನನ್ನ ಎದುರಿಗೆ ಬಂದರೆ ಗುರ್ತಿಸುತ್ತೇನೆಂದು ಹೇಳಿದ್ದರೆಂದು ಪೊಲೀಸರು ಹೇಳಿದ್ದಾರೆ.
ಕೆಲವು ದಿನಗಳ ಹಿಂದಷ್ಟೇ ದಲಿತ ಯುವಕನ ಮೇಲೆ ಹಲ್ಲೆ ನಡೆಸುತ್ತಿರುವ ಸಿಸಿಟಿವಿಯ ದೃಶ್ಯವೊಂದು ಸಾಕಷ್ಟು ಸುದ್ದಿ ಮಾಡಿತ್ತು.

ತಮಿಳುನಾಡಿದ ತಿರುಪ್ಪೊರಿನ ಉದುಮಲೈಪೆಟ್ಟೈಯಲ್ಲಿ ಘಟನೆ ನಡೆದಿತ್ತು. ತನ್ನ ಮಡದಿಯೊಂದಿಗೆ ರಸ್ತೆ ದಾಟುವ ವೇಳೆ ವಾಹನದಲ್ಲಿ ಬಂದಿರುವ ವ್ಯಕ್ತಿಗಳು ನಡುರಸ್ತೆಯಲ್ಲೇ ಅಟ್ಟಾಡಿಸಿಕೊಂಡು ಹಲ್ಲೆ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ನಂತರ ಯುವಕನನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿತ್ತಾದರೂ ಯುವಕ ಸಾವನ್ನಪ್ಪಿದ್ದ ಶಂಕರ್ ಹತ್ಯೆಯಾಗಿದ್ದ ಯುವಕನಾಗಿದ್ದು, ಪೊಲ್ಲಾಚಿಯಲ್ಲಿ ಮೊದಲೇ ವರ್ಷದ ಎಂಜಿನಿಯರಿಂಗ ಓದುತ್ತಿದ್ದ. ಕೌಸಲ್ಯ ಉದಾಮಲ್ ಪೇಟೆಯಲ್ಲ ಬಿಎಸ್ ಸಿ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಯಾಗಿದ್ದಳು. ಕೌಸಲ್ಯ ಮೇಲ್ಜಾತಿಯ ಯುವತಿಯಾಗಿದ್ದು ಅವರ ಕುಟುಂಬಕ್ಕ ಇವರಿಬ್ಬರ ಮದುವೆಗೆ ವಿರೋಧ ವ್ಯಕ್ತಪಡಿಸಿತ್ತು. ಇದರ ನಡುವೆಯೂ ಶಂಕರ್ ಕೌಸಲ್ಯಳನ್ನು ವಿವಾಹವಾಗಿದ್ದ. ಈ ಹಿನ್ನೆಲೆಯಲ್ಲಿ ಕೌಸಲ್ಯ ಸಂಬಂಧಿಕರು ಶಂಕರ್ ಮೇಲೆ ದಾಳಿ ಮಾಡಿದ್ದಾರೆನ್ನಲಾಗಿದೆ.

Write A Comment