ಅಂತರಾಷ್ಟ್ರೀಯ

ಬೆಲ್ಲದ ಚಹಾ ಆರೋಗ್ಯಕ್ಕೆ ಬೆಸ್ಟ್ ಎನ್ನುತ್ತಿದೆ ಸಂಶೋಧನೆ

Pinterest LinkedIn Tumblr

CXCYTR

ನವದೆಹಲಿ: ಚಹಾ ಯಾರಿಗೆ ತಾನೆ ಗೊತ್ತಿಲ್ಲ? ದಣಿದು ಬಂದಾಗ, ಯಾಕೋ ಸಣ್ಣದಾಗಿ ತಲೆ ನೋವು ನಮ್ಮನ್ನು ಬಾಧಿಸುತ್ತಿದ್ದಾಗ, ಅಥವಾ ಯಾವುದೋ ಒತ್ತಡದಲ್ಲಿದ್ದಾಗ, ಅಥವಾ ನಿದ್ದೆಯ ಮಂಪರು ನಮ್ಮ ಕೆಲಸಕ್ಕೆ ಅಡ್ಡಿ ಮಾಡುತ್ತಿದ್ದರೆ ಆ ಸಮಯದಲ್ಲಿ ಒಂದು ಕಪ್ ಚಹಾ ಸಿಕ್ಕರೆ ಮರುಭೂಮಿಯಲ್ಲಿ ಒಯಾಸಿಸ್ ಸಿಕ್ಕಷ್ಟು ಸಂಭ್ರಮ. ಚಹಾ ಮನುಷ್ಯನ ಜೀವನದ ಸಂಗಾತಿ. ಊಲಾಂಗ್ ಚಹಾ, ಡಾರ್ಜಿಲಿಂಗ್, ಪೆಕೊಯೆ, ಬಿಳಿ ಚಹಾ, ಬೇಬಿ ಚಹಾ ಹೀಗೆ ದಣಿವನ್ನ ನಿವಾರಿಸುವ ಚಹಾದಲ್ಲಿ ಹಲವು ವಿಧಗಳಿವೆ. ಜೊತೆಗ ಇನ್ನಷ್ಟು ರುಚಿಕರ ಮತ್ತು ಸ್ವಾದಿಷ್ಟಗೊಳಿಸಲು ನಿಂಬೆ, ಶುಂಟಿ, ಜೇನು ಹೀಗೆ ಅವರವರಿಗೆ ಇಷ್ಟವಾದ ಅಂಶಗಳನ್ನು ಸೇರಿಸಲಾಗುತ್ತೆ. ಸಾಮಾನ್ಯವಾಗಿ ಚಹಾಕ್ಕೆ ಸಿಹಿಗಾಗಿ ಸಕ್ಕರೆ ಸೇರಿಸಲಾಗುತ್ತೆ. ಆದರೆ ಸಕ್ಕರೆ ಬದಲು ಬೆಲ್ಲವನ್ನು ಸೇರಿಸಿದರೆ ಆರೋಗ್ಯಕ್ಕೆ ಉತ್ತಮ ಎನ್ನುತ್ತೆ ಸಂಶೋಧನೆ.

ಮಲಬದ್ಧತೆಯನ್ನು ತಡೆಯುತ್ತದೆ.
ಒಂದು ಕಪ್ ಚಹಾಕ್ಕೆ ಬೆಲ್ಲ ಸೇರಿಸುವುದರಿಂದ ನಮ್ಮ ದೇಹದಲ್ಲಿ ಜೀರ್ಣಕಾರಿ ಕಿಣ್ವಗಳು ಸಕ್ರಿಯಗೊಳ್ಳುತ್ತವೆ. ಹಾಗು ಬೆಲ್ಲವು ಕರುಳಿನ ಚಲನೆಯನ್ನು ಉತ್ತೇಜಿಸುವ ಮೂಲಕ ಮಲಬದ್ಧತೆ ತಡೆಯುವ ಗುಣವನ್ನು ಹೊಂದಿದೆ.
ರಕ್ತಹೀನತೆಯನ್ನು ತಡೆಯುತ್ತದೆ.
ಬೆಲ್ಲದಲ್ಲಿ ಕಬ್ಬಿಣದ ಅಂಶ ಇರುವುದರಿಂದ ಮತ್ತು ಇದರಲ್ಲಿ ಹಿಮೋಗ್ಲೋಬಿನ್ ಉತ್ಪಾದಿಸುವ ಗುಣ ಇರುವುದರಿಂದ ಿದು ರಕ್ತಹೀನತೆಯನ್ನು ತಡೆಯುತ್ತದೆ.
ಯಕೃತ್ತನ್ನು ಶುದ್ಧೀಕರಿಸುತ್ತದೆ.
ನಮ್ಮ ದೇಹದಲ್ಲಿನ ಎಲ್ಲಾ ಅನಾವಶ್ಯಕ ಜೀವಾಣುಗಳನ್ನು ಹೊರಹಾಕಿ ನಮ್ಮ ಯಕೃತ್ ನ್ನು ಶುದ್ಧಗೊಳಿಸುತ್ತದೆ.
ಜ್ವರದ ವಿರುದ್ದ ಹೋರಾಡುವ ಗುಣ ಹೊಂದಿದೆ

ನಮ್ಮ ದೇಹದಲ್ಲಿ ನೀರನ್ನು ಹಿಡಿದಿಡುವ ಸಾಮರ್ಥ್ಯವನ್ನು ಬೆಲ್ಲ ಹೊಂದಿದೆ. ಮತ್ತು ಕೆಲವು ವೈದ್ಯಕೀಯ ಸಮಸ್ಯೆಗಳನ್ನು ತಕ್ಷಣಕ್ಕೆ ಉಪಶಮನ ಮಾಡಲು ಒಂದು ಕಪ್ ಚಹಾವನ್ನು ಬೆಲ್ಲದೊಂದಿಗೆ ಸೇವಿಸುವುದು ಒಳ್ಳೆಯದು. ಜ್ವರ ಬಂದಾಗ ಈ ರೀತಿ ಚಹಾ ಕುಡಿಯುವ ಮೂಲಕ ಚಿಕಿತ್ಸೆ ನೀಡಬಹುದು. 5. ಪ್ರೀ ಮೆನ್ಸ್ಟ್ರುವಲ್ ಸಿಂಡ್ರೋಮ್ ತಡೆಯುವ ಸಾಮರ್ಥ್ಯ ಹೊಂದಿದೆ.ಋತುಚಕ್ರದ ಸಮಯದಲ್ಲಿನ ಸಮಸ್ಯೆಯನ್ನು ನಿವಾರಿಸುವ ಗುಣವನ್ನು ಬೆಲ್ಲ ಹೊಂದಿದೆ.

Write A Comment