ಕರ್ನಾಟಕ

ನಾಸಾ ಸ್ಪರ್ಧೆಯಲ್ಲಿ ನಗರದ ವಿದ್ಯಾರ್ಥಿನಿ ಪ್ರಥಮ

Pinterest LinkedIn Tumblr

nasaಬೆಂಗಳೂರು,ಮಾ.೧೯-ನಾಸಾ ಸಂಸ್ಥೆಯು ಎರ್ಪಡಿಸಿದ್ದ ಬಾಹ್ಯಾಕಾಶ ವಸಾಹತು(ಸ್ಪೇಸ್ ಸೆಟಲ್‌ಮೆಂಟ್)ಸ್ವರ್ಧೆಯಲ್ಲಿ ನಗರದ ವೈಟ್‌ಫೀಲ್ಡ್‌ನ ನಾರಾಯಣ ಒಲಂಪಿಯಾಡ್ ಶಾಲೆಯ ವಿದ್ಯಾರ್ಥಿನಿ ನಿಧಿ ಮಯಾಲಿಕಾ ಮಂಡಿಸಿದ ಸೈಕತಮ್ ಎಂಬ ಯೋಜನೆಗೆ ಮೊದಲ ಸ್ಥಾನ ದೊರೆತಿದೆ.
ನಾಸಾ ಸಂಸ್ಥೆಯು ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆಸಿದ ಬಾಹ್ಯಾಕಾಶ ವಸಾಹತು ಸ್ಪರ್ಧೆಯಲ್ಲಿ ದೇಶ ವಿದೇಶಗಳ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.ಅದರಲ್ಲಿ ನಿಧಿ ಮಯಾಲಿಕಾ ಮಂಡಿಸಿದ ಸೈಕತಮ್ ಎಂಬ ಯೋಜನೆಗೆ ಮೊದಲ ಸ್ಥಾನ ನೀಡಿದ ನಾಸಾ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬಾಹ್ಯಾಕಾಶ ವಸಾಹತು ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದಕ್ಕಾಗಿ ೬ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ನಿಧಿ ಮಯಾಲಿಕಾಗೆ ಸತತ ಅಭ್ಯಾಸ ನೀಡಲಾಯಿತು ಯೋಜನಾ ಕಾರ್ಯದಲ್ಲಿ ಸಾಕಷ್ಟು ನೆರವನ್ನು ಉಪನ್ಯಾಸಕರು ನೀಡಿದ್ದರು. ನಿಧಿ ಮಯಾಲಿಕಾ ಮಾಡಿದ ಸಾಧನೆಗೆ ನಾರಾಯಣ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕಿ ಡಾ.ಪಿ.ಸಿಂಧೂರ ನಾರಾಯಣ ಹಾಗೂ ಕಾರ್ಯಕಾರಿ ನಿರ್ದೇಶಕ ಕೆ.ಪುನೀತ್ ಅವರು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.

Write A Comment