ಕರ್ನಾಟಕ

ಜವಾಬ್ದಾರಿಯುತ ಮದ್ಯಸೇವನೆ ಪರಿಕಲ್ಪನೆ ಪ್ರಚಾರಕ್ಕೆ 10 ಕೋಟಿ

Pinterest LinkedIn Tumblr

36q5dbbfಬೆಂಗಳೂರು: ಬಜೆಟ್‌ನಲ್ಲಿ ಮದ್ಯ, ಬಿಯರ್ ಮೇಲಿನ ಅಬಕಾರಿ ಸುಂಕ ಹೆಚ್ಚಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮದ್ಯ ಗ್ರಾಹಕರ ಹಿತರಕ್ಷಣೆ ಹಾಗೂ ಮದ್ಯ ಸೇವನೆಯಿಂದಾಗುವ ಪರಿಣಾಮಗಳ ತಡೆಗೆ ‘ಜವಾಬ್ದಾರಿಯುತ ಮದ್ಯಸೇವನೆ ಪರಿಕಲ್ಪನೆ’ ಪ್ರಚಾರಕ್ಕೆ ₹ 10ಕೋಟಿ ಒದಗಿಸಿದ್ದಾರೆ.
ಮದ್ಯದ ಮೇಲಿನ ಅಬಕಾರಿ ಸುಂಕವನ್ನು ಹಾರಿ ಇರುವ ₹ 45ರಿಂದ 50ಕ್ಕೆ ಹಾಗೂ ಬಿಯರ್ ಮೇಲಿನ ಅಬಕಾರಿ ಸುಂಕವನ್ನು ಹಾಲಿ ಇರುವ ₹ 5ರಿಂದ 10ಕ್ಕೆ ಹೆಚ್ಚಿಸುವುದಾಗಿ ಸಿದ್ದರಾಮಯ್ಯ ಪ್ರಸ್ತಾಪಿಸಿದ್ದಾರೆ.
ಮದ್ಯದ ಎಲ್ಲಾ ಸ್ಲಾಬ್‌ಗಳ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಹಾಲಿ ಇರುವ ದರಳ ಮೇಲೆ ಶೇಕಡ 4ರಿಂದ 12ರಷ್ಟು, ಬಿಯರ್ ಮೇಲಿನ ಅಬಕಾರಿ ಸುಂಕವನ್ನು ಶೇ 135ರಿಂದ ಶೇ 150ಕ್ಕೆ ಹೆಚ್ಚಿಸಲು, ಸ್ಪಿರಿಟ್(ಎಥನಾಲ್ ಹೊರತುಪಡಿಸಿ) ರಫ್ತು ಮೇಲೆ ಪ್ರತಿ ಲೀಟರ್‌ಗೆ ₹ 2ರಂತೆ ಆಡಳಿತಾತ್ಮಕ ಶುಲ್ಕವನ್ನು ವಿಧಿಸಲು ಪ್ರಸ್ತಾಪಿಸಿದ್ದು, ಈ ನೀತಿ ಪ್ರಸಕ್ತ ವರ್ಷ ಏಪ್ರಿಲ್ 1ರಿಂದ ಜಾರಿಯಾಗಲಿದೆ ಎಂದು ಅವರು ತಿಳಿಸಿದರು.
ಮದ್ಯ ಸೇವನೆಯಿಂದಾಗುವ ಪರಿಣಾಮಗಳ ತಡೆಗೆ ಉತ್ಪಾದಕ ಸಂಸ್ಥೆಗಳ ಸಹಭಾಗಿತ್ವದಲ್ಲಿ ‘ಜವಾಬ್ದಾರಿಯುತ ಮದ್ಯಸೇವನೆ ಪರಿಕಲ್ಪನೆ’ಯ ವ್ಯಾಪಕ ಪ್ರಚಾರಗೊಳಸಲಾಗುವುದು. ಮದ್ಯ ಸೇವಿಸಿ ವಾಹನ ಚಾಲನೆ, ಅಕ್ರಮ ಮದ್ಯೆ ಸೇವನೆ, ಅಪ್ರಾಪ್ತ ವಯಸ್ಕ ಮಕ್ಕಳ ಮದ್ಯಪಾನ, ಅತಿ ಕುಡಿತಗಳ ವಿರುದ್ಧ ಮತ್ತು ವಿವಿಧ ಮದ್ಯಗಳ ಬಗ್ಗೆ ಪೂರ್ಣ ಮಾಹಿತಿ ಒದಗಿಸಲಾಗುವುದು. ಈ ಕಾರ್ಯಕ್ಕೆ ಸಮ ಸಹಭಾಗಿತ್ವದ ಆಧಾರದಲ್ಲಿ ಸರ್ಕಾರದಿಂದ ₹ 10 ಕೋಟಿ ಒದಗಿಸಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದರು.
ದ್ರಾಕ್ಷಿ ಬೆಳೆಗಾರರ ಹಿತ
ದ್ರಾಕ್ಷಿ ಬೆಳೆಗಾರರ ಕ್ಷೇಮಾಭಿವೃದ್ಧಿ ಮತ್ತು ದ್ರಾಕ್ಷಾರಸ ಉತ್ಪಾದನೆ ಮತ್ತು ಮಾರುಕಟ್ಟೆ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಸೂಕ್ತ ಪ್ರೋತ್ಸಾಹ ನೀಡಲು ಅಬಕಾರಿ ನಿಯಮಗಳಿಗೆ ತಿದ್ದುಪಡಿ ತಂದು ‘ಫೋರ್ಟಿಫೈಡ್ ವೈನ್’ (Fortified Wine) ಉತ್ಪಾದಿಸುವ ನ್ಯೂಟ್ರಲ್ ಸ್ಪಿರಟ್ ಅಥವಾ ರಕ್ಟಿಫೈಡ್ ಸ್ಪಿರಿಟ್ ಬಳಸುವ ಬದಲಿಗೆ ಗ್ರೇಪ್ ಸ್ಪಿರಿಟ್ ಅಥವಾ ಪರಿಶುದ್ಧ ಹಣ್ಣಿನ ಬ್ರಾಂಡಿಯನ್ನು ಮಾತ್ರ ಬಳಸಿ ‘ಫೋರ್ಟಿಫಿಕೇಷನ್’ (Fortification) ಮಾಡಲು ಅವಕಾಶ ಕಲ್ಪಿಸಲಾಗಿದೆ.

Write A Comment