ಅಂತರಾಷ್ಟ್ರೀಯ

ನಿಷೇಧ ತೆರವಿನ ಬೆನ್ನಲ್ಲೆ ದುಬೈಗೆ ಹಾರಿದ ಮುಷರಫ್

Pinterest LinkedIn Tumblr

Musharrafಕರಾಚಿ/ದುಬೈ (ಪಿಟಿಐ): ವಿದೇಶಿ ಪ್ರಯಾಣದ ಮೇಲಿನ ನಿಷೇದವನ್ನು ಸರ್ಕಾರ ಹಿಂಪಡೆದ ಗಂಟೆಗಳಲ್ಲಿಯೇ ಪಾಕಿಸ್ತಾನ ಮಾಜಿ ಸೇನಾಡಳಿತಗಾರ ಪರ್ವೇಜ್ ಮುಷರಫ್ ದುಬೈಗೆ ತೆರಳಿದ್ದಾರೆ.
ದೇಶದ್ರೋಹ ಸೇರಿದಂತೆ ಹಲವು ಪ್ರಕರಣಗಳನ್ನು ಎದುರಿಸುತ್ತಿರುವ ಮುಷರಫ್ ಅವರ ವಿದೇಶಿ ಪ್ರವಾಸ ಮೇಲಿನ ನಿರ್ಬಂಧವನ್ನು ಸುಪ್ರೀಂ ಕೋರ್ಟ್‌ ಸೂಚನೆಯಂತೆ ಸರ್ಕಾರ ತೆರವು ಗೊಳಿಸಿತ್ತು.
ಬೆನ್ನುಹುರಿ ನೋವಿನಿಂದ ಬಳಲುತ್ತಿರುವ ಮುಷರಫ್‌, ವೈದ್ಯಕೀಯ ಚಿಕಿತ್ಸೆಗಾಗಿ ದುಬೈಗೆ ಪ್ರಯಾಣಿಸಿದ್ದಾರೆ.
‘ನಾನೊಬ್ಬ ಕಮಾಂಡೋ. ಸ್ವದೇಶವನ್ನು ಪ್ರೀತಿಸುತ್ತೇನೆ. ಕೆಲವು ವಾರ ಅಥವಾ ತಿಂಗಳುಗಳ ಬಳಿಕ ಮತ್ತೆ ಮರಳುತ್ತೇನೆ’ ಎಂದು ಮುಷರಫ್ ಹೇಳಿದ್ದಾರೆ.
ತಮ್ಮ ವಿರುದ್ಧದ ಎಲ್ಲಾ ಪ್ರಕರಣಗಳನ್ನು ಎದುರಿಸುವಾಗಿ ಹೇಳಿರುವ ಅವರು, ದೇಶಕ್ಕೆ ವಾಪಸ್ಸಾದ ಬಳಿಕ ರಾಜಕಾರಣದಲ್ಲಿ ಸಕ್ರೀಯವಾಗಿ ಭಾಗವಹಿಸುವುದಾಗಿ ತಿಳಿಸಿದ್ದಾರೆ.
‘ತೀವ್ರ ಜಟಿಲಗೊಂಡಿರುವ ದಶಕದಷ್ಟು ಹಳೆಯದಾದ ಖಾಯಿಲೆಗೆ ವೈದಕೀಯ ಚಿಕಿತ್ಸೆ’ ಪಡೆಯಲು ವಿದೇಶಕ್ಕೆ ತೆರಳುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
ಕರಾಚಿಯಿಂದ ಶುಕ್ರವಾರ ನಸುಕಿನ 3.55ಕ್ಕೆ ತೆರಳಿದ ಎಮಿರೇಟ್ಸ್‌ ವಿಮಾನದಲ್ಲಿ ದುಬೈಗೆ ಪ್ರಯಾಣಿಸಿದ ಮುಷರಫ್‌, ನಸುಕಿನ 5 ಗಂಟೆಯ ವೇಳೆಗೆ ತಲುಪಿದ್ದಾರೆ.
‘ವೈದ್ಯಕೀಯ ಚಿಕಿತ್ಸೆಯ ಬಳಿಕ ಪಾಕಿಸ್ತಾನಕ್ಕೆ ಮರಳಲು ಮುಷರಫ್‌ ಉದ್ದೇಶಿಸಿದ್ದಾರೆ’ ಎಂದು ಮುಷರಫ್ ನೇತೃತ್ವದ ಆಲ್‌ ಪಾಕಿಸ್ತಾನ ಮುಸ್ಲಿಂ ಲೀಗ್‌(ಎಪಿಎಂಎಲ್) ಪಕ್ಷದ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಅಮ್ಜಾದ್ ತಿಳಿಸಿದ್ದಾರೆ.

Write A Comment