ರಾಷ್ಟ್ರೀಯ

ಭ್ರಷ್ಟಾಚಾರ ನಿರ್ಮೂಲನೆಗೆ ‘ಸೊನ್ನೆ ರುಪಾಯಿ’!

Pinterest LinkedIn Tumblr

zero-rupee-note-e1458302917641ದೆಹಲಿ: ದೇಶದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು,ಇದರ ನಿರ್ಮೂಲನೆಗೆಂದೇ ಸರಕಾರೇತರ ಸಂಸ್ಥೆಯೊಂದು ಪ್ರಬಲವಾದ ಅಸ್ತ್ರವೊಂದನ್ನು ಜಾರಿಗೊಳಿಸಿದೆ.

ಹೌದು ಭ್ರಷ್ಟಾಚಾರ ನಾಶಮಾಡುವ ಸಲುವಾಗಿ ಫಿಪ್ತ್ ಪಿಲ್ಲರ್ ಎಂಬ ಸರಕಾರೇತರ ಸಂಸ್ಥೆಯೊಂದು ‘ಸೊನ್ನೆ ರುಪಾಯಿ’ ನೋಟು ಮುದ್ರಿಸಿದೆ.

ಈ ನೋಟು ಆರ್‌ಬಿಐನಿಂದ ಮುದ್ರಿತವಾದ ನೋಟಲ್ಲ. ದೇಶದಲ್ಲಿ ಭ್ರಷ್ಟಾಚಾರ ಹೆಚ್ಚುತ್ತಿರುವುದರಿಂದ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತಿರುವ ಫಿಪ್ತ್ ಪಿಲ್ಲರ್(5th pillar) ಹೊಸ ಉಪಾಯವನ್ನು ಜಾರಿಗೆ ತಂದಿದೆ.

ಸರ್ಕಾರಿ ಕಚೇರಿಗಳಲ್ಲಿ ಉದ್ಯೋಗಿಗಳು ಲಂಚ ಕೇಳಿದರೆ ಜನತೆ ಈ ಸೊನ್ನೆ ರೂಪಾಯಿ ನೋಟುಗಳನ್ನು ಅವರಿಗೆ ಲಂಚವಾಗಿ ಕೊಡಬೇಕು. ಆ ಮೂಲಕ ಲಂಚದ ವಿರುದ್ಧ ಹೋರಾಟ ಮಾಡಬೇಕು ಎನ್ನುತ್ತಿದೆ ಈ ಸರಕಾರೇತರ ಸಂಸ್ಥೆ.

ಫಿಪ್ತ್ ಪಿಲ್ಲರ್ ಸಂಸ್ಥೆಯ ಸಂಸ್ಥಾಪಕ ವಿಜಯ್ ಆನಂದ್, ದೇಶದ ಮೂಲೆ ಮೂಲೆಯಲ್ಲಿಯೂ ಭ್ರಷ್ಟಾಚಾರ ನಡೆಯುತ್ತಿದೆ. ಇದರ ನಿರ್ಮೂಲನೆಗೆ ಹೋರಾಟ ನಡೆಯುತ್ತಲೇ ಇದೆ. ಲಂಚ ಪಡೆದು ಪೊಲೀಸರ ಕೈಗೆ ಸಿಕ್ಕಿಬಿದ್ದರೆ ಜೈಲು ಶಿಕ್ಷೆ ಎದುರಿಸಬೇಕಾಗುತ್ತದೆ. ಆದರೂ ಲಂಚ ಪಡೆಯುವ ಮಂದಿ ಹೆಚ್ಚುತ್ತಲೇ ಇದ್ದಾರೆ. ಈ ಹಿನ್ನೆಲೆಯಲ್ಲಿ ಇನ್ನು ಮುಂದೆ ಲಂಚ ಕೇಳುವ ಅಧಿಕಾರಿಗಳಿಗೆ ಶೂನ್ಯ ಮುಖಬೆಲೆಯ ನೋಟನ್ನು ನೀಡುವ ಮೂಲಕ ಭ್ರಷ್ಟಾಚಾರದ ಬಗ್ಗೆ ಜಾಗೃತಿ ಮೂಡಿಸುವಂತಾಗಬೇಕು ಎಂದು ಹೇಳಿದ್ದಾರೆ.

ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತಿರುವ ಈ ಸಂಸ್ಥೆಯ ಹೆಚ್ಚಿನ ಮಾಹಿತಿ ತಿಳಿಯಬೇಕೆಂದರೆ www.5thpillar.org ವೆಬ್‌ಸೈಟ್‌ ಗೆ ಕ್ಲಿಕ್ ಮಾಡಿ.

Write A Comment