ಕರ್ನಾಟಕ

ಬಜೆಟ್: ಪೆಟ್ರೋಲ್ ₹ 1.89, ಡೀಸೆಲ್ 98 ಪೈಸೆ ತುಟ್ಟಿ

Pinterest LinkedIn Tumblr

petrol_riseಬೆಂಗಳೂರು: ಬಜೆಟ್‌ನಲ್ಲಿ ಸಂಪನ್ಮೂಲ ಕ್ರೋಡೀಕರಣಕ್ಕೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ದರ ಹೆಚ್ಚಿಸಲಾಗಿದ್ದು, ಪೆಟ್ರೋಲ್ ₹ 1.89, ಡೀಸೆಲ್ 98 ಪೈಸೆ ಹೆಚ್ಚಳವಾಗಿದೆ.
ಸಂಪನ್ಮೂಲಗಳನ್ನು ಗಮನದಲ್ಲಿರಿಸಿಕೊಂಡು ರಾಜ್ಯದ ಅಭಿವೃದ್ಧಿ ಅವಶ್ಯಕತೆಗಾಗಿ ಪೆಟ್ರೋಲ್ ಮೇಲಿನ ತೆರಿಗೆ ದರ ಶೇಕಡಾ 26ರಿಂದ ಶೇ. 30ಕ್ಕೆ, ಡೀಸೆಲ್ ಮೇಲಿನ ತೆರಿಗೆ ದರ ಶೇ 16.65ರಿಂದ 19ಕ್ಕೆ ಹೆಚ್ಚಿಸಲು ಪ್ರಸ್ತಾಪಿಸಲಾಗಿದೆ. ಇದರಿಂದಾಗಿ, ಪೆಟ್ರೋಲ್ ಬೆಲೆ ₹ 1.89ರಷ್ಟು, ಡೀಸೆಲ್ ಬೆಲೆ 98ಪೈಸೆಯಷ್ಟು ಅಲ್ಪ ಪ್ರಮಾಣದ ಹೆಚ್ಚಳವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಕಟಿಸಿದರು.

Write A Comment