ಕರ್ನಾಟಕ

ಶಿಕ್ಷಣಕ್ಕೆ ₹22 ಸಾವಿರ ಕೋಟಿ, ಕ್ರೀಡೆಗೆ ₹170 ಕೋಟಿ

Pinterest LinkedIn Tumblr

ffffffffffffhhhhhಬೆಂಗಳೂರು: 2016–17ನೇ ಸಾಲಿನ ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಆದ್ಯತೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಕ್ರೀಡಾ ಕ್ಷೇತ್ರದತ್ತಲೂ ಗಮನ ಹರಿಸಿದ್ದಾರೆ.
ನೂತನ ಆರ್ಥಿಕ ವರ್ಷದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ₹ 22,024 ಕೋಟಿ ಮೀಸಲು ಇರಿಸಿರುವ ಸರ್ಕಾರ, ಕ್ರೀಡಾ ಕ್ಷೇತ್ರಕ್ಕೆ ₹ 170 ಕೋಟಿ ತೆಗೆದಿರಿಸಿದೆ.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ:
ಆರಂಭಿಕ ಶಿಕ್ಷಣಕ್ಕೆ ಒತ್ತು ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ಕ್ಷೇತ್ರಕ್ಕೆ ₹17,373 ಕೋಟಿ ಹಣ ಮೀಸಲು ಇರಿಸಿದ್ದಾರೆ.
ಐದು ಹೊಸ ಯೋಜನೆಗಳ ಮೂಲಕ ಪ್ರಾಥಮಿಕ ಹಾಗೂ ಪೌಡ ಶಿಕ್ಷಣಕ್ಕೆ ಚೈತನ್ಯ ತುಂಬಲು ಯತ್ನಿಸಿರುವ ಸರ್ಕಾರ, ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಯೋಗ ಶಿಕ್ಷಣ ಪ್ರೋತ್ಸಾಹಕ್ಕೆ ನಿರ್ಧರಿಸಿದೆ.
ಪರಿಣಾಮಕಾರಿ ಎನಿಸಿರುವ ‘ನಲಿ ಕಲಿ’ ವಿಧಾನ ಪುನರ್‌ರೂಪಿಸಿ, ಸಮಗ್ರ ಜಾರಿಗೆ ಹಾಗೂ ಗಣಿತ ವಿಷಯವನ್ನು ವಿದ್ಯಾರ್ಥಿ ಸ್ನೇಹಿಯಾಗಿಸುವ ನಿಟ್ಟಿನಲ್ಲಿ ಚಟುವಟಿಕೆ ಆಧಾರಿತ ಕಲಿಕೆಯನ್ನು 4 ಹಾಗೂ 5ನೇ ತರಗತಿಗೂ ವಿಸ್ತರಿಸಲು ನಿರ್ಧಾರಿಸಿದೆ.
ಅಲ್ಲದೇ, ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ‘ಐಟಿ@ಸ್ಕೂಲ್ಸ್ ಇನ್‌ ಕರ್ನಾಟಕ’ ಕಾರ್ಯಕ್ರಮದ ಮೂಲಕ ಡಿಜಿಟಲ್‌ ಸಾಕ್ಷರತೆ ಒದಗಿಸಲು ಚಿಂತನೆ ನಡೆಸಿದೆ.
ಉನ್ನತ ಶಿಕ್ಷಣ:
ಉನ್ನತ ಶಿಕ್ಷಣಕ್ಕೂ ಆದ್ಯತೆ ಕೊಟ್ಟಿರುವ ಸರ್ಕಾರ, ₹ 4,651 ಕೋಟಿ ಮೀಸಲಿಟ್ಟಿದೆ.
ಮಾನವ ಸಂಪನ್ಮೂಲ ಕೇಂದ್ರಿತ ಪ್ರಗತಿದಾಯಕ ಕರ್ನಾಟಕ ಶಿಕ್ಷಣ ನೀತಿ ಜಾರಿಗೆ ಹಾಗೂ ಐಟಿ, ದೂರ ಸಂಪರ್ಕ, ರೀಟೇಲ್‌ ಸೇರಿದಂತೆ ಉದ್ಯೋಗ ಆಧಾರಿತ ಕೋರ್ಸ್‌ಗಳ ಪ್ರಾರಂಭಕ್ಕೆ ಒತ್ತು ನೀಡಲು ಮುಂದಾಗಿದೆ.
ಸರ್ಕಾರಿ ಕಾಲೇಜುಗಳು ನ್ಯಾಕ್‌ ಮಾನ್ಯತೆ ಪಡೆದು ಯು.ಜಿ.ಸಿ ಅನುದಾನ ಗಿಟ್ಟಿಸುವಂತಾಗಲು ₹10 ಕೋಟಿ ಅನುದಾನವನ್ನು ಸರ್ಕಾರ ಒಗದಿಸಲಿದೆ.
ಬೆಂಗಳೂರು ವಿವಿ, ತುಮಕೂರು ವಿವಿ, ಬೆಳಗಾವಿ ವಿಟಿಯು ಕೇಂದ್ರಗಳಲ್ಲಿ ಶ್ರೇಷ್ಠಾತಾ ಕೇಂದ್ರಗಳ ಸ್ಥಾಪನೆ; ₹10 ಕೋಟಿ ಮೀಸಲು ಇಟ್ಟಿದ್ದು, ಜಾನಪದ ವಿ.ವಿ ಕಾರ್ಯ ವ್ಯಾಪ್ತಿಯಡಿ ₹ 2 ಕೊಟಿ ವೆಚ್ಚದಲ್ಲಿ ‘ಕರ್ನಾಟಕ ಪಾರಂಪರಿಕ ಕೇಂದ್ರ’ ಸ್ಥಾಪಿಸಲಿದೆ.
ಬೀದರ್‌ನಲ್ಲಿ ಸರ್ಕಾರಿ ಎಂಜನಿಯರಿಂಗ್ ಕಾಲೇಜು ತೆರೆಯಲು ನಿರ್ಧರಿಸಿರುವ ಸರ್ಕಾರ, ಧಾರವಾಡದ ಕರ್ನಾಟಕ ವಿವಿಯಲ್ಲಿ ₹2 ಕೋಟಿ ವೆಚ್ಚದಲ್ಲಿ ಎಂ.ಎಂ.ಕಲಬುರ್ಗಿ ಸಂಶೋಧನಾ ಕೇಂದ್ರ ಸ್ಥಾಪನೆ ಹಾಗೂ ಕಲಬುರ್ಗಿ ಹೆಸರಿನಲ್ಲಿ ಸಂಶೋಧನಾ ಸಾಹಿತ್ಯಕ್ಕಾಗಿ ಪ್ರತಿ ಪ್ರಶಸ್ತಿ ನೀಡಲು ಮುಂದಾಗಿದೆ.
ಕ್ರೀಡೆ:
2016–17ನೇ ಸಾಲಿಗೆ ಈ ಕ್ಷೇತ್ರಕ್ಕೆ ಒಟ್ಟು ₹ 170 ಕೋಟಿಗಳಷ್ಟು ಅಲ್ಪ ಮೊತ್ತ ತೆಗೆದಿರಿಸಲಾಗಿದೆ.
ಪ್ರೊ ಕಬಡ್ಡಿ ಮೂಲಕ ಸದ್ದು ಮಾಡಿರುವ ದೇಸಿ ಕ್ರೀಡೆ ಕಬಡ್ಡಿಗೆ ವಿಶೇಷ ಒತ್ತು ನೀಡುವ ನಿಟ್ಟಿನಲ್ಲಿ ಪ್ರತಿ ಜಿಲ್ಲೆಯಲ್ಲಿ ಎರಡು ಕಬಡ್ಡಿ ಮ್ಯಾಟ್‌ಗಳನ್ನು ಒದಗಿಸಲಿದೆ. ಇದಕ್ಕಾಗಿ ₹3.60 ಕೋಟಿ ಮೀಸಲಿಡಲಾಗಿದೆ.
ಇನ್ನು, ಸಾಹಸ ಕ್ರೀಡೆ ಪ್ರೋತ್ಸಾಹಿಸಲು ಮುಂದಾಗಿರುವ ಸರ್ಕಾರ, 6 ಕೋಟಿ ರೂಪಾಯಿ ವೆಚ್ಚದಲ್ಲಿ ಕರಾವಳಿ ಪ್ರದೇಶಗಳಲ್ಲಿ ಜಂಗಲ್‌ ಲಾಡ್ಜಸ್‌ ಅಂಡ್‌ ರೆಸಾರ್ಟ್ಸ್‌ ಸಹಯೋಗದಲ್ಲಿ ಜಲ ಸಾಹಸ ಕ್ರೀಡಾ ಕೇಂದ್ರಗಳ ಸ್ಥಾಪನೆಗೆ ನಿರ್ಧಾರ.
ಗ್ರಾಮೀಣ ದೇಸಿ ಕ್ರೀಡೆ ಕುಸ್ತಿ ಪೋಷಣೆ ನಿಟ್ಟಿನಲ್ಲಿ ರಾಜ್ಯದ 50 ಗರಡಿ ಮನೆಗಳಿಗೆ ತಲಾ 5 ಲಕ್ಷ ರೂಪಾಯಿ ಅನುದಾನ ಮುಂದುವರಿಕೆ ಮುಂದುವರೆಸಲು ನಿರ್ಧರಿಸುವ ಸರ್ಕಾರ, ಇದಕ್ಕಾಗಿ 2.5 ಕೋಟಿ ರೂಪಾಯಿ ಮೀಸಲು ಇಟ್ಟಿದೆ.
ಅರ್ಜುನ ಪ್ರಶಸ್ತಿ, ದ್ರೋಣಾಚಾರ್ಯ ಪ್ರಶಸ್ತಿ, ರಾಜೀವ್ ಖೇಲ್ ರತ್ನ ಪ್ರಶಸ್ತಿ ಪುರಸ್ಕೃತ ಕ್ರೀಡಾ ಸಾಧಕರಿಗೆ ಕೆಎಸ್‌ಆರ್‌ಟಿಸಿ ಬಸ್ಸುಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲು ಸರ್ಕಾರ ನಿರ್ಧರಿಸಿದೆ.
ಅಂತಿಮವಾಗಿ ರಾಜ್ಯದ ಕ್ರೀಡಾ ಹಾಸ್ಟೇಲ್‌ಗಳ ಪೈಕಿ ಆಯ್ದ ಕೆಲವನ್ನು 6 ಕ್ರೀಡೆಗಳಿಗೆ ಮೀಸಲಿಟ್ಟು ಕ್ರೀಡಾ ಅಕಾಡೆಮಿಗಳಾಗಿ ಪರಿವರ್ತಿಸಲು ನಿರ್ಧರಿಸಿದೆ.

Write A Comment