ಕರ್ನಾಟಕ

ರಾಜ್ಯ ಬಜೆಟ್; ಯಾವುದು ದುಬಾರಿ? ಯಾವುದು ಇಳಿಕೆ?

Pinterest LinkedIn Tumblr

CM

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ 2016-17ನೇ ಸಾಲಿನ ಬಜೆಟ್ ಅನ್ನು ಶುಕ್ರವಾರ ವಿಧಾನಸೌಧದಲ್ಲಿ ಮಂಡಿಸಿದ್ದು, ಯಾವುದು ದುಬಾರಿ, ಯಾವುದು ಇಳಿಕೆ ಎಂಬ ವಿವರ ಇಲ್ಲಿದೆ.

ದುಬಾರಿ ಯಾವುದು?
ಡಿಟಿಎಚ್ ಸೇವೆ (ಶೇ.6ರಿಂದ ಶೇ.10ರಷ್ಟು ತೆರಿಗೆ ಏರಿಕೆ)
ಮನರಂಜನೆ ತೆರಿಗೆ ಶೇ.6ರಷ್ಟು ಏರಿಕೆ
ರಪ್ತು ಸ್ಪಿರಿಟ್ ಮೇಲೆ ರು.2 ಹೆಚ್ಚಳ, ಆಮದಾಗುವ ಸ್ಪಿರಿಟ್ ಲೀಟರ್ ಗೆ ರು.1 ಹೆಚ್ಚಳ
ವಿಶೇಷ ಪರವಾನಗಿಯ ಲಕ್ಸುರಿ ವಾಹನಗಳ ತೆರಿಗೆ ಏರಿಕೆ. 1000 ಸಾವಿರದಿಂದ 1,500ಕ್ಕೆ ಏರಿಕೆ.
ಮದ್ಯ ಮಾರಾಟ ಶುಲ್ಕ ಶೇ.25ರಷ್ಟು ಹೆಚ್ಚಳ
ಬಿಯರ್ ಮೇಲಿನ ಅಬಕಾರಿ ಸುಂಕ ರು.5ರಿಂದ ರು.10ಕ್ಕೆ ಏರಿಕೆ. ರಫ್ತು ಸ್ಪಿರಿಟ್ ಮೇಲೆ ರು.2 ಹೆಚ್ಚಳ.
ಮಧ್ಯದ ಅಬಕಾರಿ ಸುಂಕ ಹೆಚ್ಚಳ, ಮದ್ಯದಂಗಡಿ ಲೈಸೆನ್ಸ್ ದರ ಹೆಚ್ಚಳ

ಇಳಿಕೆ ಯಾವುದು?
ಸೆಟ್ ಟಾಪ್ ಬಾಕ್ಸ್
ಹತ್ತಿ
ಎಲ್ ಇಡಿ ಬಲ್ಪ್
ವೈದ್ಯಕೀಯ ಉಪಕರಣ
ಅಡಲ್ಟ್ ಡೈಪರ್
ಹಸ್ತ ಚಾಲಿತ ರಬ್ಬರ್ ಯಂತ್ರ
ಕಾಗದ ಉತ್ಪನ್ನಗಳ ಮೇಲಿನ ತೆರಿಗೆ ಇಳಿಕೆ
ಹೆಲ್ಮೆಟ್, ಮಲ್ಟಿ ಮೀಡಿಯಾ ಸ್ಪೀಕರ್ ಗಳ ತೆರಿಗೆ ಇಳಿಕೆ
ಚಟ್ನಿ ಪುಡಿ ಮೇಲಿನ ತೆರಿಗೆ ಶೇ.14.5ರಿಂದ ಶೇ.5.5ಕ್ಕೆ ಇಳಿಕೆ
ತೋಟದ ಬೆಳೆಗಳ ಮೇಲಿನ ಕೃಷಿ ವರಮಾನ ತೆರಿಗೆ ಇಳಿಕೆಗೆ ಕ್ರಮ
ವಿದ್ಯುತ್ ಚಾಲಿತ ವಾಹನಕ್ಕೆ ಸಂಪೂರ್ಣ ತೆರಿಗೆ ವಿನಾಯಿತಿ

Write A Comment